ಸಾಬೂನು ಮತ್ತು ಸೌಂದರ್ಯ

ವಿನಿ ನಾಯಕ್
ಅಲ್ಲೊಂದು ಜಾಹಿರಾತು;
ಕೇವಲ ಏಳು ದಿನಗಳಲ್ಲಿ
ಮುಖದ ಸುಕ್ಕನ್ನೆಲ್ಲ
ನಿವಾರಿಸಿ
ನಿಮ್ಮನ್ನು ಚಿಕ್ಕವರನ್ನಾಗಿ
ಕಾಣಿಸುವಂತೆ ಚಮತ್ಕಾರ
ಮಾಡುವ ಸಾಬೂನು.
ಅಜ್ಜಿ ನೆನಪಾದಳು
ಮುಖದಲ್ಲಿ ಕೋಮಲ ಸುಕ್ಕುಗಳು
ಬೆಳ್ಳನೆಯ ತಲೆಗೂದಲು
ಪ್ರಶಾಂತವಾಗಿ ಸೆಳೆಯುವ
ಸೌಂದರ್ಯವದು.
ಎತ್ತಿದ್ದು,ಆಡಿಸಿದ್ದು
ಉಣಿಸಿದ್ದು,
ತಟ್ಟಿ ನಿದ್ದೆ ಮಾಡಿಸಿದ್ದು
ಅದೇ ಸುಕ್ಕು ತುಂಬಿದ
ಮೃದುವಾದ ಕೈಗಳು.
ಅಜ್ಜಿಯ ಕೈಗಳನ್ನು
ಹಿಡಿದುಕೊಂಡಾಗಲೆಲ್ಲ
ಅನಿಸಿದ್ದು
ಜಗತ್ತಿನ ಅತಿ ಸುಂದರ
ಸಂಗತಿಯೆಂದರೆ
“ಸುಕ್ಕುಗಳು”
ಮುಖದ ಸುಕ್ಕು ನಿವಾರಿಸುವ
ಸಾಬೂನಿನ
ಅವಶ್ಯಕತೆಯಾದರೂ ಏನಿತ್ತು!
ಸೌಂದರ್ಯದ ವ್ಯಾಖ್ಯಾನ
ವಯಸ್ಸು ಚರ್ಮದ ಬಣ್ಣಗಳನ್ನೆಲ್ಲ
ಮೀರುವಂತದ್ದು.
ಕೆಲವರು ಸುಕ್ಕುಗಳನ್ನು
ಧರಿಸುತ್ತಾರೆ
ಅದ್ಭುತವಾಗಿ ಬದುಕಿದ
ಕುರುಹಿನಂತೆ.
ಇನ್ನೂ ಕೆಲವರು ಬದುಕನ್ನೇ
ಸುಕ್ಕುಗೊಳಿಸುತ್ತಾರೆ.
ಸುಕ್ಕಾದ ಬದುಕನ್ನು
ಸರಿಪಡಿಸುವದಕ್ಕೊಂದು
ಸಾಬೂನಿದ್ದರೆ
ಹೆಚ್ಚು ಪ್ರಸ್ತುತವೆನಿಸುತ್ತಿತ್ತು.





chennagide.
Good
Nice
Dhanyavadagalu
Nice one
ಹಾಯ್ ವಿನಿ, ಸುಕ್ಕಾದ ಬದುಕನ್ನು ಸರಿಪಡಿಸುವ ಸಾಬೂನು- ಒಂದು ಚೆಂದದ ಸಂಗತಿ. ನೀವು ಇನ್ನೂ ಹೆಚ್ಚು ಹೆಚ್ಚು ಪದ್ಯಗಳನ್ನು ಬರೆಯುವಂತಾಗಲಿ:) ಕಾವ್ಯಾ
Thank you Kavya nimma akkareya haraikegalige 🙂
“ಸೌಂದರ್ಯದ ವ್ಯಾಖ್ಯಾನ ವಯಸ್ಸು ಚರ್ಮದ ಬಣ್ಣಗಳನ್ನೆಲ್ಲಾ ಮೀರುವಂತಾದ್ದು” ಸುಂದರ ಸಾಲು. ಸೌಂದರ್ಯದ ಅಮಲಿನಲ್ಲಿ ತೇಲುವವರಿಗೆ ಕಣ್ತೆರೆಸುವ ಸಾಲು.ಕವನ ತುಂಬಾ ಇಷ್ಟವಾಯಿತು ವಿನಿಮಯ.
☺ thank you
ತುಂಬಾ ಇಷ್ಟವಾಯಿತು