ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬುಲ್ ಬುಲ್' ಮಾತಾಡಲಿ-ಬಿಡಲಿ, spectators will rejoice it!

ವಿನಯ್ ಭರದ್ವಾಜ

‘ಬುಲ್ ಬುಲ್ ಮಾತಾಡಕ್ಕಿಲ್ವಾ…?’ ಎಂಬುದಕ್ಕೆ ಪುನಃ ಅಫಿಶಿಯಲ್ ಚಾಲನೆ ಸಿಕ್ಕಂತಾಗಿದೆ. ಒಂದೊಳ್ಳೆ ಚಿತ್ರದ ಫೇಮಸ್ ಡೈಲಾಗ್, ಮತ್ತೊಂದು ಚಿತ್ರದ ಶೀರ್ಷಿಕೆಯಾಗಬಹುದು, ಅದರ ಹಾಡೂ ಆಗಬಹುದು ಹಾಗು ಮನೊರಂಜಿಸಬಹುದು ಎಂದರೆ ವೈ ನಾಟ್…?! ದರ್ಶನ್ ನ ಚಿತ್ರಗಳೆಂದರೆ ಮೂಗು ಮುರಿಯುತ್ತಿದ್ದವನಿಗೆ, ನಮ್ಮವಳೇ ಆದ ಗಿಣಿ ಮೂಗಿನ, ಗುಳಿ ಕೆನ್ನೆಯ ಹೊಸ ಹುಡುಗಿಯೊಬ್ಬಳು ಆಕ್ಟ್ ಮಾಡಿದ್ದಾಳೆ ಅನ್ನೋದಕ್ಕಿಂತ ‘ಇನ್ಸ್ಪಿರೇಷನ್ನು’ ಏನಿರಬೇಕು ಚಿತ್ರ ನೋಡೋದಕ್ಕೆ?! ಕಥೆ ಪಕ್ಕದ ಮನೆದಾದ್ರೂ, ‘ಅಯ್ಯೋ ಇದು ನಮ್ಮನೆ ಕಥೆ ಥರಾ ನೆ ಇದೆ ರೀ…’ ಅಂದ್ಕೊಂಡು ಎದ್ದು ಬರಬಹುದಾದ ಫಿಲಂ ನ ನೋಡಿರದಿದ್ದ್ರೆ, ‘ಬುಲ್ ಬುಲ್… ನೋಡಾಕ್ಕಿಲ್ವಾ…?’ ಎಂದೂ ಕೇಳಬಹುದು. ಒಂದು ಚಿತ್ರ ನಿಜಕ್ಕೂ ಒಂದೊಳ್ಳೆ ಚಿತ್ರ ಎಂದುಕೊಳ್ಳೋದಕ್ಕೆ ಅದೆಷ್ಟು ಕಾನ್ಫಿಡೆನ್ಸು ಬೇಕೋ, ‘ಇದು ಒಂದೊಳ್ಳೆ ಚಿತ್ರ’ ಎಂದು ಹೇಳೋದಕ್ಕೆ ಅದಕ್ಕಿಂತಲೂ ಮಹತ್ತರವಾದ ಕಾನ್ಫಿಡೆನ್ಸ್ ಬೇಕು. ಆ ಮಟ್ಟಿಗೆ ಬುಲ್ ಬುಲ್ ಮಾತಾಡಲಿ-ಬಿಡಲಿ, spectators will rejoice it!

ಒಂದು ಚಿತ್ರಕ್ಕೆ ಕಥೆ-ಚಿತ್ರಕಥೆ ಎಷ್ಟು ಮುಖ್ಯವೋ, “ಕಟ್ಟುಕಥೆಯೂ” ಅಷ್ಟೇ ಮುಖ್ಯ ಅನಿಸುತ್ತದೆ. ಕಟ್ಟು ಕಥೆಯೆಂದರೆ, ನಾಯಕ ಚಿತ್ರದಲ್ಲಿ ಹೇಳುವ ಕಥೆಯೊಳಗಿನ ಸೀರಿಯಲ್ ಸುಳ್ಳಿನ ಕಥೆ! ಹಾಗು ಇದು ಮುಗಿಯುವ ಹೊತ್ತಿಗೆ ಚಿತ್ರದ ಮೊದಲಾರ್ಧವೂ ಮುಗಿದಿರುತ್ತದೆ. ಸೊ, ಅಸಲೀ ಕಥೆ ಶುರುವಾಗೋದೇ ಸೆಕೆಂಡ್ ಹಾಫ್ ನಲ್ಲಿ. ಹಾಗಂತ, ಸೆಕೆಂಡ್ ಹಾಫ್ ಲಿ ಬಂದು ಚಿತ್ರ ನೋಡ್ತೀನಿ ಅಂದ್ರೆ, ‘ಊಹುಂ’, ಸುಳ್ಳೇ-ಸತ್ಯದ ಅಡಿಪಾಯ! ವಾಟ್ ಐ ಮೀನ್ ಈಸ್, ಸುಳ್ಳಿದ್ದರೆ ಸತ್ಯ ಯಾವುದು ಅಂತ ಗೊತ್ತಾಗೊದು. ಇದೊಂದ್ ರೀತಿ, ವಿಲ್ಲನ್ ಇದ್ದ್ರೆ ಹೀರೋ ಯಾರೂ ಅಂತ ಗೊತ್ತಾಗೋ ಹಾಗೆ. ಇಲ್ಲಿ, ವನ್ಸ್ ಅಗೈನ್, ವಿಲ್ಲನ್-ಹೀರೋ ನ ಕೈಯಲ್ಲಿ ‘ವಿಲವಿಲ’ ಅಂತ ಒದ್ದಾಡುತ್ತಾನೆ. ಹೊಡೆದಾಟದ ಅಬ್ಬರಗಳೆಲ್ಲಾ ಅವಾಸ್ತವ ಎಂದು ಗೊತ್ತಿದ್ದರೂ, ಪ್ರೇಕ್ಷಕ, ನಟರ ‘ಪರ್ಫಾರ್ಮೆನ್ಸ್ ಅಪ್ಪ್ರೈಸಲ್’ ಉತ್ತಮಾವಾಗೆ ಮಾಡುತ್ತಾರೆ. ಹಾಗು ಚಿತ್ರದ ಪಾಸಿಟಿವ್ಸ್ ಇರುವುದೇ ಇಂತಹ ಸನ್ನಿವೇಶಗಳಲ್ಲಿ.
ಅಂಬ್ರೀಶು ಈಗ ಡಾಕ್ಟರ್ ಅಂಬ್ರೀಶ್ ಆಗಿರೋದ್ರಿಂದ ಅವರ ಪಾತ್ರದಲ್ಲಿ-ಅಭಿನಯದಲ್ಲಿ ಮತ್ತಷ್ಟು ಪ್ರಬುದ್ಧತೆ ಕಾಣುತ್ತದೆ. ಒಂದು ಲೆಕ್ಕದಲ್ಲಿ, ಅಂಬರೀಶ್ ಹಾಗು ದರ್ಶನ್ ಇಬ್ಬರೂ ‘ಸಮಬಲ’ ರೆ. ಫಾರ್ ಎ ಚೇಂಜ್, ದರ್ಶನ್ರ ಈ ಚಿತ್ರದಲ್ಲಿ ಅವರ ಪ್ರತಿ ಚಿತ್ರಗಳಂತೆ ಅಬ್ಬರದ ಡೈಲಾಗುಗಳಿಲ್ಲ, ಬಟ್ ಹಿತವೆನಿಸುವ ಹಾಸ್ಯ ಮಾತುಗಳಿವೆ. ಬಿ ಇಟ್, ಸಿಹಿ-ಕಹಿ ಚಂದ್ರು, ಟೆನಿಸ್ ಕೃಷ್ಣ, ಅಶೋಕ್, ಸಾಧು ಕೋಕಿಲ, ರಮೇಶ್ ಭಟ್ ಪ್ರತಿಯೊಬ್ಬರೂ ತಮ್ಮದೇ ಕಾರಣಗಳಿಗೆ ಆಪ್ತವೆನಿಸುತ್ತಾರೆ. ಶರಣ್ ಗೆ ಆಗಲೂ ಚಬ್ಭೀಸ್-ಈಗಲೂ ಚಬ್ಬೀಸ್ ಹಾಗು ಒಂದೊಳ್ಳೆ ಕಾಮಿಡಿ ಪೀಸ್! ಥಿಯೇಟರ್ ನಿಂದ ಹೊರ ಬೀಳುವ ಒಳಗೆ ಕನಿಷ್ಠ ಒಂದೆರಡು ಹಾಡಾದರೂ ಗುನುಗಿಕೊಳ್ಳುವ ಲೆವೆಲ್ ಗೆ ಇಷ್ಟವಾಗುತ್ತದೆ. ಅತಿರೂಪವಲ್ಲದೆಯೂ ಅನುರೂಪವೆನಿಸುವ, ಆಳ-ಆಳ ಕಣ್ಣಿನ, ನಕ್ಕರೆ ಸಣ್ಣ ಗುಳಿ ಬೀಳುವ ರಚಿತ ರಾಮ್, ಥೇಟ್ ಪಕ್ಕದ ಮನೆ ಹುಡುಗಿಯೆನಿಸಿ ಅಕ್ಕಪಕ್ಕದ ಮನೆಯ ಹುಡುಗಿಯರನ್ನ ಹೇಗಾದರೂ ಒಂದ್ಸಲ ನೋಡೋಣ ಎನಿಸುತ್ತದೆ. “ಥಟ್ ಅಂತ ಹೇಳಿ… ” ಎಂಬಂತೆ ಈಕೆಯ ಅಭಿನಯ ಥಟ್ ಎಂದು ಹೇಳಿದಂತೆಯೂ,ತುಂಬಾ ಸುಲಲಿತವಾದಂತೆಯೂ, ಸರಾಗವಾಗಿಯೂ ಅಭಿನಯಿಸಿ ಹಿತವೆನಿಸುತ್ತಾಳೆ. ‘ಜಗದಲ್ಲಿರೋ ಹುಚ್ಚರಲ್ಲಿ ನಾನೂ ಒಬ್ಬ…’ ಹಾಡನ್ನು ಕೇವಲ ಸೋನು ನಿಗಮ್ ಗಾಗಿಯೇ ಬರೆದಂತೆ ಭಾಸವಾಗುತ್ತದೆ. ಈ ಎಲ್ಲಾ ಲೆಕ್ಕದಲ್ಲಿ ಕವಿರಾಜ್ ರವರಿಗೆ ಡಬಲ್ ಪಾಟ್ ಆನ್ ಹಿಸ್ ಬ್ಯಾಕ್!

ಇಂಡಿವಿಶುಯಲ್ ಲೆಕ್ಕಗಳು ಏನೇ ಇರಲಿ, ಚಿತ್ರ ಗೆಲ್ಲಬೇಕೆಂದರೆ, ಅದರ ಕಥೆಗೆ ಸಮ್ಮೊಹಿಸುವ ಗುಣ ಇರಬೇಕು. ಆ ಮಟ್ಟಿಗೆ ಇದೊಂದು ಹೊಸ ರೀತಿಯ ಚಿತ್ರ ಹಾಗು ಸಂಪೂರ್ಣ ಕನ್ನಡಿಗರಷ್ಟೇ ಮಾಡಿರುವ ಅಪ್ಪಟ ಕನ್ನಡದ ಚಿತ್ರ. ಗೂಗಲ್ ನಲ್ಲಿ ರಚಿತಾ ರಾಮ್ ಳ ಚರಿತ್ರೆಯನೆಲ್ಲಾ ಹುಡುಕಿ, ಆಕೆಯ ಒಂದಿಪ್ಪತ್ತು ಫೋಟೋಗಳನ್ನು ಕಂಪ್ಯೂಟರ್ ಲಿ ಸೇವ್ ಮಾಡಿಕೊಂಡರೂ, ಇನ್ನೊಮ್ಮೆಯಾದರೂ ಥಿಯೇಟರ್ ಲಿ ಆಕೆಯನ್ನು ಹಾಗು ಒಂದಿಡೀ ಚಿತ್ರವನ್ನು ನೋಡಿಕೊಂಡು ಬರೋಣ ಎಂದುಕೊಂಡರೆ, “ಜಗದಲ್ಲಿರೋ ಹುಚ್ಚರಲ್ಲಿ ನಾನೂ ಒಬ್ಬ…” ಎಂದು ಗುನುಗಿಕೊಳ್ಳುತ್ತೇನೆ…!!

‍ಲೇಖಕರು G

12 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading