ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವಣ್ಣ ಬಂದೇನು ಮಾಡುವೆ ಆಧುನಿಕ ಜಗದಲ್ಲಿ..

ಡಾ|| ಶಿವಾನಂದ ಕುಬಸದ

ಬರಬೇಡ ಬಸವಣ್ಣ
ಇನ್ನೊಮ್ಮೆ ಇಹದಲ್ಲಿ
ಬಂದೇನು ಮಾಡುವೆ
ಆಧುನಿಕ ಜಗದಲ್ಲಿ
 
ಕಳಬೇಡ ಎಂದೆಯಾ
ನಾವೇನು ಕಳ್ಳರೇ
ಗಿರಿಯ ನೆತ್ತಿಯ ಗುದ್ದಿ
ಖನಿಜಗಳ ಪುಡಿಮಾಡಿ
ಮಣ್ಣನೂ ಧೂಳನೂ ಬಿಡದೆ
ದೇಶಾಂತರಿಸಿ ಸಿರಿತನವ ಪಡೆದಿಹೆವು
ಕಳ್ಳರೇಕಾದೇವು

ಕೊಲಬೇಡ ಎಂದೆ ನೀ
ಬದುಕೋಣ ಹೇಗೆ
ಒಬ್ಬನನು ಕೊಂದರೆ ಇನ್ನೊಬ್ಬ ಬದುಕುವುದು
ನಿನ್ನ ಕಾಲಕೆ ನೀನು
ಹೇಳಿದ್ದು ಸರಿಯಾಯ್ತು
ನಮ್ಮ ಬದುಕಲಿ ನೀನು
ತಲೆ ಹಾಕದಿದ್ದರೊಳಿತು
 
ಹುಸಿಯ ನುಡಿಯೆವು
ನಾವು ಇಂದಿಗೂ ಎಂದಿಗೂ
ಮುಂಜಾನೆಗೊಂದು ಸತ್ಯ
ಸಂಜೆಗೆೆ ಇನ್ನೊಂದು
ಮುಂಜಾನೆಯ ಸತ್ಯಕೂ ಸಂಜೆಯ ಸತ್ಯಕೂ ವ್ಯತ್ಯಾಸ ಕಂಡರೆ ತಪ್ಪು ನಮದಲ್ಲ
ಆಗ ಅದು ಸತ್ಯ ಈಗ ಇದೇ ಸತ್ಯ
 
ಮುನಿಯುತ್ತಿಲ್ಲ ನಾವು
ಎಂಥ ಸಂದರ್ಭಗಳಲೂ
ಮುನಿದರೆ ಸುಖವಿಲ್ಲ ಎಂಬುದನ ಬಲ್ಲೆವು
ಬೆಣ್ಣೆಯಲಿ ಕೂದಲೆಳೆದಂತೆ
ಮಾತಾಡಿ ನಗು ನಗುತ
ಮರುಳು ಮಾಡುತ ಜನರ
ಸುಖದಿಂದ ಬದುಕಿಹೆವು
 
ಅನ್ಯರಿಗೆ ಅಸಹ್ಯ ಪಡುವ
ಅವಶ್ಯಕತೆ ನಮಗಿಲ್ಲ
ನಮ್ಮಲ್ಲೇ ಸಾಕಷ್ಟಿದೆ ಅಸಹ್ಯಪಡುವಂಥದು
ಮೋಸ ವಂಚನೆ ಈಗ
ಜಗದ ನಿಯಮವಿರಲು
ಸಂಪತ್ತು ಗಳಿಸಿಹೆವು
ಹತ್ತು ಸಂತತಿಗೂ ಮಿಗುವಷ್ಟು
 
ನಮ್ಮ ಬಣ್ಣನೆ ನಮಗೆ
ಎಂದಿಗೂ ಮನಸಿಲ್ಲ
ವಂದಿ ಮಾಗಧರಂತೆ ಜನರನ್ನು ಸಾಕಿಹೆವು
ಪುಟ ತುಂಬ ಹೊಗಳಿಕೆಯ
ಪ್ರಕಟಿಸುವ ಅಭಿಮಾನಿ
ಜನ ದೊರಕುವರು ಎಲ್ಲೆಲ್ಲೂ
ಪುಡಿಗಾಸಿನಾಸೆಗೆ
 
ಇದಿರ ಹಳಿಯಲು ನಾವು
ಧಡ್ಡ ಶಿಖಾಮಣಿಗಳೇ
ಎದುರಿಗೆ ಇದ್ದಾಗ ಚಂದನೆಯ ನಗೆ ಧರಿಸಿ
ಆಮೇಲೆ ಮಸಲತ್ತು
ಇನ್ನೇನೋ ಕರಾಮತ್ತು
ಮಾಡುವುದ ಬಲ್ಲೆವು
ಇದಿರ ಹಳಿಯುವ ಚಿಂತೆ ನಮಗೇತಕಿಂದು
 
ಅದಕಾಗಿಯೇ…….
ನಿನ್ನ ಸಂಗಯ್ಯನೊಲುಮೆ ನಮಗೇತಕೆ ಬೇಕು
ಇಲ್ಲಿ ಸಲ್ಲುವುದ ಬಲ್ಲೆವು ಅಲ್ಲಿ ಸಲ್ಲಲೇಬೇಕು
ಬರಬೇಡ ಬಸವಣ್ಣ ಇನ್ನೊಮ್ಮೆ ಇಹದಲ್ಲಿ
ಬಂದೇನು ಮಾಡುವೆ ಆಧುನಿಕ ಜಗದಲ್ಲಿ

‍ಲೇಖಕರು G

13 May, 2013

12 Comments

  1. mmshaik

    vangoktiyinda kudida uttama kavana….

  2. anuradha

    superb!

  3. keshava reddy handrala

    BASAVA HUTTI BAARAYYA MATTOMME

  4. Girish.S

    ಚೆನ್ನಾಗಿದೆ ನಿಮ್ಮ ಕವನ,ಮಾರ್ಮಿಕ ಸತ್ಯ.. ಆದರೋ ಬಸವಣ್ಣನ ನುಡಿಗಳು ಎಂದಿಗೂ ಪ್ರಸ್ತುತ ಎನ್ನಿಸುತ್ತದೆ

  5. Sripathi manjanabailu

    athyuttama kavana

  6. ಉದಯಕುಮಾರ್ ಹಬ್ಬು

    ಬಸವಣ್ಣ ಎಲ್ಲ ಕಾಲಕ್ಕೂ ಸಲ್ಲುವವನು. ಆಗಲೂ ಇದ್ದ. ಈಗಲೂ ಇರುವ ನಮ್ಮಂತರಂಗದ ಮಾತಾಗಿ. ಈಗಲೂ ಜನ ಕದಿಯುತ್ತಾರೆ; ಕೊಲ್ಲುತ್ತಾರೆ; ಸುಳ್ಳು ಹೇಳುತ್ತಾರೆ;ತನ್ನ ಬಣ್ಣಿಸುತ್ತಾರೆ; ಇತರರ ಕುರಿತು ಆಸಹ್ಯಪಡುತ್ತಾರೆ; ಹಿಂದಿನಿಂದ ಹಳಿಯುತ್ತಾರೆ; ಅಂತರಂಗ ಅಶುದ್ಧಿಯಿದ್ದವರು ಆಗಲೂ ಇದ್ದರು; ಈಗಲೂ ಇದ್ದಾರೆ; ಬಸವಣ್ಣನನ್ನು ಬರಬೇಡ ಎನ್ನಲು ಅವನು ಇಲ್ಲಿಂದ ಹೋದರೆ ತಾನೇ ಈ ಪ್ರಶ್ನೆ ಏಳುವುದು? ಹಾಗಾಗಬೇಡಿ ಎಂದು ಬಸವಣ್ಣ ಆಗ ಕರೆ ಕೊಟ್ಟಿದ್ದ. ಈಗಲೂ ಕರೆ ಕೊಡುತ್ತಲೇ ಇದ್ದಾನೆ. ಆದರೆ ನಾವು ಬದಲಾಗಲಿಲ್ಲ. ಅಲ್ಲವೇ? ಉದಯಕುಮಾರ ಹಬ್ಬು, ಕಿನ್ನಿಗೋಳಿ

  7. Gopaal Wajapeyi

    Aa vyangya, aa monachu, aa chaati etu… Abbaa… Entha prakhara padagaLu! Basavanna mattomme hutti baaradiralu aa kaaladalle nirdharisrabeku Dr. Kubasada avare…
    Ondu oLLeya kavana kottiddeeri. abhinandanegaLu…

    • ಶಿವಾನಂದ ಕುಬಸದ

      ವಾಜಪೇಯಿಯವರೆ,ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
      ಶೇಖ್,ಅನುರಾಧಾ,ಹಂದ್ರಾಳ,ಗಿರೀಶ,ಶ್ರೀಪತಿ,ಜಯಲಕ್ಷ್ಮಿ,ಉದಯಕುಮಾರ ರವರೆ ತಮ್ಮೆಲ್ಲರಿಗೂ ಧನ್ಯವಾದಗಳು.
      ನಾನು ಬಸವಣ್ಣ ಜನಿಸಿದ ಬಾಗೇವಾಡಿ ತಾಲೂಕಿನಲ್ಲಿ ಜನಿಸಿದ್ದರಿಂದಲೋ ಏನೋ , ಬಸವಣ್ಣ ನನ್ನನ್ನು ಬಾಲ್ಯದಿಂದಲೇ ಆವರಿಸಿಕೊಂಡಿದ್ದಾನೆ. ಬರಬೇಡ ಎಂದು ನಾನು ಅಂದಿದ್ದರಲ್ಲಿ ಅವನು ಬರಲಿ ಎಂಬ ಭಾವವೇ ಇದೆ,ಎಂದು ನಾನು ಬೇರೆ ಹೇಳಬೇಕಾಗಿಲ್ಲ. ದಿನಾಲೂ ನಡೆಯುವ ನಮ್ಮ ಚಟುವಟಿಕೆಗಳು,ಶೀಘ್ರವಾಗಿ ಪತನಗೊಳ್ಳುತ್ತಿರುವ ಸಾಮಾಜಿಕ,ರಾಜಕೀಯ ಮೌಲ್ಯಗಳು ಚಿಂತೆಗೀಡು ಮಾಡುತ್ತಿವೆ. ಸದ್ಯೋಭವಿಷತ್ತಿನಲ್ಲಿ ಅದೇಕೋ ಆಸೆಯ ಗೆರೆ ಕಾಣುತ್ತಿಲ್ಲ.
      ಆದರೂ ಆಶಾವಾದಿಗಳಾಗಿರೋಣ ಅಲ್ಲವೇ…ಯಾವುದೋ ರೂಪದಲ್ಲಿ ಬಸವಣ್ಣ ಬಂದಾನೆಂದು …:)

  8. Jayalaxmi Patil

    ಅರ್ಥವತ್ತಾದ, ಪ್ರಸ್ತುತವನ್ನು ಸ್ಪಷ್ಟವಾಗಿ ಬಿಂಬಿಸಿದ ಕವನ.

  9. D.Ravivarma

    heart touching and also thought provoking….sir…

  10. narayan raichur

    Wah !! adhuta prastuti !! maarmika niroopane ; katu- kathoor satyavannee heliddeeri – aatanka beda ;
    kalaBEDA kolaBEDA husiya nudiyaluBEDA YENDU Boodhisida BASAVARIGE intaha kalushita-pradooshita paradeshakke bara-BEDA yendare adenu negative dhorane yenisadeno !!
    uttama kavanakke abhinandanegalu – bareyuttiri Narayana Raichur (Ranga-vimarshaka-Lekhaka-Rangakarmi_

  11. shivaprakash hm

    nija.. iruva real fact idu..
    channagi barediddiri… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading