ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬತ್ತಲೆಯ ಬದುಕಿದವ..

ನೂತನ ದೋಶೆಟ್ಟಿ

ಉದ್ದಾನುದ್ದ ಕೈ ಸುತ್ತ ಹಬ್ಬಿದ ಬಳ್ಳಿಗಳು
ಗಾಳಿಯ ಮೊರೆತವೊ ಬಿಸಿಲ ಬೇಗೆಯೊ
ಉಕ್ಕುವ ಆಗಸವೋ

ಇತ್ತ ಪರಿವೆಯೇ ಇಲ್ಲ

ಐಭೋಗ ಐಸಿರಿಗೆ
ಮುಚ್ಚಿದ ಕಂಗಳ ಒಳಗೆ
ಹೊತ್ತಿತು ಬೆಳಕು
ಆಭರಣ ವಸ್ತ್ರಾದಿಗಳ ಪೀಡೆ ಬೇಡವೇ ಬೇಡ
ನಿಜದಿಟ್ಟಿಯಲ್ಲಿ ನಿಂತುಬಿಟ್ಟಿತು
ದೈವೀಕತೆ

ಎಲ್ಲ ತೊರೆದವಗೆ ಹೊಯ್ ಹೊಯ್ ಮಜ್ಜನ
ಸುರಿ ಸುರಿವ ಗಂಧ, ಶ್ರೀಗಂಧ
ನಾರಿಕೇಳ, ಕಲಕಚೂರ್ಣ
ಕಣ್ತೆರೆದಾನೆ ಅವನು?
ನಸುನಗುತ್ತ ಹಂಗಿಸುತ್ತಾನೇನೋ?
ನಿಮ್ಮ ಪರಿ ನಿಮಗೆ ಅಂದಾನೇನೋ !
ಸುತ್ತೆಲ್ಲ ಜನಜಾತ್ರೆ ಬಹುಪರಾಕು
ಕೋಟಿ ಕೋಟಿ ಕರಗುತ್ತಿದೆ
ಮರುಗುವನೇನೋ ?

ಕರಗಿತು ಜನಜಂಗುಳಿ
ಒಂಟಿ ಬೆಟ್ಟದ ಮೇಲೆ ತನ್ನದೇ ನಂಟು
ಬದುಕು ಬತ್ತಲೆಯಾದಾಗ
ಬತ್ತಲವನೆ ಉಟ್ಟ ದಿಟ್ಟ ನಿಂತೇ ಬಿಟ್ಟ
ಅಗಾಧ, ಅಚಲ, ಅನವರತ.

‍ಲೇಖಕರು Avadhi

23 July, 2018

8 Comments

  1. nagraj Harapanahalli

    ಬಯಲು ಬಯಲನೆ ಉಂಡು ಬಯಲಾದವನು ಬೆಳುಗೊಳದ ಬಾಹುಬಲಿ. ಕನ್ನಡಿಗರಿಗೆ ಬದುಕ ಬಯಲ ಬೆಳಕ ಚೆಲ್ಲಿದವನು .

    ಕವಿತೆ ಧ್ವನಿಪೂರ್ಣವಾಗಿದೆ.

    • ನೂತನ ದೋಶೆಟ್ಟಿ

      Thank you Nagaraj..

  2. Chethana Veerabadrappa

    Vastvikavada ninna barahavanna odidare
    Bahubaliyu …Really I am helpless annuttiddano …Eno…annuvastu
    Vastavavagide…E…baraha….
    Congratulations…..‍‍

  3. nutana Doshetty

    Thank you

  4. RAGHU HALUR

    Brilliant!

    • ನೂತನ

      ಓ.ಧನ್ಯವಾದಗಳು..ರಘು..

  5. vidya

    ಸುಂದರ

    • nutana Doshetty

      Thanq Vidya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading