ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಾ ಇಲ್ಲಿ ಸೂರ್ಯನಂತೆ ಸಂಭ್ರಮಿಸು…’ – ಎಚ್ ಆರ್ ಸುಜಾತಾ

ಇಳಿದು ನೋಡು

ಎಚ್ ಆರ್ ಸುಜಾತ


ಬಾ ಇಲ್ಲಿ ಸೂರ್ಯನಂತೆ ಸಂಭ್ರಮಿಸು
ತಲೆಯೆತ್ತಿ ಸೂರ್ಯಕಾಂತಿಯಂತೆ ಮುದ್ದಿಸಿ
ಸಾವಿರ ಬೀಜಗಳ ನೆಲದಲ್ಲಿ ಚೆಲ್ಲಿಬಿಡುತ್ತೇನೆ
 
ಬಾ ಇಲ್ಲಿ ಮೀನಾಗಿ ಪುಳಕವನೆಬ್ಬಿಸು
ಅಲೆಅಲೆಗೂ ಗರ್ಭಕಟ್ಟಿ ಸಾವಿರ
ಮೀನಮರಿಗಳ ನೀರಲ್ಲಿ ತೇಲಿಬಿಡುತ್ತೇನೆ
 
ಬಾ ಇಲ್ಲಿ ಕವಿಯಂತೆ ಭಾವುಕನಾಗು
ಬೆಳಕಿನ ಚುಕ್ಕಿಗಳ ಸಾಲುಗಳಲ್ಲಿ
ಬೆಳದಿಂಗಳ ಪದ್ಯ ಕಟ್ಟಿ ಚಂದ್ರನ ತೂಗಿಬಿಡುತ್ತೇನೆ
 
ಬಾ ಇಲ್ಲಿ ನನ್ನನ್ನಪ್ಪಿ ವಿರಮಿಸು
ಇರುಳಂತೆ ಮತ್ತೇರಿಸಿ ಸೊಕ್ಕಿದ
ಒಡಲ ತಟ್ಟಿ ಮಲಗಿಸಿ ಚಿಕ್ಕಿ ಕನಸುಗಳ ಬಿತ್ತುತ್ತೇನೆ
 
ಬಾ ನನ್ನೆದೆಯ ತುಂಬಾ ಹರಡಿ ಮರವಾಗಿ ಸಂಭ್ರಮಿಸು
ಕೂದಲೆಳೆಯ ತುದಿಯಲ್ಲಿ ಹಕ್ಕಿಗೂಡ ನೇದು
ಹಕ್ಕಿಮರಿಗಳ ಕಲರವದಿ ಮೈತುಂಬಿ ಕಚಗುಳಿಯಿಡುತ್ತೇನೆ.
 
ಬಾರದೆ ನನ್ನ ದೂರದಿರು, ಮೋರೆ ತಿರುಗಿ ಮರೆತೆಯಾದರೆ
ನಿನ್ನನೇ ನನ್ನೊಡಲಲ್ಲಿ, ಮರೆತು ಹೋಗಿ ನೋಯದಿರು.
ನಾನೇ ನೀನಾಗಿದ್ದೇನೆ, ಗರ್ಭದಾ ಕೊಳದಲ್ಲಿ ಇಳಿದು ನೋಡು.
 

‍ಲೇಖಕರು G

14 February, 2015

5 Comments

  1. mmshaik

    very..very nice sujata madam.

  2. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ ಮೇಡಂ.

  3. bharathi b v

    Sujatha tumba ishtavaythu

  4. Anonymous

    thank u bharathi.

  5. Anonymous

    Sensational

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading