ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ನನ್ನ ಮೌನದ ಜಪ್ತಿ ನಡೆಸು..

ಮರಳ ತಡಿಯ ಕನಸುಗಳು:

chaitrika sridhar hegde

ಚೈತ್ರಿಕಾ.ಶ್ರೀಧರ್.ಹೆಗಡೆ

ಒಮ್ಮೆ ನಿನ್ನ ನೆನಪಲ್ಲಿ
ಕಡಲೂ ಖರ್ಚಾಗುವಂತೆ
ಅಳಬೇಕಿದೆ..
ಹುಡಿ ಹುಡೀ
ಕನಸುಗಳನೆಲ್ಲ ಕೊಡವಿ
ಮರಳ ತಡಿಯ
ಮಡಚಿಬೇಕಿದೆ…

ಆದರೆ,
ನೀನು ಹೀಗೆ
ರೆಪ್ಪೆಗಳ ಹೊಲಿದುಕೊಂಡೇ ಇದ್ದರೆ,
ಕಡಲೂ ಇಲ್ಲ…
ದಡವೂ ಇಲ್ಲ…

          *

ಮತ್ತೆ ನಿನ್ನ ಗೀಚುಗಳನೆಲ್ಲ
ಹೊಸಕಿ ಹೋದ ಈ
ಅಲೆಗಳನ್ನೇನು ಮಾಡಲಿ?
ಹೂಗಳ ಮೇಲೆ ಚಿಮುಕಿಸಿಬಿಡಲೆ?

ದುಂಬಿಗಳು ಹಾಡುವುದು ಬಿಟ್ಟು
ಕವಿತೆಗಳ ಓದಿಕೊಂಡಿರಲಿ ಇನ್ನು..

            *

ಮುಂಗುರುಳ ಬಿಳಿಲುಗಳಿಗೆ
ಜೋತುಬಿದ್ದಾಗಿದೆ ಸಂಜೆಗಪ್ಪು..
ಬಾ ನನ್ನ ಮೌನದ ಜಪ್ತಿ ನಡೆಸು..
ಆ ಮಾತುಗಳೇನಾದರೂ ಸಿಕ್ಕರೆ,
ಹಾಗೇಬಿಟ್ಟು ನಿಸೂರಾಗಿ
ನಡೆದುಬಿಡು..

ದಡಕ್ಕೆ ತುಟಿ ಬರೆದು
ಹೇಳಬೇಕಾದ್ದನ್ನೆಲ್ಲ ಹೇಳಿಸುವೆ..
ಒಂದು ಪ್ರೀತಿಯ ನಿವೇದನೆ
ನಡೆದು ಬಿಡಲಿ
ನಿನ್ನ ಬೆನ್ನ ಹಿಂದೆ..

   love2

‍ಲೇಖಕರು Admin

14 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading