ಅಮ್ಮನ ಕೊಳಲು
ಗುಜರಿ ಅಂಗಡಿ
ಮೊನ್ನೆ ಕೊಳಲು ವಾದನ
ಕಾರ್ಯಕ್ರಮಕ್ಕೆ ಹೋಗಿದ್ದೆ….
ತನ್ನ ಉಸಿರಿಂದ ನಾದವನ್ನು
ಹೊರಹೊಮ್ಮಿಸುವ ಆತನ
ಯತ್ನವ ಕಂಡು
ನನಗೆ ನನ್ನ ತಾಯಿಯ ನೆನಪಾಯಿತು
ಅಡುಗೆ ಮನೆಯ ಒಲೆಯ ಮುಂದೆ
ಈ ಬಿದಿರಿನ ಕೊಳವೆಯಂತಹದೆ
ಕಬ್ಬಿಣದ ಕೊಳವೆಯನ್ನು ಆಕೆ ಊದುತ್ತಿದ್ದರೆ
ನಾದವೊಂದು ಹೊರಹೊಮ್ಮುತಿತ್ತು
ಆಕೆಯ ಬೆನ್ನಿಗೆ ಆತುಕೊಂಡು
ನಾನದನ್ನು ಸವಿಯುತ್ತಿದ್ದೆ
ಮಲಗಿದ ಹಾವು ಥಕ್ಕನೆ
ಹೆಡೆ ಬಿಚ್ಚಿದಂತೆ
ಆ ನಾದಕ್ಕೆ ಹಸಿಸೌದೆ
ಧಗ್ಗನೆ ಹೊತ್ತಿಕೊಳ್ಳುತ್ತಿತ್ತು
ಕಬ್ಬಿಣದ ಕೊಳಲ ಊದಿ
ನನ್ನೆದೆಯಲ್ಲಿ ಬೆಂಕಿ ಹಚ್ಚಿದ
ನನ್ನಮ್ಮನ ನೆನಪಿನ ನಾದದ ಮುಂದೆ
ಈ ವಿದ್ವಾಂಸನ ಕೊಳಲು
ಬರೇ ಹಸಿ ಸೌದೆ
]]>
ಬಿ ಎಂ ಬಷೀರ್ ಕವಿತೆ: ಬರೇ ಹಸಿ ಸೌದೆ
ನಿಮಗೆ ಇವೂ ಇಷ್ಟವಾಗಬಹುದು…





kolalu mattu ooodugoluveya sameekarana chennagide.
kavite chennagide.
wow tumbaane chennagide!!!
malathi S
ತು೦ಬಾ ಇಷ್ಟವಾಯ್ತು….
ತುಂಬಾ ಚೆನ್ನಾಗಿದೆ ಬಷೀರ್ ಸರ್…