ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಸಿಂದಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

50

ಸಿಂದಿ ಬಾಶೆ ಕರ‍್ನಾಟಕದ ಇಪ್ಪತ್ನಾಲ್ಕನೆ ಅತಿದೊಡ್ಡ ಬಾಶೆ. ಬಾರತದಲ್ಲಿ ಸಿಂದಿ ಮಾತಾಡುವ 27,72,264 ಮಂದಿ ದಾಕಲಾಗಿದ್ದಾರೆ. ಕರ‍್ನಾಟಕದಲ್ಲಿ ದಾಕಲಾದ ಸಿಂದಿ ಬಾಶೆಯ ಮಾತುಗರ ಸಂಕೆ 16,954 ಆಗಿದೆ. ಇದು ಕರ‍್ನಾಟಕದ 0.027% ಪ್ರತಿಶತ ಮತ್ತು ದೇಶದ ಒಟ್ಟು ಸಿಂದಿಯ 0.611% ಆಗುತ್ತದೆ. ಸಿಂದಿಯಲ್ಲಿ ಬಾಟಿಯ, ಕಚ್ಚಿ ಮತ್ತು ಸಿಂದಿ ಎಂಬ ಮೂರು ತಾಯ್ಮಾತುಗಳನ್ನು ಮತ್ತು ಇತರ ಎಂಬ ಒಂದು ಗುಂಪನ್ನು ಕೊಟ್ಟಿದೆ. ಆದರೆ ಕರ‍್ನಾಟಕದಲ್ಲಿ ಬಾಟಿಯ ದಾಕಲಾಗಿಲ್ಲ. ಕಚ್ಚಿ ಎಂಬ ತಾಯ್ಮಾತಿಗೆ 2,008 ಮಂದಿ ದಾಕಲಾಗಿದ್ದಾರೆ ಮತ್ತು ಇತರ ಎಂಬ ಗುಂಪಿನಲ್ಲಿ ೮ ಮಂದಿ ಇದ್ದಾರೆ. ಉಳಿದ 14,923 ಮಂದಿ ಸಿಂದಿ ಮಾತುಗರಾಗಿದ್ದಾರೆ.

ಸಿಂದಿ ಮಾತುಗರು ಬಹುತೇಕ ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಕಲಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಸಿಂದಿ ಮಾತುಗರ ಸಂಕೆ 11,774 ಆಗಿದೆ. ಇದು ಕರ‍್ನಾಟಕದ ಒಟ್ಟು ಸಿಂದಿ ಜನಸಂಕೆಯ 78.898% ಆಗುತ್ತದೆ. ಬೆಂಗಳೂರು ನಗರ ಹೊರತುಪಡಿಸಿ ಬೆಳಗಾವಿ ಜಿಲ್ಲೆಯಲ್ಲಿ ಸಾವಿರಕ್ಕಿಂತ ಹೆಚ್ಚು ಮಂದಿ ಸಿಂದಿಗರು (1,062) ದಾಕಲಾಗಿದ್ದಾರೆ. ಇದು ಕರ‍್ನಾಟಕದ ಸಿಂದಿಗಳ 7%ಕ್ಕಿಂತ ಹೆಚ್ಚು ಆಗುತ್ತದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಸಿಂದಿ ಮಾತುಗರ ಸಂಕೆ ಒಂದು ಸಾವಿರಕ್ಕಿಂತ ಕಡಿಮೆ ಇದೆ. ಕರ‍್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಸಿಂದಿಯ ದಾಕಲೆ ಇರುವುದು ಕಾಣಿಸುತ್ತದೆ. ಆರು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಉಳಿದ ಇಪ್ಪತ್ತೆರಡು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮಾತ್ರ ಸಿಂದಿ ಮಾತುಗರ ದಾಕಲೆ ಆಗಿಲ್ಲ.

ಇಲ್ಲಿ ಕೆಳಗೆ ಕರ‍್ನಾಟಕ ಸಿಂದಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29714,9230.024%100%
ಬೆಂಗಳೂರು ನಗರ  96,21,55111,7740.122%78.898%
ಬೆಳಗಾವಿ 47,79,6611,0620.022%7.116%
ಶಿವಮೊಗ್ಗ 17,52,7539170.052%6.144%
ಮಯ್ಸೂರು  30,01,1277180.023%4.811%
ದಾರವಾಡ  18,47,0233730.020%2.499%
ಬಳ್ಳಾರಿ 24,52,5952290.009%0.918%
ಬಾಗಲಕೋಟೆ  18,89,7521650.008%1.105%
ವಿಜಯಪುರ 21,77,3311190.005%0.797%
ಕಲಬುರಗಿ  25,66,326820.003%0.549%
ತುಮಕೂರು 26,78,980780.002%0.522%
ರಾಯಚೂರು  19,28,812620.003%0.415%
ಬೀದರ  17,03,300310.001%0.207%
ಗದಗ  10,20,791290.002%0.194%
ದಕ್ಶಿಣ ಕನ್ನಡ  20,89,649280.001%0.187%
ಕೊಪ್ಪಳ 13,89,921150.001%0.100%
ದಾವಣಗೆರೆ 19,45,497157.710%0.100%
ಕೊಡಗು 5,54,519110.001%0.073%
ಕೋಲಾರ 15,36,401106.508%0.067%
ಉತ್ತರ ಕನ್ನಡ 14,37,16985.566%0.053%
ಮಂಡ್ಯ 18,05,76984.430%0.053%
ಉಡುಪಿ  11,77,36175.945%0.046%
ಚಿತ್ರದುರ‍್ಗ 16,59,45642.410%0.026%
ಹಾಸನ 17,76,42142.251%0.026%
ಚಾಮರಾಜನಗರ 10,20,79143.918%0.026%
ಬೆಂಗಳೂರು ಗ್ರಾಮಂತರ 9,90,92344.036%0.026%
ರಾಮನಗರ  10,82,63643.694%0.026%
ಚಿಕ್ಕಮಗಳೂರು 11,37,96121.`757%0.013%
ಯಾದಗಿರಿ  11,74,27118.787%0.006%
ಚಿಕ್ಕಬಳ್ಳಾಪುರ 12,55,10417.967%0.006%

ಸಿಂದಿ ಮಾತುಗರ ಹಂಚಿಕೆ

C:\Users\DELL\Downloads\Distribution of Sindhi(2).jpg

‍ಲೇಖಕರು avadhi

17 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading