ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬಸ್ ಸ್ಟಾಂಡಿನಲ್ಲಿ ಸಿಕ್ಕ ಅವಳು’ – ಚಿತ್ರಾ ಸಂತೋಷ್

ಚಿತ್ರಾ ಸಂತೋಷ್

ಮಲ್ಲೇಶ್ವರಂ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಹಿಂದಿನಿಂದ ಯಾರೋ ಬಂದು ನನ್ನ ಓಲೆ ಮೇಲೆ ಕೈಯಾಡಿಸಿದಂತಾಯಿತು. “ಅಕ್ಕಾ ಏನ್ ಚೆಂದಕ್ಕಿದೆ ನಿನ್ನ ಜುಮುಕ’ ಅಂದಳು. ಗಡುಸು ದನಿ. ಒಂದು ಕ್ಷಣ ವಿಚಲಿತಗೊಂಡು ತಿರುಗಿ ನೋಡಿದರೆ ತುಟಿಗೆ ಬಣ್ಣ ಬಳಿದು, ಮುಖ ತುಂಬಾ ಮೇಕಪ್ಪು ಮಾಡಿಕೊಂಡು ನಿಂತಿದ್ದ ಅವಳ ಮಲ್ಲಿಗೆ ಬಿರಿಯುವ ನಗು. ಪುಟ್ಟ ಜಡೆಗೆ ಮಾರುದ್ದ ಮಲ್ಲಿಗೆ. ಹಚ್ಚಿದ ಕಾಡಿಗೆ ಅವಳ ಕಣ್ಣಿಗಿನ್ನೂ ಅಂದ ತಂದಿತ್ತು. “ನಿನ್ನ ಓಲೆ ಎಷ್ಟು ಚೆಂದಕ್ಕಿದೆ. ಚಿನ್ನನಾ? ಎಲ್ಲಿ ತಕ್ಕೊಂಡೆ? ಎಷ್ಟು ಕೊಟ್ಟೆ?’ ಎಂದು ಒಂದೇ ಉಸಿರಿಗೆ ಕೇಳಿದಳು.
“ಚಿನ್ನ ಅಲ್ಲಮ್ಮ, ಆರ್ಟಿಫಿಶಿಯಲ್ ಓಲೆ. ಮಲ್ಲೇಶ್ವರಂನ 8 ಕ್ರಾಸ್ ನಲ್ಲಿ ಸಿಗುತ್ತೆ’ ಅಂದಾಗ ಅವಳ ಮುಖ ಖುಷಿಯಿಂದ ಮೂರಗಲವಾಯಿತು.
“ನಂಗೆ ದೊಡ್ಡ ಓಲೆಗಳು ತುಂಬಾ ಇಷ್ಟ. ಜುಮುಕಗಳೆಂದರೆ ಪಂಚಪ್ರಾಣ. ನನ್ನತ್ರ ತುಂಬಾ ಕಲೆಕ್ಷನ್ ಇದೆ. ಆದ್ರೆ ಹಾಕ್ಕೊಂಡಿದ್ದನ್ನೇ ಹಾಕ್ಕೊಂಡು ಬೇಜಾರಾಗಿದೆ. ಹೊಸದಾಗಿರ್ಬೇಕು. ಚೆಂದಕ್ಕೆ ಕಾಣಿಸ್ಬೇಕು” ಎನ್ನುತ್ತಲೇ ಮತ್ತೊಮ್ಮೆ ನನ್ನೆರಡೂ ಜುಮುಕಗಳನ್ನು ಮುಟ್ಟಿ ಮುಟ್ಟಿ ಸಂಭ್ರಮಿಸಿದಳು.

ಮತ್ತೆ ಅವಳ ಕನಸು ಬಿಚ್ಚಿಟ್ಟಳು
” ಆಹಾ, ನಿನ್ನ ಬಳೆಗಳೂ ಚೆಂದಕ್ಕಿವೆ. ಈ ಸೇಬು ಬಣ್ಣ ನಂಗೂ ಇಷ್ಟ” ಎಂದಳು.
ಬಣ್ಣದ ಜಗತ್ತಿನ ಸುತ್ತ ಅವಳ ಕನಸುಗಳು ಗಿರಕಿಹೊಡೆಯುತ್ತಿದ್ದವು.
ಮತ್ತೆ ಮತ್ತೆ ನನ್ನ ನೋಡುತ್ತಾ ಅವಳು ಮಾತಿಗಿಳಿದಳು:
ನನಗೂ ಮಲ್ಲಿಗೂ ಭಾಳ ನಂಟು. ಅದಕ್ಕೆ ಪುಟ್ಟ ಜಡೆಗೆ ಮಲ್ಲಿಗೆ ಮುಡಿದಿದ್ದೀನಿ. ಮನೆಮುಂದೆ ರಂಗೋಲಿ ಹಾಕೋದಂದ್ರೆ ನಂಗಿಷ್ಟ. ಜರತಾರಿ ಸೀರೆಗಳಿಗೆ ನವನವೀನ ವಿನ್ಯಾಸದ ರವಿಕೆಗಳನ್ನು ಮ್ಯಾಚ್ ಮಾಡ್ಬೇಕು. ಮೂಗಿಗೊಂದು ಮಿನುಗುವ ನತ್ತು, ಕಾಲಲ್ಲಿ ಸದ್ದು ಮಾಡುವ ಗೆಜ್ಜೆಗಳು, ಕತ್ತು ಸಿಂಗರಿಸುವ ತರೇವಾರಿ ಸರಗಳು, ಕೈಗಳನ್ನು ಅಂದಗೊಳಿಸುವ ಬಳೆಗಳು….
ಅವಳು ಹೇಳುತ್ತಾನೇ ಇದ್ದಳು….
ರಸ್ತೆಯಂತೆ
ಅವಳ “ಚೆಲುವಿನ ಕನಸು”ಗಳಿಗೆ ಕೊನೆ ಕಾಣಲಿಲ್ಲ.
 

‍ಲೇಖಕರು G

14 July, 2015

3 Comments

  1. praveen

    chennagi barediddiri.

  2. ಲಕ್ಷ್ಮೀಕಾಂತ ಇಟ್ನಾಳ

    ಚಲುವಾದ ಬರವಣಿಗೆ, ಝುಮಕಿಗಳು,,,, ಆಭರಣಗಳ ವ್ಯಾಮೋಹ ಹೆಣ್ಣಿಗೆ ರಕ್ತಗತ..ರಸ್ತೆಯಂತೆ ಚಲುವಿನ ಕನಸುಗಳಿಗೆ ಕೊನೆಯೆಂಬುದಿಲ್ಲ ಎಂಥ ಚಂದದ ಸಾಲು, ವಂದನೆಗಳು.

  3. Chitra Santhosh

    Thank u praveen and Lakshmikanth

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading