ಮೌನ
ವಾಸುದೇವ ನಾಡಿಗ್

ಹಾಡುಹಗಲೇ ಮಾತ ಸಂತೆಯಲಿ
ನೇಣಿಗೆ ಅಮಾಯಕ ಮನುಷ್ಯ
ಜನಜಂಗುಳಿಯ ಮಧ್ಯೆ ಅಳುವ ಕಂದ
ಹೆಸರಿಸಲಾಗದ ಸಂಬಂಧ
ಕೊಂಬೆಯೊಲ್ಲದ ಉಯ್ಯಾಲೆ
ಹಗ್ಗದ ವೇಷ ತೊಟ್ಟ ಹುಲ್ಲು
ಮಗ್ಗವ ನಲುಗಿಸಿದ ಗಂಟು
ಎಳೆಗಳಲಿ ಸಿಕ್ಕಿ ನಲುಗಿದ ವಿನ್ಯಾಸ
ಗುರಿ ತಲುಪದ ಕುದುರೆ
ಗರಿಗಳನ್ನು ಮಾರಿಕೊಂಡ ಹಕ್ಕಿ
ಹೆಸರಿಲ್ಲದವರು ಕಟ್ಟಿದ ಸ್ಮಾರಕ
ಗೋಡೆಗಳ ನಡುವೆ ಹುಸಿ ಪ್ರೀತಿ
ನಿರ್ವಾತದಲ್ಲಿ ಬಿತ್ತಿದ ಬೀಜಗಳು
ಅಕ್ಕರೆ ದಕ್ಕದ ಆಳ ಹೃದಯ
ತುಟಿಯೀಚೆ ಬಾರದ ಬಯಕೆ
ಮೀಟುವವರಿಲ್ಲದ ಮೂಲೆ ವೀಣೆ
ಎಣ್ಣೆ ತೀರಿದ ಬತ್ತಿಯ ಕಮಟು
ಉದುರಿ ಬೀಳುವ ಕಣ್ಣ ತಾರೆ
ಕಟು ವಾಸ್ತವಕೆ ಸೋತ ಕನಸು
ಕೈಚಾಚಿಗೆ ಎಟುಕದ ಪ್ರೇಮ
ಬೀದಿಯಲ್ಲಿ ಉರುಳಿದ ಜೀವ
ತನಗಾಗಿ ಹರಿಯದ ನದಿ
ಹೆಸರು ಹೇಳಿಕೊಳ್ಳದ ಎದೆಯುಸಿರು
ತುಳಿಸಿಕೊಳ್ಳುವ ಹುಲ್ಲು ನೆಲ
ಬೆಟ್ಟಕ್ಕೆ ಚಳಿ ಬಯಲಿಗೆ ನಾಚಿಕೆ
ನಿಷ್ಕರುಣಿ ಕಾಲ ಈಗ ಮೌನಕೆ ರುಣಿ






Chennagide..
ಸಮಾಜದ ವಾಸ್ತವ ಸಂಗತಿಯ ನೋವು.ಸಮುದಾಯದಲ್ಲೆ ಒಂದೆಡೆ
ಜನ ನಾನು ನನ್ನದೆನ್ನುವ ಸ್ವಾರ್ಥ ಆಶ್ರಯ ವಿಲ್ಲದೆ ನಲುಗುತ್ತಿದ್ದರು ಕಂಡು ಕಾಣದ ಹಾಗೆ
ಜಾಡಿಸಿಕೊಂಡು ನಿಷ್ಕರುಣಿ ಮನಸುಗಳಿಗೆ ಈ ಕವನ ಅದ್ಬುತ.ಸಮಾಜದ ವಾಸ್ತವ ಸಂಗತಿಯ ಅನಾವರಣ
ಗರಿಗಳನ್ನು ಮಾರಿಕೊಂಡು ಹಕ್ಕಿಯ ಪರಿಸ್ಥಿತಿ ಊಹಿಸಲಾಸಾಧ್ಯ.ಹಾಗೆ ಜನಜಂಗುಳಿಯ ಮದ್ಯ ಯಾರೋದೊ ತೆವಲಿಗೆ
ಜನಿಸಿ ಅದರ ಆಕ್ರಂದನ.ಹೀಗೆ ಕವನ ಅರ್ಥಪೂರ್ಣವಾದ ಮಜಲುಗಳನ್ನು ಹುಡುಕುತ್ತಾ ಹೋಗಿದೆ ಕವನ ಸೂಪರ್ ಸರ್.
oh!prakatisida avadhi balhagakke gratitudes
ನಿಮ್ಮ ಕವನದ ಶೀರ್ಷಿಕೆ ಚೆನ್ನಾಗಿದೆ. ಕವನವೂ.
ಕೊನೆಯ ಎರಡು ಸಾಲುಗಳು ಕವಿತೆಯ ಸಾರವನ್ನು ಬಿಂಬಿಸುತ್ತವೆ ಎಂದೆನಿಸಿತು ಅರ್ಥ ವತ್ತಾದ ಕವಿತೆ.
ಅತ್ಯಂತ ಸಮರ್ತ ಅರ್ಥ ಸಂಪನ್ನತೆಯಿಂದ ಕೂಡಿದ ತತ್ವಶಾಸ್ತ್ರ ವರ್ಣಿಸುವ ದಾರ್ಶನಿಕ ತತ್ವಶಾಸ್ತ್ರಜ್ಞರಂತೆ ಗಳಿಸಿರುವ ಕವನ!
ವಿಜಯಶೀಲ.
nice very nice poem..
modalu udayavani yali odida nenapu chennagide monne kare madidde heegiddiri call madi
super