ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದಲಿಸಿಬಿಟ್ಟೆ ನೀನು!

 

ಸೌಮ್ಯಶ್ರೀ ಎ.ಎಸ್. / ಮೈಸೂರು

ಉಸಿರುತ್ತಾ ಹಸಿರಾಗಿ
ಕಂಗೊಳಿಸುತ್ತಿದ್ದ ನನ್ನನ್ನು ಕಡಿದು
ಬಡಿದು ನನ್ನೊಡಲ ತಿರುಳನ್ನು ಅರೆದು
ನೋವಲ್ಲಿ ನಲಗುತ್ತಿದ್ದರೂ
ನಿನ್ನದೆಗೆ ಉಸಿರತ್ತ
ನನ್ನನ್ನು ಕನಿಕರಿಸಲೇ ಇಲ್ಲ!

ಬೆಂಕಿಯಂತಹ ರಾಸಾಯನಿಕಗಳ
ಸುರಿದು ಅದ್ಯಾವುದೋ ಯಂತ್ರದೊಳಗಿಟ್ಟು
ಒತ್ತಿದಾಗ ಸತ್ತು ಮತ್ತೆ ಹುಟ್ಟಿದ ಅನುಭಾವ
ನನ್ನ ರೂಪವೇ ಬದಲಾಗಿ ಹೋಗಿತ್ತು
ನಿನ್ನಂತಯೇ ನನ್ನನ್ನು ನಿನ್ನ
ಸ್ವಾರ್ಥಕ್ಕೆ ಬದಲಿಸಿಬಿಟ್ಟೆ!

ಬೆಚ್ಚಗೆ ಬದಲಾದ ರೂಪವ
ನೆನೆದು ರೋದಿಸುತ್ತಾ
ದುಗುಡದಲ್ಲಿ ಅಂಗಾತ ಮಲಗಿದ್ದೆ
ನನ್ನಷ್ಟಕ್ಕೆ ನಾನು!
ಮತ್ತೆನೋ ಪಡೆಯುವ
ಹುಚ್ಚು ಆವೇಶ ನಿನ್ನದೆಯಲ್ಲಿ
ಕುಣಿಯುತ್ತಿತ್ತೇನೋ!

ಮತ್ತೆ ಅದ್ಯಾವುದೋ ಯಂತ್ರದಲ್ಲಿ
ತೂರಿಸಿ ನನ್ನನ್ನಿಟ್ಟೆ ಅರೆಕ್ಷಣ
ಮೈಯೆಲ್ಲಾ ಬೆಂಕಿಯಲ್ಲಿಟ್ಟ ಅನುಭವ
ಅದಾಗ ನನ್ನದೆಯ ಮೇಲೆ ನಿನದೇ
ಮನದ ಅಕ್ಷರಗಳು ಅಚ್ಚಾಗಿದ್ದವು!

ನನ್ನ ಮೇಲೆಮ್ಮೊ ನಿನ್ನ ವಕ್ರ
ದೃಷ್ಟಿ ಬೀರಿ ಕೋಪದಿ
ಮುದುಡಿ ಕಾಲಲ್ಲಿ ಸವೆಟು ಎಸದೆ
ಮತ್ತ್ಯಾರೋ  ಮುದುಡಿದ್ದ ನನ್ನರಳಿಸಿ
ತಮ್ಮ ಇಚ್ಚೆಯಂತೆ ಮಡಚಿದರು
ಅದಾಗ ಮತ್ತೆ ದೋಣಿಯ ರೂಪ ಪಡೆದೆ!

ನನ್ನನ್ನು ಕಣ್ಣರಳಿಸಿ ನೋಡುತ್ತಾ
ಅಳುತ್ತಿದ್ದ ಮಗುವೊಂದು ಕಿಲಕಿಲನೆ
ನಕ್ಕಿತು ಆ ಸಂತಸದಲ್ಲಿ ತೇಲಿದೆ!
ಮತ್ತೆ ಅದ್ಯಾವುದೋ ಗಾಳಿ ಬೀಸಿ
ಮುಳುಗಿ ಹೋದೆ ನಾನು!
ಆ ಸಾವು ನೋವಲ್ಲೂ ಮತ್ತ್ಯಾರದೋ
ತುಂಟಿಯಂಚಲ್ಲಿ ಕ್ಷಣಕಾಲವಾದರೂ
ನಗುವಾದನೆಂದು ಖುಷಿಯಿಂದ
ಕರಗಿಹೋದೆ!

 

‍ಲೇಖಕರು avadhi

28 November, 2019

2 Comments

  1. T S SHRAVANA KUMARI

    ಮರವೊಂದರ ಆಕ್ರಂದನ… ಚೆನ್ನಾಗಿ ಮೂಡಿದೆ. ಕಡೆಯ ಸಾಲುಗಳು ಅರ್ಥಪೂರ್ಣವಾಗಿದೆ.

  2. Nagesh Bidagalu

    ಪಕೃತಿಯ ಮಾರ್ದನಿ ಸೊಗಸಾಗಿ ಮೂಡಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading