ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗಿಲ ಬಳಿ ನಿಂತಿದೆ ರಿಸೆಷನ್ನಿನ ಭೂತ..

ಡಾ. ಅಜಿತ ಹರೀಶಿ

ಆಗಾಗ ಬರುವ ಆಚೆ ಮನೆಯ
ಐದಂಕಿಯ ಸಂಬಳದವನ ಕತೆ
ಹೊಸ ಅಪಾರ್ಟ್ಮೆಂಟು, ಫ್ಲೋರು
ಇಂಟೀರಿಯರ್ ಡೆಕೊರೇಷನ್ನು, ಫರ್ನೀಚರು
ಕೇಳಬಾರದು
ಪೆಟ್ಟಾಗಬಹುದು ಅಡುಗೆ ಮನೆಯಲ್ಲಿ ಪಾತ್ರೆಗಳಿಗೆ

ಅವನ ಮಗನ ಐಪ್ಯಾಡು, ರಿಮೋಟ್ ಹೆಲಿಕ್ಯಾಪ್ಟರು
ಕೋಚಿಂಗು, ಆಂಡ್ರಾಯ್ಡ್ ವಾಚಿನ ಹೆಸರು
ಕೇಳಬಾರದು
ಸಿದ್ಧವಾಗಬಹುದು ಕ್ರೆಡಿಟ್ ಕಾರ್ಡು
ಇಲ್ಲವೇ ಅಸಹಕಾರದ ಪ್ಲಕಾರ್ಡು
ಹಾಳಾಗಬಹುದು ಹಳೆಯ ಆಟದ ಸಾಮಾನುಗಳು

ಅವನ ಹೆಂಡತಿಯ ಪಾರ್ಲರು, ಶಾಪಿಂಗ್ ಮಾಲು
ಹುಟ್ಟುಹಬ್ಬ ಆಚರಿಸಿದ ಫಂಕ್ಷನ್ ಹಾಲು
ಅವಳ ಅಮೆಜಾನು ಆರ್ಡರು
ಕೇಳಲೇಬಾರದು
ಬಾಗಿಲ ಬಳಿ ನಿಂತಿದೆ ರಿಸೆಷನ್ನಿನ ಭೂತ

ಆದರೂ ಅವರನ್ನು ಬೀಳ್ಕೊಡುವಾಗ
ಮೆಲುದನಿಯಲ್ಲಿ ಕೇಳಿದೆ ನಾನು ಕೆಲವ;
ಕಾರಿನ ಕಾಸ್ಟು, ಆತನಾಡುವ ಕಾರ್ಡಿನ ರೇಟು
ಕುಡಿಯುವ ಸ್ಕಾಚಿನ ಬ್ರಾಂಡು, ಸೇದುವ ಸಿಗರೇಟು

ಕೇಳಬಹುದು ಕೆಲವು
ಯಾರಿಗೂ ಕೇಳದ ಹಾಗೆ!

‍ಲೇಖಕರು avadhi

10 October, 2019

3 Comments

  1. vishnu

    ಆಹಾ.. ಚಂದ

  2. ಸೌಜನ್ಯ ದತ್ತರಾಜ

    ವಿಡಂಬನಾತ್ಮಕ ವಾಸ್ತವ.
    ಈ ಕಾಲಕ್ಕೊಂದು ಪ್ರಾಸ್ತಾವಿಕ ಪದ್ಯ.

  3. Vasundhara k m

    ಚೆನ್ನಾಗಿದೆ ಡಾಕ್ಟ್ರೇ.. ಕೊನೆಯ ಸಾಲುಗಳು ನಮಗೆ ಕೇಳಿಸಿಬಿಟ್ಟಿತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading