ಎಂ ಎಸ್ ಕೃಷ್ಣ ಮೂರ್ತಿ
ಕನ್ನಡಿ
ಕನ್ನಡಿಯ ಮುಂದೆ ಒಂದು
ಜ್ಯೋತಿ
ಜ್ಯೋತಿಯ ಹಿಂದೆ ಅವಳು
ಅವಳ
ಕಣ್ಣು ಕನ್ನಡಿ
ಆ ಕಣ್ಣ ಕನ್ನಡಿಯಲ್ಲೊಂದು
ಜ್ಯೋತಿ
ಅವಳಾ ,ಜ್ಯೋತಿಯಾ,
ಬಿಂಬ
ಪ್ರತಿಬಿಂಬವ ನೋಡುವ ನಾನು
ಹೀಗೆ ಬಿಂಬ ,ಪ್ರತಿಬಿಂಬದ
ಜ್ಯೋತಿಗಳಲ್ಲಿ ತನ್ಮಯವಾಗಿ
ಕರಗಿ ಹೋಗುವ
ನಾನು,ಅವಳು,
ಅವಳ ನೇತ್ರ,
ನೇತ್ರದ ಜ್ಯೋತಿ
ಕನ್ನಡಿ
ಬಿಂಬ
ಪ್ರತಿಬಿಂಬ







0 Comments