ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಟ್ಟಹೋಗಾಕ ಮನಸಿಲ್ಲ ನಿನ್ನ..

ಯಾಕ ಒಲ್ಯಂತಿ

krishna-devangamatha

ಕೃಷ್ಣ ದೇವಾಂಗಮಠ 

ಬರಲಾಕ ಯಾಕ ಒಲ್ಯಂತಿ
ಬಿಟ್ಟಹೋಗಾಕ ಮನಸಿಲ್ಲ ನಿನ್ನ
ಪಟಾ ತರಗೇಲಿಯ ಹಾಂಗ
ನೆಲಕ್ಕ ಬಿದ್ದರ
ಜೀವಾ ಬಿಲಿಬಿಲಿ ಅನ್ನದ್ಹ್ಯಾಂಗ

she-readingಗರಕಿನೂ ಬೆಳೆಯದಂಥ ಮಣ್ಣಾಗ
ಮನೆ ಕಟ್ಟಲದ್ಹ್ಯಾಂಗಾದಾತೆ
ಗುಬ್ಬಚ್ಚಿ ಚಿಂವು ದನಿಯಿಲ್ಲದ
ಮನ ಅದ್ಹ್ಯಾಂಗ ತಡದಿತೆ
ಕೊಳಲು ಉರಿದಾಂಗ ಮನಸು ಮುರದರ
ದನಿ ಹ್ಯಾಂಗ ಆಚೆ ಬರತೈತಿ

ಒಡೆದ ಹಾಲಿನ ಗಿಣ್ಣ ಒಡೆಸಿ ಮಾಡು ಗಿಣ್ಣ
ಗಿಣ್ಣದಾಲಿನ ಗಟ್ಟಿ ಗಿಣ್ಣ ದ ರೂಪ ಒಂದೇ
ಬ್ಯಾರೆ ರುಚಿಯೋ ಎಲ್ಲ ಒಳಗಿನ ಮಹಿಮ ನಾ ಭಿರುಚಿಯ ಹಾಂಗ

ಬರದ ಹೋದರ ನೀನು
ಬರಸಿಡಿಲು ಬಡಿತೈತಿ
ಬರದ ನಾಡಾಂಗ ನನ್ನೆದಿಯ ಭೂಮಿ
ಬಿಟ್ಟು ಹೋದರ ನಿನ್ನ ಆಡಿಕೊಂಡಾರೆನ್ನ
ಕೈ ಬಿಟ್ಟು ಹೋದನಂತ
ಬರದ ಬಿಡದ ನಡು ಏನೈತಿ ಎಲ್ಲ
ಬಲ್ಲಾವ ಯಾವ ಶಿವನ
ಗುಡಿಯಾಗ ಕುಂತ ಕಲ್ಲೇನ

‍ಲೇಖಕರು Admin

20 November, 2016

1 Comment

  1. Shruti

    Good poem

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading