ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬುದ್ದನಾಗ ಹೊರಟವನಿಗೆ…'

ಬಿದಲೋಟಿ ರಂಗನಾಥ್

ಓದಿದೆ ಕವಿತೆಗಳ
ಬೆಚ್ಚಗಿವೆ ಅನ್ನಿಸಿತು
ಒಂದೊಂದು ಬಾರಿ ಚಳಿಯೂ ಆಯಿತು
ಬಿಸಿಲ ಝಳದ ಕಾವು ತಗುಲಿತು
ಅಲ್ಲೊಂದು ಇಲ್ಲೊಂದು ಪದ್ಯ ಮಳೆಯನ್ನು ತಂತು
ಇನ್ನೇನು ಬೇಕು ಅಂದುಕೊಂಡೆ ಅರೆಕ್ಷಣ!
ಈ ನೊಂದ ಜೀವಕೆ
 
ಬಿಡದೆ ಮತ್ತೆ ಓದಿದೆ
ನೆಲದಲಿ ಹೂ ಹಾದು
ಬೇಲಿಮುಳ್ಳಿನ ನಡಿಗೆ
ಆಕಾ಼ಶ ಮಲ್ಲಿಗೆ
ಇನ್ನುಏನೇನೊ ಬಿಡಿಸಿದ ಚಿತ್ರದಂತೆ
ಕವಿತಗಳು

ನಿರಾಕಾರ ಭಾವಗುಚ್ವದ
ಒಡಲಲಿ
ಚಿತ್ತ ಅದರೊಳಗೆ ಹಲವು
ಬಣ್ಣಗಳ ಹರವು
 
ನವಿಲುಗಳ ನಾಟ್ಯ
ಸಿಂಹ ಘರ್ಜನೆ
ಆನೆ ಘೀಳುಡುವ. ಸದ್ದು
ಕಣ್ಣೀರ ಒರೆಸುವ ಕ್ಯೆಗಳು ಹೀಗೆ
 
ಹಾದಿಯಲಿ ಹೆಜ್ಜೆ ಸವೆಸಿದ ನೆನಪು
ಬಿದ್ದ ಕಲ್ಲೇಟಿನ ಪೆಟ್ಟು
ಬರೆದ ಕವಿತೆಗಳು ಮದ್ದಾಗಿ
ನಿಸ್ತೇಜ
ಜೀವಕ್ಕೆ ಉಸಿರ ತರಲು
ಬುದ್ದನಾಗ ಹೊರಟು
ಬುದ್ದನಾದದ್ದ ಕಂಡೆ
 

‍ಲೇಖಕರು G

12 April, 2015

6 Comments

  1. smitha Amrithraj

    Chennagide

  2. Gubbachchi Sathish

    Chennagide.

  3. vasudeva nadig

    ranganath nimma kaavyada daari spashta vaagutta ive aniside..buddha naaga horatu budddha naadaddu kande emba maatalli antha suuchene galhive..buddha naagodhu beda..buddha nannu anubhavisidare saaku emba niluvu ishta vaayitu..haage kaviyaago munna kaavyavannu anubhavisuvudu mukhya emba thatvikateyannu ee kavana helha horatide..7 ne saalina ‘nondha jeevake’ emba padavannu tegedu omme ee padyavannu odhi..anubhava saarvarturika aagabeku..nadig

  4. mmshaik

    nice poem..

  5. bidaloti ranganath

    ಕವಿತೆ

  6. Hanumanth

    chandada kavite

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading