ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಬೆಂಗಳೂರು ನಗರ ಬಗ್ಗೆ ಬೆಳಕು

ಚೆಲ್ಲಲಾಗಿದೆ.

20

ಬೆಂಗಳೂರು ನಗರ

ಬೆಂಗಳೂರು ನಗರ ಕರ‍್ನಾಟಕ ರಾಜ್ಯದ ರಾಜದಾನಿಯೂ, ನಗರ ಜಿಲ್ಲೆಯೂ ಆಗಿರುವುದರಿಂದ ಸಹಜವಾಗಿ ಇಲ್ಲಿನ ಬಾಶಿಕ ಪರಿಸರವು ತುಂಬಾ ಸೂಕ್ಶ್ಮವಾಗಿದೆ ಮಾತ್ರವಲ್ಲದೆ ರಾಜ್ಯದ ಇತರ ಬಾಗಗಳಲ್ಲಿನ ಸಂಕೀರ‍್ಣತೆಗಿಂತ ಬೆಂಗಳೂರು ನಗರ ಜಿಲ್ಲೆಯಲ್ಲಿನ ಸಂಕೀರ‍್ಣತೆಯು ಬಿನ್ನವೂ ಆಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ದೊಡ್ಡ ಸಂಕೆಯ ಬಾಶೆಗಳೂ, ತಾಯ್ಮಾತುಗಳೂ ದಾಕಲಾಗಿವೆ. ಕನಿಶ್ಟ ೧೦೭ ಬಾಶೆಗಳು ಮತ್ತು ಕನಿಶ್ಟ ೨೨೬ ತಾಯ್ಮಾತುಗಳು ಇವೆ. ಒಂದು ಕೋಟಿ ಹತ್ತಿರದಶ್ಟು ಮಾತುಗರು ಇರುವ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾದರೂ ಕನ್ನಡದ ಪ್ರತಿಶತತೆ ೪೪% ಇದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಉರ‍್ದು ಬಾಶೆಗಳಿಗೆ ಹತ್ತು ಲಕ್ಶಕ್ಕಿಂತಲೂ ಹೆಚ್ಚು ಮಂದಿ ದಾಕಲಾಗಿದ್ದಾರೆ. ಹಾಗೆಯೆ ಹಿಂದಿ, ಮಲಯಾಳಂ ಮತ್ತು ಮರಾಟಿ ಭಾಶೆಗಳಿಗೆ ಒಂದು ಲಕ್ಶಕ್ಕಿಂತಲೂ ಹೆಚ್ಚಿನ ಮಾತುಗರು ಇದ್ದಾರೆ. ಬಾರತದ ಇತರ ಪ್ರದಾನ ಬಾಶೆಗಳಲ್ಲಿ ಹೆಚ್ಚಿನವುಗಳಿಗೆ ಪರಿಗಣಿಸುವಶ್ಟು ಸಂಕೆಯ ಮಂದಿ ಮಾತುಗರು ಇಲ್ಲಿ ಸಿಗುತ್ತಾರೆ. ಮಾರ‍್ವಾರಿ, ತುಳು ಇಂತಾ ಬಾಶೆಗಳಿಗೂ ಪರಿಗಣಿಸುವಶ್ಟು ಮಂದಿ ಮಾತುಗರು ಸಿಗುತ್ತಾರೆ.

***

ಬೆಂಗಳೂರು ಕರ‍್ನಾಟಕದ ರಾಜದಾನಿಯಾಗಿದ್ದು ನಾಡಿನ ಕೇಂದ್ರವಾಗಿದೆ. ನಾಡಿನ ರಾಜದಾನಿಯಾಗಿರುವ ಕಾರಣ ದೇಶದ ಮೂಲೆಮೂಲೆಯಿಂದ ಬಿನ್ನ ಮಾತುಗಳನ್ನು ಆಡುವವರು ಕಾರಾಣಾಂತರಗಳಿಂದ ಬಂದು ನೆಲೆಸಿದ್ದಾರೆ. ಹಾಗಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಬಹು ಸಂಕೀರ‍್ಣವಾದ ಬಾಶಿಕ ಪರಿಸರವನ್ನು ಕಾಣಬಹುದು. ಮೊದಲಿಗೆ ಇಲ್ಲಿ ಬೆಂಗಳೂರು ನಗರ ಜಿಲ್ಲೆಯ ಜನಗಣತಿ ಒದಗಿಸುವ ಮಾಹಿತಿಯನ್ನು ನೋಡಬಹುದು.

ಬಾಶೆತಾಯ್ಮಾತುಒಟ್ಟುಗಂಡುಹೆಣ್ಣು
ಆಸ್ಸಾಮಿ7,7585,5992,159
ಆಸ್ಸಾಮಿ7,6305,5462,084
ಇತರ1285375
ಬೆಂಗಾಲಿ61,47536,96124,514
ಬೆಂಗಾಲಿ61,40936,90824,501
ಚಕ್ಮಾ524210
ಇತರ14113
ಬೊಡೊ353250103
ಬೊಡೊ/ಬೊರೊ345244101
ಕಚರಿ862
ಡೋಗ್ರಿ457327130
ಡೋಗ್ರಿ457327130
ಗುಜರಾತಿ45,26423,35721,907
ಗುಜರಾತಿ36,02418,61217,412
ಪಟ್ಟಣಿ954
ಪೊಂಚಿ660
ಸವುರಾಶ್ಟ್ರ/ಸವುರಾಶ್ಟ್ರಿ4,0652,1011,964
ಇತರ5,1602,6332,527
ಹಿಂದಿ5,30,2313,13,5102,16,721
ಅವದಿ392514
ಬಗತಿ/ಬಗತಿ ಪಹರಿ734
ಬಗೇಲಿ/ಬಗೇಲ್‍ಕಂಡಿ1367
ಬಂಜಾರಿ1,065556509
ಬರ‍್ಮವುರಿ/ಗಡ್ಡಿ954
ಬೋಜ್ಪುರಿ4,9483,3931,555
ಬ್ರಜ್ ಬಾಶಾ110
ಬುಂದೇಲಿ/ ಬುಂದೇಲಿ ಕಂಡಿ14113
ಚತ್ತೀಸ್‍ಗರಿ714922
ದುಂಡಾರಿ1147
ಗರ‍್ವಾಲಿ23815781
ಗೊಜ್ರಿ/ಗುಜ್ಜಾರಿ/ಗುಜಾರ್110
ಹರಿಯಾಣ್ವಿ444286158
ಹಿಂದಿ4,38,0672,63,1101,74,957
ಜವುನ್ಪುರಿ/ಜವುನ್ಸರಿ110
ಕಡಿಬೋಲಿ541
ಕೊರ‍್ತಾ/ಕೊತ್ತಾ624
ಕುಮವುನಿ1268244
ಕರ‍್ಮಾಲಿ ತಾರ್1486
ಲಮಾಣಿ/ಲಂಬಾಡಿ19,94110,4549,487
ಲೋದಿ321
ಮಗದಿ/ಮಗಹಿ1147737
ಮಾಳ್ವಿ15114
ಮಂಡೇಅಲಿ110
ಮಾರ‍್ವಾರಿ51,72527,51424,211
ಮೇವಾರಿ862
ನಾಗ್ಪುರಿಯ18135
ನಿಮಾಡಿ633
ಪಹರಿ1065650
ಪವಾರಿ/ಪೊವಾರಿ202
ರಾಜಸ್ತಾನಿ10,2445,6644,580
ಸದನ್/ಸದ್ರಿ663333
ಸುಗಾಲಿ251015
ಸುರ‍್ಜಪುರಿ330
ಇತರ2,8741,959915
ಕನ್ನಡ42,78,64622,28,12420,50,522
ಬಡಗ516257259
ಕನ್ನಡ42,77,10022,27,37020,49,730
ಕುರುಬ/ಕುರುಂಬ1286464
ಪ್ರಾಕ್ರುತ/ಪ್ರಾಕ್ರುತ ಬಾಶಾ924547
ಇತರ810388422
ಕಾಶ್ಮೀರಿ2,2521,318934
ಕಾಶ್ಮೀರಿ2,2441,316928
ಕಿಶ್ತ್ವಾರಿ101
ಇತರ725
ಕೊಂಕಣಿ64,76532,24132,524
ಕೊಂಕಣಿ64,29831,98132,317
ಕುಡುಬಿ/ಕುಡುಂಬಿ743
ಮಾಲ್ವಾನಿ954
ನವಾಯಿತಿ255141114
ಗೋರ‍್ಬೋಲಿ/ಗೊರು/ಗೊರ‍್ವಾನಿ1596
ಇತರ 18110180
ಮಯ್ತಿಲಿ1,454897557
ಮಯ್ತಿಲಿ1,418871547
ಪುರ‍್ಬಿ ಮಯ್ತಿಲಿ110
ತಾತಿ342410
ತಾರು110
ಮಲಯಾಳಂ2,83,2761,47,3551,35,921
ಮಲಯಾಳಂ2,82,9561,47,1841,35,772
ಪಣಿಯ523
ಯರವ286147139
ಇತರ29227
ಮಣಿಪುರಿ3,5242,2081,316
ಮಣಿಪುರಿ3,5002,1911,309
ಇತರ24177
ಮರಾಟಿ1,84,65794,14590,512
ಆರೆ724032
ಕೋಳಿ211
ಮರಾಟಿ1,84,45994,03790,422
ಇತರ1246757
ನೇಪಾಲಿ12,9037,5525,351
ನೇಪಾಲಿ12,8937,5485,345
ಇತರ1046
ಓಡಿಯಾ50,18834,62315,565
ಬುಯಿಯ/ಬುಯನ್(ಒರಿ)110
ಓಡಿಯಾ50,12534,59115,534
ಸಂಬಲ್ಪುರಿ22616
ಇತರ402515
ಪಂಜಾಬಿ16,3048,6947,610
ಬಾಗ್ರಿ211
ಪಂಜಾಬಿ16,2838,6837,600
ಇತರ19109
ಸಂಸ್ಕ್ರುತ725403322
ಸಂಸ್ಕ್ರುತ725403322
ಸಂತಾಲಿ16810860
ಮಹಿಲಿ835
ಸಂತಾಲಿ16010555
ಸಿಂದಿ12,5596,1136,446
ಬಾಟಿಯಾ1578
ಕಚ್ಚಿ768379389
ಸಿಂದಿ11,7745,7266,048
ಇತರ211
ತಮಿಳು14,62,6727,41,8797,20,793
ಕೊರವ371918
ತಮಿಳು14,62,6077,41,8427,20,765
ಇತರ281810
ತೆಲುಗು13,46,0956,89,9076,56,188
ತೆಲುಗು13,46,0476,89,8816,56,166
ಇತರ482622
ಉರ‍್ದು11,65,4386,00,5975,64,841
ಉರ‍್ದು11,65,3616,00,5485,64,813
ಬನ್ಸಾರಿ220
ಇತರ754728
ಆದಿ924547
ಆದಿ301614
ಆದಿ ಗಲ್ಲಂಗ್/ಗಲ್ಲಂಗ್606
ಆದಿ ಮಿನಿಯೊಂಗ್/ಮಿನಿಯೊಂಗ್/101
ತಲ್ಗಾಲೊ211110
ಇತರ341816
ಅಪ್ಗನ್/ಕಾಬುಲಿ/ಪಾಶ್ತೊ12120
ಅಪ್ಗನ್/ಕಾಬುಲಿ/ಪಾಶ್ತೊ12120
ಆನಲ್1275
ಆನಲ್1275
ಅಂಗಾಮಿ412021
ಅಂಗಾಮಿ371918
ಇತರ413
ಆವೊ562927
ಆವೊ241113
ಮೊಂಗ್ಸೇನ್101
ಇತರ311813
ಅರಾಬಿಕ್/ಅರ‍್ಬಿ39532570
ಅರಾಬಿಕ್/ಅರ‍್ಬಿ39532570
ಬಿಲಿ/ಬಿಲೊಡಿ1175958
ಬಾವೋರಿ211
ಬಿಲಿ/ಬಿಲೊಡಿ101
ಕೊಕ್ನ/ಕೊಕ್ನಿ/ಕುಕ್ನ221111
ತದವಿ312
ವಾಗ್ದಿ844
ಇತರ814239
ಬೊಟಿಯ1578275
ಬೊಟಿಯ20911
ಇತರ1377364
ಬುಮಿಜ್963
ಇತರ963
ಬಿಶ್ಣುಪ್ರಿಯಾ1596
ಬಿಶ್ಣುಪ್ರಿಯಾ ಮಣಿಪುರಿ/ಮಣಿಪುರಿ211
ಇತರ1385
ಚಕೆಸಂಗ್101
ಚಕೆಸಂಗ್101
ಚಕ್ರು/ಚೊಕ್ರಿ1165
ಚಕ್ರು/ಚೊಕ್ರಿ1165
ಚಾಂಗ್211
ಚಾಂಗ್211
ಕೂರ‍್ಗಿ/ಕೊಡಗು17,5968,7408,856
ಕೂರ‍್ಗಿ/ಕೊಡಗು10,4375,0965,341
ಕೊಡವ7,1593,6443,515
ದೆವೋರಿ220
ದೆವೋರಿ220
ದಿಮಾಸಾ13103
ದಿಮಾಸಾ13103
ಇಂಗ್ಲೀಶು17,1448,6438,501
ಇಂಗ್ಲೀಶು17,1448,6438,501
ಗಾಂಗ್ಟೆ1064
ಗಾಂಗ್ಟೆ1064
ಗಾರೊ331320
ಗಾರೊ331320
ಗೊಂಡಿ1336667
ದೊರ‍್ಲಿ110
ಗೊಂಡಿ660
ಕಲರಿ422
ಇತರ1225765
ಹಲಂ431
ಹಲಂ211
ಇತರ220
ಹ್ಮರ್231013
ಹ್ಮರ್231013
ಹೊ1587
ಹೊ1587
ಜಟಾಪು633
ಇತರ633
ಕಬುಇ412516
ಕಬುಇ642
ರೊಂಗ್ಮೆಯಿ352114
ಕರ‍್ಬಿ/ಮಿಕಿರ್26206
ಕರ‍್ಬಿ/ಮಿಕಿರ್26206
ಕಾಂದೇಶಿ321
ಅಹಿರಣಿ321
ಕರಿಯಾ481929
ಕರಿಯಾ461927
ಇತರ202
ಕಾಸಿ18782105
ಕಾಸಿ1667294
ಪ್ನಾರ್/ಸಿಂಟೆಂಗ್1899
ಇತರ312
ಕೆಜಾ312
ಕೆಜಾ202
ಇತರ110
ಕೊಂಡ/ಕೊಂದ110
ಕೊಂಡ/ಕೊಂದ110
ಕಿನ್ನವುರಿ22148
ಕಿನ್ನವುರಿ22148
ಕಿಸಾನ್321
ಕಿಸಾನ್321
ಕೊಚ್202
ಕೊಚ್202
ಕೊಡ/ಕೊರ17125
ಕೊಡ/ಕೊರ17125
ಕೊಮ್21813
ಕೊಮ್21813
ಕೊಂಡ514
ಕೊಂಡ514
ಕೊನ್ಯಕ್440
ಕೊನ್ಯಕ್440
ಕೊರ‍್ಕು431
ಕೊರ‍್ಕು431
ಕೊರ‍್ವ27207
ಇತರ27207
ಕುಇ422
ಕುಇ422
ಕುಕಿ954847
ಕುಕಿ924547
ಇತರ330
ಕುರುಕ್/ಓರಆನ್723438
ಕುರುಕ್/ಓರಆನ್703337
ಇತರ211
ಲಡಾಕಿ62548
ಲಡಾಕಿ62548
ಲಹಂದ955342
ಹಿಂದಿ ಮುಲ್ತಾನಿ1477
ಇತರ814635
ಲಕೇರ್251312
ಮರ251312
ಲೆಪ್ಚ19910
ಲೆಪ್ಚ19910
ಲಿಂಬು413
ಲಿಂಬು413
ಲೊತಾ391722
ಲೊತಾ391722
ಲುಶಾಯಿ/ಮಿಜೊ 396168228
ಲುಶಾಯಿ/ಮಿಜೊ396168228
ಮಾಲ್ತೊ110
ಪಹರಿಯ110
ಮಾವೊ251015
ಮಾವೊ1037
ಪವಲ1578
ಮರಂ505
ಮರಂ505
ಮರಿಂಗ್853
ಮರಿಂಗ್853
ಮಿರಿ/ಮಿಶಿಂಗ್853
ಮಿರಿ/ಮಿಶಿಂಗ್853
ಮಿಶ್ಮಿ220
ಇತರ220
ಮೊಗ್32311
ಮೊಗ್31310
ಇತರ101
ಮೊನ್ಪ25187
ಮೊನ್ಪ25187
ಮುಂಡ614120
ಮುಂಡ25169
ಇತರ362511
ಮುಂಡಾರಿ31274
ಮುಂಡಾರಿ31274
ನಿಕೊಬಾರಿಸ್330
ನಿಕೊಬಾರಿಸ್330
ನಿಸ್ಸಿ/ದಪ್ಲ15510
ಅಪ್ತಾನಿ835
ನಿಸ್ಸಿ/ದಪ್ಲ312
ತಗಿನ್413
ನೊಕ್ಟೆ220
ನೊಕ್ಟೆ220
ಪಯ್ತೆ1145559
ಪಯ್ತೆ1145559
ಪೊಚುರಿ110
ಇತರ110
ರಬಾ220
ರಬಾ220
ರೆಂಗ್ಮ550
ರೆಂಗ್ಮ550
ಸಂಗ್ಟಂ101
ಸಂಗ್ಟಂ101
ಸವರ563323
ಸವರ563323
ಸೆಮಾ301515
ಸೆಮಾ301515
ಶೆರ‍್ಪಾ321
ಶೆರ‍್ಪಾ321
ಶಿನಾ101
ಇತರ101
ತಮಂಗ್312
ತಮಂಗ್312
ತಂಗ್‍ಕುಲ್20593112
ತಂಗ್‍ಕುಲ್20492112
ಇತರ110
ತಂಗ್ಸಾ23176
ಇತರ23176
ತಾಡೊ1247945
ತಾಡೊ1076839
ಇತರ17116
ಟಿಬೆಟನ್492222270
ಟಿಬೆಟನ್486218268
ಪುರ‍್ಕಿ422
ಇತರ220
ತ್ರಿಪುರಿ956035
ಕೊಕ್‍ಬರಕ್573621
ರೆಅಂಗ್312
ತ್ರಿಪುರಿ31229
ಇತರ413
ತುಳು47,12424,34822,776
ತುಳು47,04324,30822,735
ಇತರ814041
ವಯ್ಪೆ371918
ವಯ್ಪೆ371918
ವಾಂಚೊ101
ವಾಂಚೊ101
ಯಿಂಚುಂಗ್ರೆ431
ಚಿರ್220
ತಿಕಿರ್110
ಯಿಂಚುಂಗ್ರೆ101
ಜೆಮಿ651
ಜೆಮಿ651
ಜೊವು18135
ಜೊವು18135
ಇತರ4,7002,6522,048

ಬಾರತದಲ್ಲಿ ಜನಗಣತಿ ವರದಿ ಮಾಡಿದ ಅನುಸೂಚಿತ ಮತ್ತು ಅನುಸೂಚಿತವಲ್ಲದ ಬಾಶೆಗಳ ಒಟ್ಟು ಸಂಕೆ 121. ಇವುಗಳಲ್ಲಿ ಒಟ್ಟು 106 ಬಾಶೆಗಳು ಬೆಂಗಳೂರು ನಗರ ಜಿಲ್ಲೆಯಿಂದ ವರದಿಯಾಗಿವೆ. ಎಲ್ಲ ಅನುಸೂಚಿತ ಮತ್ತು 84 ಅನುಸೂಚಿತವಲ್ಲದ ಬಾಶೆಗಳು ಇವೆ. ಇದರೊಟ್ಟಿಗೆ ಇತರ ಎಂಬ ಗುಂಪಿನಲ್ಲಿ 4,700 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಬರಿಯ ಒಂದು ಬಾಶೆ ಮಾತ್ರ ಎಂದು ಲೆಕ್ಕಿಸಿದರೂ ಬೆಂಗಳೂರು ಜಿಲ್ಲೆಯಲ್ಲಿ ದಾಕಲಾದ ಬಾಶೆಗಳು 107. ಈ ಬಾಶೆಗಳಲ್ಲಿ 226 ತಾಯ್ಮಾತುಗಳು ಇವೆ. ಇವು ಕರ‍್ನಾಟಕದ ಜಿಲ್ಲೆಯೊಂದರಲ್ಲಿ ದಾಕಲಾದ ಅತಿ ಹೆಚ್ಚು ಸಂಕೆಯ ಬಾಶೆಗಳು ಮತ್ತು ತಾಯ್ಮಾತುಗಳು.

ಬೆಂಗಳೂರು ನಗರ ಜಿಲ್ಲೆಯ ಒಟ್ಟು ಜನಸಂಕೆ 96,21,551. ಕನ್ನಡವು ಇಲ್ಲಿನ ಪ್ರದಾನ ಬಾಶೆಯಾಗಿದ್ದು, 42,78,646 ಮಂದಿ ಮಾತುಗರು ಇದ್ದಾರೆ. ಇದು ಜಿಲ್ಲೆಯ ಒಟ್ಟು 44.469% ಆಗುತ್ತದೆ. ಅಂದರೆ ಕನ್ನಡ ಮಾತುಗರು ಬೆಂಗಳೂರಿನಲ್ಲಿ ಅರ‍್ದಕ್ಕೂ ಕಡಿಮೆ ಮಂದಿ ಇದ್ದಾರೆ. ಇದರ ಹೊರತಾಗಿ ತಮಿಳು ಮಾತುಗರು 14,62,672 (15.202%), ತೆಲುಗು ಮಾತುಗರು 13,46,095 (13.990%) ಮತ್ತು ಉರ‍್ದು ಮಾತುಗರು 11,65,438 (12.112%) ಮಂದಿ ಇದ್ದಾರೆ. ಈ ನಾಲ್ಕು ಬಾಶೆಗಳಿಗೆ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಬೇರಾವುದೆ ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳು ಇಶ್ಟು ಕಾಣಿಸುವುದಿಲ್ಲ. ಇದರ ನಂತರ, ಹಿಂದಿ ಮಾತಾಡುವ 5,30,231 (5.510%), ಮಲಯಾಳಂ ಮಾತಾಡುವ 2,83,276 (2.940%), ಮರಾಟಿ ಮಾತಾಡುವ 1,84,657 (1.919%) ಮಂದಿ ಇದ್ದಾರೆ. ಈ ಮೂರು ಬಾಶೆಗಳಿಗೆ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಸಂಕೆಯ ಮಾತುಗರು ಇದ್ದಾರೆ. ಇನ್ನುಳಿದಂತೆ ಹತ್ತು ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಕೊಂಕಣಿ – 64,765 (0.673%), ಬೆಂಗಾಲಿ – 61,475 (0.638%), ಓಡಿಯಾ – 50,188 (0.521%), ತುಳು – 47,124 (0.489%), ಗುಜರಾತಿ – 45,264 (0.470%), ಕೊಡವ – 17,596 (0.182%), ಇಂಗ್ಲೀಶು -17,144 (0.178%), ಪಂಜಾಬಿ – 16,304 (0.169%), ನೇಪಾಲಿ – 12,903 (0.134%) ಮತ್ತು ಸಿಂದಿ – 12,559 (0.130%). ಹತ್ತು ಸಾವಿರಕ್ಕಿಂತ ಕಮ್ಮಿ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ನಾಲ್ಕು ಬಾಶೆಗಳು ಇವೆ, ಆಸ್ಸಾಮಿ – 7,758 (0.080%), ಮಣಿಪುರಿ – 3,524 (0.036%), ಕಾಶ್ಮೀರಿ – 2,252 (0.023%) ಮತ್ತು ಮಯ್ತಿಲಿ – 1,454 (0.015%). ಇವುಗಳೊಂದಿಗೆ ಇತರ ಎಂಬ ಗುಂಪಿನಲ್ಲಿಯೂ 4,700 (0.048%) ಮಂದಿ ದಾಕಲಾಗಿದ್ದಾರೆ. ಹದಿನಾಲ್ಕು ಬಾಶೆಗಳಿಗೆ ಒಂದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಅವುಗಳೆಂದರೆ, ಸಂಸ್ಕ್ರುತ, ಟಿಬೆಟನ್, ಡೋಗ್ರಿ, ಲುಶಾಯಿ/ಮಿಜೊ, ಅರಾಬಿಕ್/ಅರ‍್ಬಿ, ಬೊಡೊ, ತಂಗ್‍ಕುಲ್, ಕಾಸಿ, ಸಂತಾಲಿ, ಬೊಟಿಯ, ಗೊಂಡಿ, ತಾಡೊ, ಬಿಲಿ/ಬಿಲೊಡಿ ಮತ್ತು ಪಯ್ತೆ. ಒಂದು ನೂರಕ್ಕಿಂತ ಕಡಿಮೆ ಮಂದಿ ಮಾತುಗರು ಇರುವ ಬಾಶೆಗಳು ಎಪ್ಪತ್ತೊಂದು ಇವೆ. ಈ ಬಾಶೆಗಳನ್ನು ಕೆಳಗಿನಂತೆ ವಿನ್ಯಾಸಗೊಳಿಸಿ ನೋಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ42,78,646
’’ತಮಿಳು14,62,67215.202%
’’ತೆಲುಗು13,46,09513.990%
’’ಉರ‍್ದು11,65,438 12.112%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಹಿಂದಿ5,30,231 5.510%
’’ಮಲಯಾಳಂ2,83,2762.940%
’’ಮರಾಟಿ1,84,6571.919%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಕೊಂಕಣಿ64,7650.673%
’’ಬೆಂಗಾಲಿ61,4750.638%
’’ಓಡಿಯಾ50,1880.521%
’’ತುಳು47,1240.489%
’’ಗುಜರಾತಿ45,2640.470%
’’ಕೊಡವ17,5960.182%
’’ಇಂಗ್ಲೀಶು17,1440.178%
’’ಪಂಜಾಬಿ16,3040.169%
’’ನೇಪಾಲಿ12,9030.134%
’’ಸಿಂದಿ12,5590.130%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಆಸ್ಸಾಮಿ7,7580.080%
’’ಇತರ4,7000.048%
’’ಮಣಿಪುರಿ3,5240.036%
’’ಕಾಶ್ಮೀರಿ2,2520.023%
’’ಮಯ್ತಿಲಿ1,4540.015%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಸಂಸ್ಕ್ರುತ, ಟಿಬೆಟನ್, ಡೋಗ್ರಿ, ಲುಶಾಯಿ/ಮಿಜೊ, ಅರಾಬಿಕ್/ಅರ‍್ಬಿ, ಬೊಡೊ, ತಂಗ್‍ಕುಲ್, ಕಾಸಿ, ಸಂತಾಲಿ, ಬೊಟಿಯ, ಗೊಂಡಿ, ತಾಡೊ, ಬಿಲಿ/ಬಿಲೊಡಿ, ಪಯ್ತೆ4,0230.041%
ನೂರಕ್ಕಿಂತ ಕಡಿಮೆ ಎಪ್ಪತ್ತೊಂದು ಬಾಶೆಗಳು1,503
ಒಟ್ಟು ಮಾತುಗರು96,21,551100%

ಜಿಲ್ಲೆಯ ಬಾಶೆಗಳ ಒಳಗಿನ ತಾಯ್ಮಾತುಗಳನ್ನು ತುಸು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಬಗೆಗೆ ತುಸು ಬಿನ್ನವಾದ ವಿಚಾರಗಳನ್ನು ತಿಳಿದುಕೊಳ್ಳಲು ಸಾದ್ಯವಾಗುತ್ತದೆ.

ಗುಜರಾತಿ ಬಾಶೆಗೆ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಮಾತುಗರು 45,264. ಇದರಲ್ಲಿ ಗುಜರಾತಿ ತಾಯ್ಮಾತಿಗೆ 36,024, ಸವುರಾಶ್ಟ್ರಿಗೆ 4,065 ಮಂದಿ ಮತ್ತು ಇತರ ಎಂಬ ಗುಂಪಿನಲ್ಲಿ 5,160 ಮಂದಿ ಇದ್ದಾರೆ. 

ಹಿಂದಿಯೊಳಗೆ ಒಟ್ಟು ಮೂವತ್ತೆಂಟು ತಾಯ್ಮಾತುಗಳು ಜಿಲ್ಲೆಯಲ್ಲಿ ದಾಕಲಾಗಿವೆ. ಇದರಲ್ಲಿ ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವಾಗುವ ತಾಯ್ಮಾತುಗಳನ್ನು ಇಲ್ಲಿ ಪಟ್ಟಿಸಿದೆ. ಬಂಜಾರಿಗೆ ಸಾವಿರಕ್ಕೂ (1,065) ಹೆಚ್ಚು ಮಂದಿ ಇದ್ದಾರೆ, ಆದರೆ ಇದನ್ನು ಲಂಬಾಣಿಯೊಳಗೆ ಸೇರಿಸಿದೆ.

ಹಿಂದಿ5,30,231100%
ಬಂಜಾರಿ1,0650.200%
ಬೋಜ್ಪುರಿ4,9480.933%
ಹಿಂದಿ4,38,06782.618%
ಲಮಾಣಿ19,9413.760%
ಮಾರ‍್ವಾರಿ51,7259.755%
ರಾಜಸ್ತಾನಿ10,2441.931%
ಇತರ2,8740.542%

ಇದರಲ್ಲಿ ಅಯ್ದು ತಾಯ್ಮಾತುಗಳಿಗೆ ಮತ್ತು ಇತರ ಎಂಬ ಗುಂಪಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮಾತುಗರು ಇದ್ದಾರೆ. ಹಿಂದಿ ತಾಯ್ಮಾತಿಗೆ 4,38,067 ಮಂದಿ ಇದ್ದು ದೊಡ್ಡಪ್ರಮಾಣದ ಹಿಂದಿ ಬಾಶೆಯ ಆಡುಗರು (82.618%) ಹಿಂದಿಯನ್ನು ಆಡುವವರು. ಲಮಾಣಿ (19,941) ಮತ್ತು ಬಂಜಾರಿ 1,065 ಇವುಗಳನ್ನು ಸೇರಿಸಿದಾಗ ಲಂಬಾಣಿಗೆ 21,006 ಆಗುತ್ತಾರೆ. ಹಿಂದಿಯೊಳಗಿನ ಮೂರು ಬಾಶೆಗಳಿಗೆ ಹತ್ತು ಸಾವಿರಕ್ಕೂ ಹೆಚ್ಚಿನ ಮಾತುಗರು ಇದ್ದಾರೆ. ಇವು ಮಾರ‍್ವಾರಿ (51,725), ಲಂಬಾಣಿ (21,006) ಮತ್ತು ರಾಜಸ್ತಾನಿ (10,244). ಹಾಗೆಯೆ ಬೋಜ್ಪುರಿಗೆ 4,948 ಮಂದಿ ಇದ್ದಾರೆ. ಈಗ ಹಿಂದಿ ಅದೆ ಸ್ತಾನದಲ್ಲಿ ಮುಂದುವರೆಯುತ್ತದೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳ ಪಟ್ಟಿಗೆ ಮಾರ‍್ವಾರಿ, ಲಂಬಾಣಿ ಮತ್ತು ರಾಜಸ್ತಾನಿ ಸೇರುತ್ತವೆ. ಹಾಗೆಯೆ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರ ಬಾಶೆಗಳ ಪಟ್ಟಿಗೆ ಬೋಜ್ಪುರಿ ಸೇರುತ್ತದೆ. ಹಿಂದಿ ಇತರ ಗುಂಪಿನಲ್ಲಿಯೂ 2,874 ಮಂದಿ ಕಾಣಿಸುತ್ತಾರೆ.

ಈ ಮೇಲಿನ ಚರ‍್ಚೆಯನ್ನು ತಾಯ್ಮಾತುಗಳ ಸಂಕೆಯೊಂದಿಗೆ ಗಮನಕ್ಕೆ ತೆಗೆದುಕೊಂಡು ಬೆಂಗಳೂರಿನ ಬಾಶೆಗಳನ್ನು ಮರುವಿನ್ಯಾಸಗೊಳಿಸಿ ಇಲ್ಲಿ ಕೆಳಗೆ ಮರುಪಟ್ಟಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ42,77,10044.453%
’’ತಮಿಳು14,62,60715.201%
’’ತೆಲುಗು13,46,04713.989%
’’ಉರ‍್ದು11,65,36112.111%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಹಿಂದಿ4,38,0674.552%
’’ಮಲಯಾಳಂ2,82,9562.940%
’’ಮರಾಟಿ1,84,4591.917%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಕೊಂಕಣಿ64,2980.668%
’’ಬೆಂಗಾಲಿ61,4090.638%
’’ಮಾರ‍್ವಾರಿ51,7250.537%
’’ಓಡಿಯಾ50,1250.520%
’’ತುಳು47,0430.488%
’’ಗುಜರಾತಿ45,2640.374%
’’ಲಂಬಾಣಿ21,0060.218%
’’ಕೊಡವ17,5960.182%
’’ಇಂಗ್ಲೀಶು17,1440.178%
’’ಪಂಜಾಬಿ16,2830.169%
’’ನೇಪಾಲಿ12,8930.134%
’’ಸಿಂದಿ11,7740.122%
’’ರಾಜಸ್ತಾನಿ10,2440.106%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಆಸ್ಸಾಮಿ7,7580.080%
’’ಬೋಜ್ಪುರಿ4,9480.051%
’’ಇತರ4,7000.048%
’’ಮಣಿಪುರಿ3,5240.036%
’’ಹಿಂದಿ-ಇತರ2,8740.029%
’’ಕಾಶ್ಮೀರಿ2,2520.023%
’’ಮಯ್ತಿಲಿ1,4540.015%

ಮೇಲೆ ನೋಡಿದ ಪಟ್ಟಿಯ ಅನುಕ್ರಮಣಿಕೆಯಲ್ಲಿ ಮಹತ್ತರ ಬದಲಾವಣೆ ಆಗುವುದಿಲ್ಲವಾದರೂ ಹತ್ತು ಸಾವಿರ ಬಾಶೆಗಳ ಪಟ್ಟಿಗೆ ಮೂರು ಹೊಸ ಬಾಶೆಗಳು ಸೇರಿಕೊಂಡು ಒಟ್ಟು ಇಪ್ಪತ್ತು ಬಾಶೆಗಳಾಗುತ್ತವೆ. ಬೋಜ್ಪುರಿ ಒಂದು ಸಾವಿರಕ್ಕಿಂತ ಹೆಚ್ಚು ಮತ್ತು ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಸೇರುತ್ತದೆ.

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಬೆಂಗಳೂರು96,21,551ಕನ್ನಡ42,77,10044.453%1
ತಮಿಳು14,62,60715.201%2
ತೆಲುಗು13,46,04713.989%3
ಉರ‍್ದು11,65,36112.111%4
ಹಿಂದಿ4,38,0674.552%5
ಮಲಯಾಳಂ2,82,9562.940%6
ಮರಾಟಿ1,84,4591.917%7
ಕೊಂಕಣಿ64,2980.668%8
ಬೆಂಗಾಲಿ61,4090.638%9
ಮಾರ‍್ವಾರಿ51,7250.537%10

‍ಲೇಖಕರು Admin

July 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: