ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ರಾಜಸ್ತಾನಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

46

ರಾಜಸ್ತಾನಿ

ರಾಜಸ್ತಾನಿ ಬಾರತದ ರಾಜಸ್ತಾನ ರಾಜ್ಯ ಮತ್ತು ಬಾರತದ ಹಲವಾರು ಇತರ ರಾಜ್ಯಗಳಲ್ಲಿ ಹರಡಿಕೊಂಡಿರುವ ಬಾಶೆಯಾಗಿದೆ. ಆದರೆ, ಇದಕ್ಕೆ ಬಾಶೆ ಎಂಬ ಮರ‍್ಯಾದೆಯನ್ನು ಸರಕಾರ ಕೊಟ್ಟಿಲ್ಲ. ಹಾಗಾಗಿ ದೇಶದಲ್ಲಿ ಕೋಟಿಯಶ್ಟು ಮಂದಿ ಮಾತನಾಡುವ ಬಾಶೆಯಾಗಿದ್ದರೂ ಇದನ್ನು ಹಿಂದಿಯ ಒಳಗೆ ಸೇರಿಸಿದೆ. ದೇಶದಲ್ಲಿ ಒಟ್ಟು ರಾಜಸ್ತಾನಿ ಮಾತಾಡುವವರ ಸಂಕೆ ೨,೫೮,೦೬,೩೪೪ ಆಗಿದೆ. ಕರ‍್ನಾಟಕದಲ್ಲಿ ರಾಜಸ್ತಾನಿಗಳ ಸಂಕೆ ೨೪,೦೮೭ ಆಗಿದೆ, ಇದು ರಾಜ್ಯದ ೦.೦೩೯% ಮಂದಿಯನ್ನು ಒಳಗೊಳ್ಳುತ್ತದೆ. ರಾಜಸ್ತಾನಿಯು ಕರ‍್ನಾಟಕ ರಾಜ್ಯದ ದೊಡ್ಡ ಬಾಶೆಗಳ ಪಟ್ಟಿಯಲ್ಲಿ ಇಪ್ಪತ್ತನೆ ಸ್ತಾನದಲ್ಲಿ ಕಾಣಿಸಿಕೊಳ್ಳುತ್ತದೆ. ಕರ‍್ನಾಟಕವು ದೇಶದ ಒಟ್ಟು ರಾಜಸ್ತಾನಿಗಳ ೦.೦೯೩% ಪ್ರತಿಶತತೆಯನ್ನು ರೂಪಿಸುತ್ತದೆ. 

ಕರ‍್ನಾಟಕದಲ್ಲಿ ರಾಜಸ್ತಾನಿ ಹೆಚ್ಚು ಸಂಕೆಯಲ್ಲಿ ಬೆಂಗಳೂರು ನಗರದಲ್ಲಿ ಕಂಡುಬರುತ್ತದೆ. ಬೆಂಗಳೂರಿನಲ್ಲಿ ರಾಜಸ್ತಾನಿಗಳ ಸಂಕೆ ೧೦,೨೪೪. ಅಂದರೆ ಒಟ್ಟು ಕರ‍್ನಾಟಕದ ೪೨.೫೨೯% ಪ್ರತಿಶತ ಆಗುತ್ತದೆ. ಬೆಂಗಳೂರಿನ ನಂತರ ದಾರವಾಡ (೧,೩೭೮), ಬೆಳಗಾವಿ (೧,೨೦೬) ಮತ್ತು ಮಯ್ಸೂರು (೧,೧೫೬) ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ರಾಜಸ್ತಾನಿಗಳು ದಾಕಲಾಗಿದ್ದಾರೆ. ಇದರ ಜೊತೆಗೆ ಬಳ್ಳಾರಿ (೯೬೦) ಮತ್ತು ಮಂಗಳೂರು (೯೦೨) ಜಿಲ್ಲೆಗಳಲ್ಲಿ ಸಾವಿರಕ್ಕೆ ಹತ್ತಿರದ ರಾಜಸ್ತಾನಿಗಳು ದಾಕಲಾಗಿದ್ದಾರೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ರಾಜಸ್ತಾನಿ ವರದಿಯಾಗಿದೆ. ಇವುಗಳಲ್ಲಿ ಚಾಮರಾಜನಗರ (೬೯) ಮತ್ತು ರಾಮನಗರ (೭೭) ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇದ್ದಾರೆ.

ಇಲ್ಲಿ ಕೆಳಗೆ ಕರ‍್ನಾಟಕದ ರಾಜಸ್ತಾನಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29724,0870.039%100%
ಬೆಂಗಳೂರು ನಗರ  96,21,55110,2440.106%42.529%
ದಾರವಾಡ  18,47,0231,3780.074%5.720%
ಬೆಳಗಾವಿ 47,79,6611,2060.025%5.006%
ಮಯ್ಸೂರು  30,01,1271,1560.038%4.799%
ಬಳ್ಳಾರಿ 24,52,5959600.039%3.985%
ದಕ್ಶಿಣ ಕನ್ನಡ  20,89,6499020.043%3.744%
ಉತ್ತರ ಕನ್ನಡ 14,37,1696320.043%2.623%
ತುಮಕೂರು 26,78,9805920.022%2.457%
ಕೊಪ್ಪಳ 13,89,9215780.041%2.399%
ಬಾಗಲಕೋಟೆ  18,89,7525710.030%2.370%
ಹಾಸನ 17,76,4215420.030%2.250%
ರಾಯಚೂರು  19,28,8125150.026%2.138%
ವಿಜಯಪುರ 21,77,3314650.021%1.930%
ಶಿವಮೊಗ್ಗ 17,52,7534200.023%1.743%
ಗದಗ  10,20,7914180.040%1.735%
ಕಲಬುರಗಿ  25,66,3263900.015%1.619%
ಚಿಕ್ಕಮಗಳೂರು 11,37,9613270.028%1.357%
ದಾವಣಗೆರೆ 19,45,4973250.016%1.349%
ಮಂಡ್ಯ 18,05,7693220.017%1.336%
ಕೋಲಾರ 15,36,4013010.019%1.249%
ಉಡುಪಿ  11,77,3612960.025%1.228%
ಹಾವೇರಿ 15,97,6682550.015%1.058%
ಯಾದಗಿರಿ  11,74,2712330.019%0.967%
ಚಿಕ್ಕಬಳ್ಳಾಪುರ 12,55,1042190.017%0.909%
ಬೆಂಗಳೂರು ಗ್ರಾಮಂತರ 9,90,9231980.019%0.822%
ಚಿತ್ರದುರ‍್ಗ 16,59,4561840.011%0.763%
ಕೊಡಗು 5,54,5191600.028%0.664%
ಬೀದರ  17,03,3001520.008%0.631%
ರಾಮನಗರ  10,82,636770.007%0.319%
ಚಾಮರಾಜನಗರ 10,20,791690.006%0.286%

ರಾಜಸ್ತಾನಿ ಮಾತುಗರ ಹಂಚಿಕೆ

D:\writings\ನೂರು ಕೊರಳು\bashe\work-sept22\done\to final\NEW maps\Distribution of Rajastani.jpg

‍ಲೇಖಕರು avadhi

16 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading