ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬುದ್ಧ ಪಾದದ ಮೇಲೆ ಗಿಡವರಳಿ..' – ರೂಪಾ ಹಾಸನ ಕವನ

ಬುದ್ಧ ಪಾದದ ಮೇಲೆ

ರೂಪಾ ಹಾಸನ


ಬುದ್ಧ ಪಾದದ ಮೇಲೆ
ಕಣ್ಣೀರ ಹನಿಯುದುರಿದ್ದಕ್ಕೇ
ಅದು ಮಳೆಯಾಗಿಹೋಯ್ತು.
ಮಿಂದ ತೇವಕ್ಕೇ
ಪಾದವೆಲ್ಲಾ ಮಿಡುಕಿ
ಹಸಿ ಮಣ್ಣಾಗಿಹೋಯ್ತು.
 
ಆ ಹಸಿಮಣ್ಣ ಬುಡಕ್ಕೆ
ಕಣ್ಣುಗಳೂರಿಕೊಂಡಿದ್ದೇ ತಡ
ಮೊಳಕೆಯೊಡೆದುಬಿಡುವುದೇ!?
 
ಬುದ್ಧ ಪಾದದ ಮೇಲೆ
ಗಿಡವರಳಿ
ಟೊಂಗೆ ಟೊಂಗೆಯ ತುಂಬಾ
ಈಗ ಸಹಸ್ರ
ಹೂವಿನ ಕಣ್ಣುಗಳ ತೊನೆದಾಟ
ಅಸಂಖ್ಯ ಬುದ್ಧರ ಉಸಿರಾಟ!

‍ಲೇಖಕರು G

7 May, 2014

5 Comments

  1. mmshaik

    chennagide..madam.

  2. smitha Amrithraj

    chennagide kavite roopa mam-smitha

  3. malathi S

    lovely!!!
    malathi S

  4. narayan raichur

    Bodhi vrukshoodayada pratime chennaagi odamoodide !!

  5. Maluru Venkataswamy

    Budha padakke arpitha kavana pushpa.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading