ಬೀಳಬೇಕೆನಿಸಿದೆ ಮತ್ತೆ ಪ್ರೀತಿಯಲಿ..
– ಕೆ ಎಸ್ ಅಪ್ಪಣ್ಣ
ಕರಗಬೇಕೆನಿಸಿದೆ ..ನಿನ್ನ ತೋಳಿನಲಿ..
ಸೋಲಬೇಕೆನಿಸಿದೆ..ನಿನ್ನಡಿಗಳಲ್ಲಿ…
ಪ್ರೀತಿಯಲಿ ಸೋಲುವುದು ಕೂಡ ಎಂಥಾ ಸೊಗಸು!
ಮರೆಯಬೇಕೆನಿಸಿದೆ ಜಗದ ಚಿಂತೆ..
ಬರೆಯಬೇಕೆನಿಸಿದೆ…ನಿನ್ನೆದೆಯ ಮೇಲೊಂದು ಕವಿತೆ ..
ತೊರೆಯಬೇಕೆನಿಸಿದೆ..ಎಲ್ಲವನೂ..
ಪ್ರೀತಿಯಲಿ..ಕಳೆದು ಕೊಳ್ಳುವುದೂ ಎಂಥಾ ಸೊಗಸು!
ಬೇಡವಾಗಿದೆ..ಯಾರ ಗೊಡವೆ..
ಮರೆತು ಹೋಗಿದೆ ಹಸಿವು..ನಿದಿರೆ..
ಬೆರೆತು ಹೋಗಿದೆ ಮನಸು ನಿನ್ನ ಧ್ಯಾನದಲಿ…
ಪ್ರೀತಿಯಲಿ ಕಳೆದು ಹೋಗುವುದು ಕೂಡ ಎಂಥಾ ಸೊಗಸು!
ಹಂಬಲಿಸಿದೆ ಹೃದಯ,ನಿನ್ನ ಪ್ರೇಮಕ್ಕಾಗಿ..
ಹಾತೊರೆದಿದೆ ಅಧರ ನಿನ್ನೊಲವ ಕಾಣಿಕೆಗಾಗಿ..
ಕಾತರಿಸಿದೆ ಮನಸು,ನಿನ್ನಾಸೆ ಅಪ್ಪುಗೆಗಾಗಿ..
ಪ್ರೀತಿಯಲಿ ಪಡೆದುಕೊಳ್ಳುವುದು..ಒಹ್ ..ಎಂಥಾ ಸೊಗಸು!
ನಡೆಯಬೇಕೆನಿಸಿದೆ ನಿನ್ನ ಜೊತೆಗೆ..
ಬಾಳದಾರಿಯುದ್ದಕ್ಕೂ,
ಬೆಸೆಯಬೇಕೆನಿಸಿದೆ ತೋಳು..,
ನಡೆವ ಹಾದಿಯುದ್ದಕ್ಕೂ…
ಬದುಕಬೇಕೆನಿಸಿದೆ..ಮತ್ತೆ..ಸಾಯುವುದೇ ಇಲ್ಲವೆಂಬಂತೆ…
ಪ್ರೀತಿಯಲಿ ಬದುಕುವುದು …
ಅದೆಂಥಾ ಸೊಗಸು.!!
]]>





ಕವಿತೆಯಲ್ಲಿ ಕಾಣುವ ಭಾವಗಳು ನಿಜ ಜೀವನದಲ್ಲೂ ಕಾಣಲು ಶುರು ಮಾಡಿದಾಗ ಪ್ರೀತಿ ಎಂಬ ಭಾವನೆಗೂ ಬರೆದಿಟ್ಟ ಕವಿತೆಗೂ ವಿಶಿಷ್ಟ ಅರ್ಥ ಸಿಗುತ್ತದೆ.. ಶುಭವಾಗಲಿ..
ನಡೆಯಬೇಕೆನಿಸಿದೆ ನಿನ್ನ ಜೊತೆಗೆ..
ಬಾಳದಾರಿಯುದ್ದಕ್ಕೂ,
ಬೆಸೆಯಬೇಕೆನಿಸಿದೆ ತೋಳು..,
ನಡೆವ ಹಾದಿಯುದ್ದಕ್ಕೂ…
ಬದುಕಬೇಕೆನಿಸಿದೆ..ಮತ್ತೆ..ಸಾಯುವುದೇ ಇಲ್ಲವೆಂಬಂತೆ…
ಪ್ರೀತಿಯಲಿ ಬದುಕುವುದು …
ಅದೆಂಥಾ ಸೊಗಸು.!!
ನಿಮ್ಮ ಕವನದ ಸಾಲುಗಳು ತೀರ ನೇರವಾಗಿ ಹೃದಯಕ್ಕೆ ತಟ್ಟುವನ್ತಿವೆ.
ಪ್ರೀತಿಯಲಿ ಸೋಲುವುದು,ಕಳೆದು ಹೋಗುವುದು,ಕಳೆದುಕೊಳ್ಳುವುದು ,ಪಡೆದುಕೊಳ್ಳುವುದು, ಬದುಕುವುದು …..ಅಬ್ಬ ಇಸ್ಟೆಲ್ಲಾ …….wonderful ಅಂಡ್ excellent .. ನನಗೆ ಈ ಕ್ಷಣದಲ್ಲಿ
ಅಸದುಲ್ಲಃ ಖಾನ್ ಘಾಲಿಬ್ ಅವರ ಈ ಸಾಲುಗಳು ನೆನಪಿಗೆ ಬರ್ತಿವೆ.
Ishq par zor nahein
hai yeh woh aatish ghaalib
ke lagaae na lagey aur bujhaayena baney ..
there is no power above love
nor do we know what it is about
it is like a raging fire,o ghalib
when you want to light it,
it refuses to ignite
when you want to put it out,
it refuses to die.
{absolute khuswant pustikeyalli odiiddu }
d.ravi varma hosapete
..