ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ನ್ಯಾಯಾಧೀಶ..

-ನಾ ದಿವಾಕರ

ಕಳೆದ ಹಲವು ದಿನಗಳಲ್ಲಿ ಕನರ್ಾಟಕದ ಜನಮಾನಸದಲ್ಲಿ ಮನೆ ಮಾಡಿರುವ ಒಂದು ಹೆಸರು ಲೋಕಾಯುಕ್ತ ಎಂಬ ಸಾಂವಿಧಾನಿಕ ಸಂಸ್ಥೆ. ನ್ಯಾ. ಸಂತೋಷ್ ಹೆಗ್ಡೆ ದಿಟ್ಟತನದಿಂದ ಕೈಗೊಂಡ ತನಿಖೆಗಳು ಮತ್ತು ಕೆಲವು ನಿಧರ್ಾರಗಳು ಕನರ್ಾಟಕದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ್ದೂ ಹೌದು. ಇದೇ ಸಂದರ್ಭದಲ್ಲಿ ಮತ್ತೊಂದು ಹೆಸರೂ ಜನರ ನಾಲಿಗೆಯ ಮೇಲೆ ನಲಿದಾಡುತ್ತಿದ್ದರೆ ಅದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಕೆ. ಸುಧೀಂದ್ರ ರಾವ್ ಅವರದ್ದು. ಅವರ ಪ್ರಸಕ್ತ ಹುದ್ದೆಯೇ ಅವರನ್ನು ಕೇಂದ್ರ ಬಿಂದುವನ್ನಾಗಿ ಮಾಡಿದೆಯೋ ಅಥವಾ ಅವರ ದಿಟ್ಟ ತೀಪರ್ುಗಳು ಜನರ ಗಮನ ಸೆಳೆದಿದೆಯೋ ಅದು ಜನತೆಯ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಕನರ್ಾಟಕದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ, ವಿಶ್ಲೇಷಣೆಗೊಳಪಡಿಸುತ್ತಿರುವ ನನಗೆ ಈ ಸಂದರ್ಭದಲ್ಲಿ ಮುಖ್ಯವಾಗುವ ಸಂಗತಿ ಎಂದರೆ ನ್ಯಾ. ಸುಧೀಂದ್ರ ರಾವ್ ನನ್ನ ಬಾಲ್ಯದ ಗೆಳೆಯ ಎಂಬ ಸಂಗತಿ.

ಎಷ್ಟೋ ದಿನಗಳ ಕಾಲ ಇವರು ಅವರೇ ಇರಬಹುದೇ ಎಂಬ ಯೋಚನೆಯಲ್ಲೇ ಮುಳುಗಿದ್ದ ನನಗೆ ನನ್ನ ಊಹೆ ಸರಿ ಎಂದು ಖಚಿತವಾದಾಗ ಆದ ಸಂತೋಷ ಅಷ್ಟಿಷ್ಟಲ್ಲ. ನಮ್ಮೂರಿನ ಒಬ್ಬ ವ್ಯಕ್ತಿ, ನಮ್ಮೊಡನೆ ಬಾಲ್ಯದಲ್ಲಿ ಒಡನಾಟ ಹೊಂದಿದ್ದ ಒಬ್ಬ ವ್ಯಕ್ತಿ, ನಮ್ಮ ಬಾಲ್ಯದ ಕಷ್ಟ ಕಾರ್ಪಣ್ಯಗಳನ್ನು ಭಾವನಾತ್ಮಕ ನೆಲೆಗಟ್ಟಿನಲ್ಲಿ ಹಂಚಿಕೊಂಡಿದ್ದ ಒಬ್ಬ ವ್ಯಕ್ತಿ, ನಮ್ಮ ಗತ ಜೀವನದಲ್ಲಿ ಆತ್ಮೀಯ ಒಡನಾಡಿಯಾಗಿದ್ದ ಒಬ್ಬ ವ್ಯಕ್ತಿ ಇಂದು ಕನರ್ಾಟಕದ ಜನಮಾನಸದಲ್ಲಿ ಮನೆಮಾಡಿರುವುದು ಎಷ್ಟು ಹೆಮ್ಮೆಯ ವಿಚಾರವಲ್ಲವೇ ? ಇಡೀ ಕನರ್ಾಟಕದ ಜನತೆಗೆ ಈ ವ್ಯಕ್ತಿ ನ್ಯಾಯಮೂತರ್ಿ ಎನ್. ಕೆ. ಸುಧೀಂದ್ರ ರಾವ್ ಎಂದು ಪರಿಚಿತರು, ಆದರೆ ನನಗೆ ಬಾಲ್ಯದ ಗೆಳೆಯ ಸುಧಿ. ಭೇಟಿಯಾಗಿ ಬಹುಶಃ ಒಂದು ದಶಕಕ್ಕೂ ಮೇಲಾಗಿರಬಹುದು. ಆದರೆ ನೆನಪುಗಳು ಮಾಸಿಲ್ಲ. ಮಾಸುವುದೂ ಇಲ್ಲ.

ಇಂದು ನ್ಯಾಯಪೀಠದ ಮೇಲೆ ಕುಳಿತು ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಆದೇಶಗಳನ್ನು ನೀಡುತ್ತಿರುವ ನ್ಯಾ. ಸುಧೀಂದ್ರ ತಮ್ಮ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮನೆಮಾತಾಗಿದ್ದರೆ ಅದರ ಹಿಂದೆ ಒಂದು ಜೀವನ ಗಾಥೆಯೇ ಇದೆ. ದಂತದ ಗೋಪುರಗಳಲ್ಲಿ ಹುಟ್ಟಿ ಬೆಳೆದು, ಐಷಾರಾಮಿ ಸೌಕರ್ಯಗಳನ್ನು ಅನುಭೋಗಿಸಿ, ಶ್ರೀಮಂತಿಕೆಯಲ್ಲಿ ಮೆರೆದು ನ್ಯಾಯಾಧೀಶರ ಸ್ಥಾನಕ್ಕೆ ಬಂದವರಲ್ಲ ಸುಧೀಂದ್ರರಾವ್. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಬಡತನ, ಕಷ್ಟ ಕಾರ್ಪಣ್ಯಗಳ ನಡುವೆಯೇ ಬೆಳೆದುಬಂದ ಸುಧೀಂದ್ರರಾವ್ ಜನಿಸಿದ್ದು 1958ರಲ್ಲಿ. ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ರಾವ್ ಮಡಿವಂತಿಕೆಯ ಪರಿಸರದಲ್ಲೇ ಬೆಳೆದವರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ಎದೆಗುಂದದೆ ಹಿರಿಯ ಸೋದರ ಬದರಿನಾಥ್ ಅವರ ಆಶ್ರಯದಲ್ಲಿ ಬೆಳೆದ ರಾವ್ ಅವರ ಜೀವನವನ್ನು ರೂಪಿಸಿದ್ದು ಅವರ ತಾಯಿ ಜಯಮ್ಮನವರ ಉದಾತ್ತ ಗುಣ ಮತ್ತು ಸಾತ್ವಿಕ ಮನೋಭಾವ.

ನನಗೂ ಸುಧೀಂದ್ರ ರಾವ್ ಅವರಿಗೂ ಎರಡು ವರ್ಷಗಳ ಅಂತರ. ಒಂದೇ ಶಾಲೆಯಲ್ಲಿ ಓದಿದವರು. ಹಿಂದು ಮುಂದಿನ ರಸ್ತೆಯಲ್ಲಿದ್ದವರು. ನನ್ನ ಅವರ ಒಡನಾಟ ಒಂದೇ ಮಾತಿನಲ್ಲಿ ಹೇಳುವುದಾದರೆ ಚಡ್ಡಿ ದೋಸ್ತ್. ದಿನನಿತ್ಯ ಭೇಟಿ ಮಾಡುತ್ತಿದ್ದ ಆ ದಿನಗಳು ಈಗ ನಿಜಕ್ಕೂ ಹೆಮ್ಮೆಯ ದಿನಗಳೆನಿಸುತ್ತವೆ. ಆತ್ಮೀಯವಾಗಿ ಸುಧಿ ಎಂದೇ ಅವರನ್ನು ಕರೆಯುತ್ತಿದ್ದ ನಮಗೆ ಚಿಕ್ಕಂದಿನಿಂದಲೂ ಅವರಲ್ಲಿ ಮೆಚ್ಚುಗೆಯಾದ ಸಂಗತಿ ಎಂದರೆ ಅವರ ಗಾಂಭೀರ್ಯ, ಸರಳ ಮನೋಭಾವ ಮತ್ತು ಅತಿ ಕಡಿಮೆ ಮಾತು. ಆದರೆ ಇದಾವುದೂ ಅವರ ಸ್ನೇಹಕ್ಕೆ ಅಡ್ಡಿಬರುತ್ತಿರಲಿಲ್ಲ. ತಾನಾಯಿತು ತನ್ನ ಓದು, ಬರಹವಾಯಿತು ಎಂಬಂತೆಯೇ ಇರುತ್ತಿದ್ದ ಸುಧೀಂದ್ರರಾವ್ ಕ್ರೀಡೆಗಳಲ್ಲೂ ನಮ್ಮೊಡನೆ ಇರುತ್ತಿದ್ದರು. ಅವರ ಮಧ್ಯಮವರ್ಗದ ಜೀವನವೇ ಅವರ ಭವಿಷ್ಯದ ಮೈಲಿಗಲ್ಲುಗಳಿಗೆ ಬುನಾದಿಯಾಗಿದ್ದು ಮಾತ್ರ ಸತ್ಯ.

ನಿಷ್ಠೆ-ಪ್ರಾಮಾಣಿಕತೆಯ ಪ್ರತಿಫಲ

ಆ ಕಾಲದಲ್ಲಿ 1980ರ ದಶಕದಲ್ಲಿ ಬಂಗಾರಪೇಟೆಯಲ್ಲಿದ್ದ ವಕೀಲರ ಸಂಖ್ಯೆ ಎರಡೋ ಮೂರೋ. ಆದರೂ ವಕೀಲಿ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು, ಕಾಮಸರ್್ ಗ್ರಾಜುಯೇಟ್ ಆಗಿದ್ದೂ ಕಾನೂನು ಪದವಿ ಮಾಡಿದ ಸುಧೀಂದ್ರರಾವ್ ತಮ್ಮ ಅಧ್ಯಯನಶೀಲತೆಯಿಂದಲೇ ಮುಂದೆ ಬಂದವರು. ಕೆಲಕಾಲ ಕೆಜಿಎಫ್ನ ಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ , ನಂತರ ಬಂಗಾರಪೇಟೆಯ ಪದವಿ ಕಾಲೇಜಿನಲ್ಲಿ ಅರೆ ಕಾಲಿಕ ಉಪನ್ಯಾಸಕರಾಗಿ ನೌಕರಿ ಮಾಡಿದ ಸುಧೀಂದ್ರ ರಾವ್ ಯಾರ ಬಳಿಯೂ ಜೂನಿಯರ್ ಆಗಿ ಕೆಲಸ ನಿರ್ವಹಿಸದೆ ನೇರವಾಗಿ ತಾವೇ ವಕೀಲಿ ವೃತ್ತಿ ಆರಂಭಿಸಿದ್ದು ಅವರ ವೈಶಿಷ್ಟ್ಯ. ಚಿಕ್ಕಂದಿನಿಂದಲೂ ಆತ್ಮ ಗೌರವ ಮತ್ತು ಸ್ವಾಭಿಮಾನವನ್ನು ರೂಢಿಸಿಕೊಂಡಿದ್ದ ಸುಧೀಂದ್ರರಾವ್ ಎದೆಗುಂದಲಿಲ್ಲ.

ಅವರ ಈ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಸುಧೀಂದ್ರರಾವ್ ಅವರಿಗೆ 2003ರಲ್ಲಿ ನೇರವಾಗಿ ಸೆಶನ್ಸ್ ನ್ಯಾಯಾಧೀಶರ ಹುದ್ದೆಯನ್ನು ಒದಗಿಸಿತ್ತೇನೋ. ಬೆಂಗಳೂರು, ಚಾಮರಾಜನಗರ ಮತ್ತು ಬೀದರ್ನಲ್ಲಿ ಸೆಷನ್ಸ್ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿ, ಬಳ್ಳಾರಿಯಲ್ಲಿ ಮುಖ್ಯ ಸೆಷನ್ಸ್ ನ್ಯಾಯಾಧೀಶರಾಗಿಯೂ ನಿರ್ವಹಿಸಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲೂ ಸುಧೀಂದ್ರರಾವ್ ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಅದರ ಪರಿಣಾಮವೇ ಆಳ್ವಿಕರಲ್ಲಿ ದಕ್ಷತೆಯನ್ನು ಕಾಪಾಡುವ ಒಂದು ನಿಯಂತ್ರಣಾ ಸಂಸ್ಥೆಯಾದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲವು ಮರೆಯಲಾಗದ ಸತ್ಯಗಳು

ಸತತ ಮೂರು ದಶಕಗಳ ಒಡನಾಟ, ಒಂದೇ ಬೀದಿಯಲ್ಲದಿದ್ದರೂ ಹಿಂದು ಮುಂದಿನ ಬೀದಿಯಲ್ಲಿ ವಾಸ. ದಿನನಿತ್ಯ ಶಾಲೆ, ಕಾಲೇಜು, ಆಟದ ಮೈದಾನ, ಮಾರುಕಟ್ಟೆ, ಪಾನಿಪೂರಿ ಅಂಗಡಿಯಲ್ಲಿ ಭೇಟಿ. ಮನೆಯಲ್ಲೇ ಸಂಧಿಸಿ, ಕಲಿತ ಪಾಠಗಳ ಬಗ್ಗೆ, ಕಲಿಯಬೇಕಾದ ಪಠ್ಯಗಳ ಬಗ್ಗೆ ಚಚರ್ೆ ನಡೆಸಿದ ದಿನಗಳಿಗೂ ಕಡಿಮೆಯಿಲ್ಲ. ನನಗೂ ಸುಧೀಂದ್ರ ರಾವ್ ಅವರಿಗೂ ಎರಡು ವರ್ಷಗಳ ಅಂತರ. ಒಂದೇ ಶಾಲೆಯಲ್ಲಿ ಓದಿದವರು. ಹಿಂದು ಮುಂದಿನ ರಸ್ತೆಯಲ್ಲಿದ್ದವರು. ನನ್ನ ಅವರ ಒಡನಾಟ ಒಂದೇ ಮಾತಿನಲ್ಲಿ ಹೇಳುವುದಾದರೆ ಚಡ್ಡಿ ದೋಸ್ತ್. ನಮ್ಮ ಎರಡೂ ಕುಟುಂಬಗಳ ನಡುವೆ ಇದ್ದ ಸೌಹಾರ್ದತೆ, ಭ್ರಾತೃತ್ವ ಬಹಳ ಆತ್ಮೀಯವಾದದ್ದು. ನಮ್ಮಿಬ್ಬರ ತಾಯಂದಿರೂ ಸಂಜೆ ವೇಳೆಯ ಹರಟೆ ಸ್ನೇಹಿತರು. ಹಬ್ಬ ಹರಿದಿನಗಳಲ್ಲಿ ತಮ್ಮ ಅನುಭಾವಗಳನ್ನು ಹಂಚಿಕೊಳ್ಳುವ ಅವರ ಪರಿ ಇಂದಿಗೂ ಚಿರನೂತನ. ಅಷ್ಟೇ ತಾದಾತ್ಮ್ಯತೆಯಿಂದ ಕಷ್ಟ ಕಾರ್ಪಣ್ಯಗಳನ್ನೂ ಹಂಚಿಕೊಳ್ಳುತ್ತಿದ್ದುದೂ ಉಂಟು. ಪರಸ್ಪರ ಸಂಬಂಧಗಳು ಬೆಸುಗೆಯಾಗುವುದೇ ಕಷ್ಟ ವ್ಯಸನಗಳ ಮೂಲಕ ಎನ್ನಲು ನಮ್ಮ ಎರಡು ಕುಟುಂಬಗಳ ಸಂಬಂಧವೇ ಸಾಕ್ಷಿ ಎನ್ನಬಹುದೇನೋ ?

ಸುಧೀಂದ್ರ ಅವರ ತಾಯಿ ಎಷ್ಟು ಸಹೃದಯರು ಎಂದರೆ ಮತ್ತೊಬ್ಬರ ಕಷ್ಟವನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಯಾರಾದರೂ ಕಷ್ಟದಲ್ಲಿದ್ದಾರೆಂದ ಕೂಡಲೆ ಅವರ ನೆರವಿಗೆ ಧಾವಿಸುತ್ತಿದ್ದ ಆ ತಾಯಿ ಮಾತು ಮಾತಿಗೂ ಅಯ್ಯೋನನ್ನಮ್ಮ ಎನ್ನುತ್ತಿದ್ದುದು ಒಂದು ವಿಶೇಷ. ಬಹುಶಃ ಸುಧಿ ಅವರಿಗೂ ತಿಳಿದಿರಲಿಕ್ಕಿಲ್ಲ, ನಮ್ಮ ಮನೆಯಲ್ಲಿ ಅವರ ತಾಜಿ ಜಯಮ್ಮನವರನ್ನು ಗುರುತಿಸುತ್ತಿದ್ದುದೇ ಹಾಗೆ. ಆತ್ಮೀಯತೆಯಿಂದ. ನಮಗೆ ಚಿಕ್ಕಂದಿನಲ್ಲಿ ಅವರ ಹೆಸರೇ ತಿಳಿದಿರಲಿಲ್ಲ. ಒಮ್ಮೊಮ್ಮೆ ಅವರು ಮನೆಗೆ ಬಂದರೆ ಅಮ್ಮಾ ಅವರು ಬಂದರು, ಅವರು ಬಂದರು, ಎಂದು ಹೇಳುತ್ತಿದ್ದೆವು. ಅಯ್ಯೋನನ್ನಮ್ಮ ಬಂದರು ಎಂದು ಹೇಳಲಾಗುತ್ತಿತ್ತೇ ? ಇವೆಲ್ಲವೂ ಈಗ ಖಿನ್ನತೆಯ ಛಾಯೆಯಲ್ಲೇ ನೆನಪಾಗುತ್ತದೆ. ನಮ್ಮ ತಂದೆಯವರ ಸಹೋದ್ಯೋಗಿಯೊಬ್ಬರು ನಿಧನರಾದಾಗ ಆಕೆ ಪರಿತಪಿಸಿದ ರೀತಿ ನೆನೆದರೆ ಇಂದಿಗೂ ಆ ತಾಯಿಯ ಸಹೃದಯತೆ ನೆನಪಾಗುತ್ತದೆ. ಮಿಡಿಯುವ ಕರುಳಿಗೆ ರಕ್ತ ಸಂಬಂಧಗಳು ಅಪ್ರಸ್ತುತ ಎಂದು ನಿರೂಪಿಸುವಂತೆ ಆಕೆ ಪರರ ಕಷ್ಟಕ್ಕೆ ಧಾವಿಸುತ್ತಿದ್ದರು.

ನನ್ನ ಸ್ವಂತ ಅನುಭವವನ್ನು ಇಲ್ಲಿ ಹೆಮ್ಮೆಯಿಂದಲೇ ಹಂಚಿಕೊಳ್ಳುತ್ತೇನೆ. ನನ್ನ ತಂದೆಯವರು ನಿಧನರಾದಾಗಲೂ ಸಹ ( ಆಗ ನನಗೆ 16 ವರ್ಷ) ನಮ್ಮ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ ರೀತಿ, ನಮ್ಮ ತಾಯಿಯವರಿಗೆ ಧೈರ್ಯ ನೀಡಿದ ಪರಿ ನಿಜಕ್ಕೂ ಮರೆಯಲಾಗದಂತಹುದು. ನಿತ್ಯದ ಊಟಕ್ಕೂ ಪರಿತಪಿಸುತ್ತಿದ್ದ ನಮಗೆ ಹಣಕಾಸಿನ ನೆರವು ನೀಡುವಷ್ಟು ಶ್ರೀಮಂತಿಕೆ ಅವರಲ್ಲಿರಲಿಲ್ಲ. ಆದರೆ ಎಲ್ಲಕ್ಕಿಂತಲೂ ಮಿಗಿಲಾದ ಶ್ರೇಷ್ಠ ಹೃದಯ ಶ್ರೀಮಂತಿಕೆ ಇತ್ತು. ಇಲ್ಲಿ ಒಂದು ಘಟನೆಯನ್ನು ಯಾವುದೇ ಸಂಕೋಚವಿಲ್ಲದೆ ಉಲ್ಲೇಖಿಸುತ್ತೇನೆ. ನಮ್ಮ ತಂದೆ ತೀರಿ ಹೋದನಂತರ ತಿನ್ನಲೂ ಕೂಳಿರದ ದಿನಗಳೇ ಹೆಚ್ಚು. ಒಮ್ಮೆ ನಮ್ಮ ಮನೆಗೆ, ಸಾಂತ್ವನ ಹೇಳಲು ನೆಂಟರು ಬಂದಾಗ ಮನೆಯಲ್ಲಿ ಎಲ್ಲವೂ ಖಾಲಿ. ನಾವಂತೂ ಉಪವಾಸಕ್ಕೆ ಒಗ್ಗಿಹೋಗಿದ್ದೆವು. ಆದರೆ ಅತಿಥಿಗಳಿಗೆ ಏನು ಮಾಡುವುದು ? ಮನೆಯಲ್ಲಿ ಒಂದು ಕಾಳು ಅಕ್ಕಿ ಸಹ ಇರಲಿಲ್ಲ.

ಆಗ ನನ್ನಮ್ಮನಿಗೆ ಹೊಳೆದದ್ದು ಸುಧೀಂದ್ರ ಅವರ ಅಮ್ಮ ಜಯಮ್ಮನವರೇ. ನಾನು ಸುಧೀಂದ್ರ ರಾವ್ ಅವರ ತಾಯಿಯ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿದೆ. ಮನೆಯಲ್ಲಿದ್ದ ಅನ್ನ ಮತ್ತು ಹುಳಿಯನ್ನು ಪಾತ್ರೆಯಲ್ಲಿ ಹಾಕಿ ಅದನ್ನು ಪ್ಲಾಸ್ಟಿಕ್ ಬಕೆಟ್ ಒಂದರಲ್ಲಿರಿಸಿ, ಹಿತ್ತಲು ಬಾಗಿಲಿನಿಂದ ನನಗೆ ಕೊಟ್ಟು ಕಳುಹಿಸಿದ್ದರು ಆ ಮಹಾತಾಯಿ. ಕಾರಣ ತಾವು ನೀಡಿದ್ದು ಯಾರಿಗೂ ತಿಳಿಯಬಾರದೆಂದು. ಈ ವಿಷಯ ಸುಧೀಂದ್ರ ಅವರಿಗೂ ಅಚ್ಚರಿ ಮೂಡಿಸಬಹುದು. ( ಈ ಘಟನೆ ನಡೆದು 33 ವರ್ಷಗಳಾಗಿವೆ ) ಇದು ಸಾಂದಭರ್ಿಕ ಅನುಭವವಾದರೂ ನನಗೆ ಮರೆಯಲಾಗದು. ಈ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವ ಉದ್ದೇಶವೆಂದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು ತನ್ನ ಮನೆಯಲ್ಲೇ ಮತ್ತು ಅದನ್ನು ರೂಪಿಸುವವಳು ತಾಯಿ. ಸುಧೀಂದ್ರರಾವ್ ಇಂದು ಒಬ್ಬ ಪ್ರಾಮಾಣಿಕ, ನಿಷ್ಠ ನ್ಯಾಯಾಧೀಶರಾಗಿದ್ದರೆ ಅದರ ಹಿಂದೆ ಅವರ ತಾಯಿಯ ಶ್ರಮ ಇರುವುದನ್ನು ಅಲ್ಲಗಳೆಯಲಾಗದು. ತಮ್ಮ ಬಡತನವನ್ನೂ ಲೆಕ್ಕಿಸದೆ ಮತ್ತೊಬ್ಬರಿಗೆ ಸಹಾಯ ಹಸ್ತ ನೀಡುವ ಉದಾತ್ತತೆ ಅಪರೂಪವಲ್ಲವೇ ? ಸುಧೀಂದ್ರ ರಾವ್ ಅಂತಹ ಪರಿಸರದಲ್ಲಿ ಬೆಳೆದವರು. ಹಾಗಾಗಿಯೇ ಅವರಲ್ಲಿದ್ದ ಛಲ ಅವರನ್ನು ಕಾನೂನು ಪದವಿಯತ್ತ ಕೊಂಡೊಯ್ದಿತ್ತೇನೋ ಎನಿಸುತ್ತದೆ. ಆ ಕಾಲದಲ್ಲಿ 1980ರ ದಶಕದಲ್ಲಿ ಬಂಗಾರಪೇಟೆಯಲ್ಲಿದ್ದ ವಕೀಲರ ಸಂಖ್ಯೆ ಎರಡೋ ಮೂರೋ. ಆದರೂ ವಕೀಲಿ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು, ಕಾಮಸರ್್ ಗ್ರಾಜುಯೇಟ್ ಆಗಿದ್ದೂ ಕಾನೂನು ಪದವಿ ಮಾಡಿದ ಸುಧೀಂದ್ರರಾವ್ ತಮ್ಮ ಅಧ್ಯಯನಶೀಲತೆಯಿಂದಲೇ ಮುಂದೆ ಬಂದವರು. ಕೆಲಕಾಲ ಕೆಜಿಎಫ್ನ ಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ , ನಂತರ ಬಂಗಾರಪೇಟೆಯ ಪದವಿ ಕಾಲೇಜಿನಲ್ಲಿ ಅರೆ ಕಾಲಿಕ ಉಪನ್ಯಾಸಕರಾಗಿ ನೌಕರಿ ಮಾಡಿದ ಸುಧೀಂದ್ರ ರಾವ್ ಯಾರ ಬಳಿಯೂ ಜೂನಿಯರ್ ಆಗಿ ಕೆಲಸ ನಿರ್ವಹಿಸದೆ ನೇರವಾಗಿ ತಾವೇ ವಕೀಲಿ ವೃತ್ತಿ ಆರಂಭಿಸಿದ್ದು ಅವರ ವೈಶಿಷ್ಟ್ಯ.

ತಮ್ಮ ವೃತ್ತಿಪರತೆಯೊಂದಿಗೇ ಪ್ರಾಮಾಣಿಕತೆಯನ್ನೂ ರೂಢಿಸಿಕೊಂಡಿರುವ ಸುಧೀಂದ್ರ ರಾವ್ ಯಾವುದೇ ಆಮಿಷಗಳಿಗೆ ಬಲಿಯಾಗದಿರುವುದರಿಂದಲೇ ಯಡಿಯೂರಪ್ಪನವರ ಮತ್ತಿತರ ಪ್ರಕರಣಗಳಲ್ಲಿ ದಿಟ್ಟೆದೆಯ ತೀಪರ್ು ನೀಡಲು ಸಾಧ್ಯವಾಯಿತು. ಪ್ರಸ್ತುತ ಭ್ರಷ್ಟ ವಾತಾವರಣದಲ್ಲಿ ಸುಧೀಂದ್ರರಾವ್ ಅವರಂತಹ ನಿಷ್ಠಾವಂತ ನ್ಯಾಯಾಧೀಶರು ಅತ್ಯಗತ್ಯ ಎಂದು ಹೇಳುವ ಹಿರಿಯ ವಕೀಲರು ರಾಜಕೀಯ ಭ್ರಷ್ಟಾಚಾರವನ್ನು ಮಟ್ಟ ಹಾಕಲು ನ್ಯಾಯಾಂಗ ವ್ಯವಸ್ಥೆಗೆ ಇಂತಹ ವ್ಯಕ್ತಿಗಳು ಹೆಚ್ಚು ಉಪಯುಕ್ತರಾಗಿ ಕಾಣುತ್ತಾರೆ ಎಂದು ಹೇಳುತ್ತಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು, ಕಟ್ಟಾ ಜಗದೀಶ್, ಶಾಸಕ ಸಂಪಂಗಿ, ಕೃಷ್ಣಯ್ಯ ಶೆಟ್ಟಿ ಮತ್ತು ಯಡಿಯೂರಪ್ಪ ಇಂತಹ ರಾಜಕೀಯ ದಿಗ್ಗಜರಿಗೆ ಜೈಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯದ ಘನತೆಯನ್ನು ಎತ್ತಿ ಹಿಡಿದ ಸುಧೀಂದ್ರರಾವ್ ಯಾವ ಮುಲಾಜಿಗೂ ಒಳಗಾಗದೆ ತಮ್ಮ ಕಾರ್ಯ ನಿರ್ವಹಿಸುವುದೇ ನ್ಯಾಯಾಂಗ ವ್ಯವಸ್ಥೆಗೆ ಅವರು ನೀಡಿರುವ ಮಹತ್ತರ ಕಾಣಿಕೆ.

ಚಿತ್ರಕೃಪೆ-oneindia .com

 

‍ಲೇಖಕರು avadhi

28 November, 2011

2 Comments

  1. Sharadhi

    Very interesting writing.

  2. Anasuya M.R.

    This is a memorable article. The human values in Sudeendra Rao’s are the gift from his mother.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading