ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಚ್ಚಿಟ್ಟ ಪದಗಳು ಹಾಗೆಯೆ?

ಮೌನಿ

ಡಾ ಪ್ರತೀಭಾ ಕಾಗೆ


ಮೌನಿಯಾದೆನು ನಾನು
ಮಾತುಗಳು ಬರದೇ ? ಹೋದವು
ಹೇಳಲೆಬೇಕೆಂಬ ತುಡಿತ
ದಿನೆ ದಿನೆ ಹೆಚ್ಚುತಾ ಹೋದಂತೆ
ಏನೊ ಚಡಪಡಿಕೆ
ತುಂಬಾ ವಿಷಯಗಳು
ಹೇಳದೆ ಹೋದರೆ
ಎದೆ ಒಡೆದೆ ಹೋಗುವದೆನೋ?
ಆದರೂ ನಾ ಮೌನಿ
ಮಾತುಗಳೆ? ಸೋತವು
ನನ್ನೆದುರು .
ಬಚ್ಚಿಟ್ಟ ಭಾವನೆಗಳೆನೊ
ಹಾರಾಡಲು ಬಯಸಿದವು
ರೆಕ್ಕೆ,ಪುಕ್ಕ ಹಚ್ಚಿಕೊಂಡು
ನನ್ನದೊ ದಿಟ್ಟ ಮೌನವದು
ಎದೆ ಒಡೆದು ಹೋದರು
ಸರಿಯೇ?
ಬಚ್ಚಿಟ್ಟ ಪದಗಳು ಹಾಗೆಯೆ?
ಮುಚ್ಚಿಹೋಗಲಿ.
 

‍ಲೇಖಕರು G

13 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading