ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಹನೀಫ್ ಅನುವಾದಿತ ಕವಿತೆ – ಭಯ…

ಮೂಲ : ಖಲೀಲ್ ಗಿಬ್ರಾನ

ಕನ್ನಡಕ್ಕೆ : ಬಿ ಎಂ ಹನೀಫ್

ಸಮುದ್ರವನ್ನು ಸೇರುವ ಮುಂಚೆ
ನದಿ ಭಯದಿಂದ ನಡುಗುತ್ತದಂತೆ!

ಹರಿದು ಬಂದ ದಾರಿಯ ಕಡೆಗೆ
ಅವಳು ತಿರುಗಿ ನೋಡುತ್ತಾಳೆ
ಪರ್ವತಗಳ ಶಿಖರದಿಂದ
ಅರಣ್ಯಗಳು ಮತ್ತು ಹಳ್ಳಿಗಳ
ನಡುವಿಂದ ಹೊರಳಿದ ಸುದೀರ್ಘ ದಾರಿ

ಆಕೆಯ ಎದುರು ಸುವಿಶಾಲ ಸಾಗರ
ಸೇರಿಕೊಳ್ಳಬೇಕಿದೆ
ಶಾಶ್ವತವಾಗಿ ಕಣ್ಮರೆಯಾಗಲು
ಇದರ ಹೊರತಾಗಿ ಬೇರೆ ಏನೂ ಇಲ್ಲ

ಆದರೆ ಬೇರೆ ದಾರಿಯೇ ಇಲ್ಲ
ನದಿ ಹೊರಳಿ ಹೋಗುವಂತಿಲ್ಲ

ಯಾರೂ ಮರಳಿ ಹೋಗಲಾಗದು
ಇರುವಿಕೆಯಲ್ಲಿ ಮರಳಿ
ಹೋಗುವುದು ಅಸಾಧ್ಯ

ಎದುರಿಸಲೇಬೇಕು ನದಿ
ಸಮುದ್ರ ಸೇರುವ ಅಪಾಯವನ್ನು
ಆಗ ಮಾತ್ರ ಭಯ ಇಲ್ಲವಾಗುವುದು
ಆಗಲೇ ನದಿಗೆ ಗೊತ್ತಾಗುವುದು
ಅದು ಸಮುದ್ರದಲ್ಲಿ ಕಣ್ಮರೆ ಆಗುವುದಲ್ಲ
ಸ್ವತಃ ಸಮುದ್ರವೇ ಆಗುವುದು.

‍ಲೇಖಕರು Admin

20 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading