ಮಮತಾ ದೇವ

ತಿಳಿ ನೀಲಿ ಬಾನಿನಲಿ ಕಲೆತು ಅಲೆ ಅಲೆಯಾಗಿ
ತೇಲಿ ಹೋಗುತಿಹ ಓ ಮುಗಿಲುಗಳೇ !
ಕರೆ ಕರೆದು ಕೈ ಬೀಸಿದಂತಾಗಿ ನನ್ನನೇ
ಅಡಿಗಡಿಗೆ ದಿಟ್ಟಿಸಿದೆ ನಾ ನಿಮ್ಮನೇ…
ನಿಮ್ಮ ಜೊತೆಯಲೇ ನನ್ನ ಮನವೂ ಬೆರೆತು
ಸಾಗುತಿದೆ ನಿಮ್ಮೊಡನೆ ತೇಲಿ ತೇಲಿ
ನಿಮ್ಮ ಗುರಿ ಏನು..? ಏಕೆ.. ಎಲ್ಲಿಗೆ ..
ಸಾಗಿರುವುದೀ ನಿಮ್ಮ ಪಯಣ ಹೀಗೆ ..
ಬಯಕೆ ಬಿಂಬಗಳೇ ಒಡೆದು ಮೂಡುತಿವೆ
ಏಕೋ ಈ ಒಲುಮೆ ನಿಮ್ಮ ಬಗೆಗೆ..
ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುವಿರಿ
ನೋಡತಿರುವಂತೆಯೇ ಕಣ್ಣ ಮರೆಗೆ..
ಏನೀ ಮರೆಯಲಾರದ ಮಧುರತೆ …
ಕ್ಷಣ ಕ್ಷಣವೂ ನೀವೆನಗೆ ಆತ್ಮೀಯರಾದಂತೆ
ಮನ ನೊಂದು ಮಿಡಿಯುವುದು ಅಗಲಿದಾಗ
ನಿಮ್ಮೊದನೆಯೇ ಬಿಡದೆ ಇರಬೇಕೆಂಬಾಸೆ
ಬರುವೆ ನಾ ನಿಮ್ಮೊಡನೆ ನನ್ನ ಮುಗಿಲುಗಳೇ..
ಆಗದೆ ಹೇಳಿಬಿಡಿ ಹೇ ಜೀವದಾಸೆಗಳೇ ..
ನನ್ನ ಬಯಕೆಗಳೆಲ್ಲ ಬರಿಯ ಕನಸೇ..???






Chennaagide Mamata 🙂
ಮಹತ್ವಾಕಾಂಕ್ಷೆ ಗಳಿಗೆ ಸಂಕೇತವಾಗಿ ಬರುವ ಮುಗಿಲುಗಳ ಒಡನಾಟದ ಬಯಕೆಯನ್ನು ಕ ವಿತೆ ಸರಳವಾಗಿ, . ಸೂ ಚ್ಯವಾಗಿ ಸೂ ಕ್ಷ್ಮವಾಗಿ ನಮ್ಮ ಮುಂದಿಡುವ ಪರಿ ಮನೋಜ್ಞವಾಗಿ ಮೂಡಿ ಬಂದಿದೆ ಕಡೆಯಲ್ಲಿನ ಸಾಲು ವಾಸ್ತವಕ್ಕೆ ಕನ್ನಡಿ ಹಿಡಿದು ನಮ್ಮ ಮಿತಿಯತ್ತ ಬೆರಳು ಮಾಡುವಲ್ಲಿ ಸಫ಼ಲವಾಗಿದೆ. ಒಳ್ಳೆಯ ಕವಿತೆಗಾಗಿ ಅಭಿನಂದನೆಗಳು ಮಮತಾ ದೇವ …. dr.anasuyadevi.
Well written!
Amitha