ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಗಾಂಧಿ’ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ ‘ಗಾಂಧಿ’ ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ ಹಿರಿ-ಕಿರಿಯ ಕವಿಗಳ ಕವಿತೆಯನ್ನೊಳಗೊಂಡ ಒಂದು ಪ್ರಾತಿನಿಧಿಕ ಸಂಕಲನವನ್ನು ಹೊರತರಬೇಕೆಂಬ ಇಚ್ಛೆ ಇದ್ದು ಅಂತಹ ಕವಿತೆಗಳನ್ನು ಜನವರಿ 1, 2012ರ ಒಳಗೆ ತಲುಪುವಂತೆ ರೂಪ ಹಾಸನ, ಪ್ರೇರಣಾ, ಉತ್ತರ ಬಡಾವಣೆ, ಹಾಸನ-573201 ಅಥವಾ rupahassan@gmail.com <mailto:rupahassan@gmail.com>  ಇಲ್ಲಿಗೆ ಕಳುಹಿಸಿಕೊಡಬೇಕೆಂದು ಕೋರುತ್ತೇವೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ ಸುಬ್ಬು ಹೊಲೆಯಾರ್-9483974089 ಅಥವಾ ರೂಪ ಹಾಸನ-08172-263881 ಸಂಪಕರ್ಿಸಬಹುದಾಗಿದೆ.

 

‍ಲೇಖಕರು avadhi

20 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading