ಹಳೇಯದು..
–ಮಮತಾ ಅರಸೀಕೆರೆ
ನಿನ್ನ ಎರಡೂ ಕೈಗಳ ಮಾಲೆಮಾಡಿ
ಕೊರಳ ಹಾರವಾಗಿಸಿ
ಹತ್ತಿರ ಕಿವಿಯ ಬಳಿ ಬಂದು
ಎದೆಯ ಬೆಚ್ಚನೆ ಭಾವವನ್ನೆಲ್ಲ
ತುಟಿಗೆ ತಂದು
ಕೊರಳ ತಿರುವಿಗೆ ಪಿಸುಗುಡುವ
ಕಾವ್ಯದುಡುಗೊರೆಗೆ
ಹಣೆಯ ಮೇಲೆ ಸ್ವೇದ ಬಿಂದು
ಅರೆ ಮುಚ್ಚಿದ ತೇಲು ಕಣ್ಗಳು
ನಸು ನಗೆಯಲೆ ನಡುಗೋ
ತುಟಿಗಳು
ಅಷ್ಟೂ ಬೆರಳನ್ನು ಮಡಚಿದ ಕಾಲ್ಗಳ
ಮುಷ್ಟಿ ಬಿಗಿದ ಕರಗಳ
ಹಗುರ ಎಲೆಯಾಗಿ ನಡುಗೋ
ದೇಹ ಭಾಷೆ,
ಲಘು ಕಂಪನ ತುಡಿದು
ಹೃದಯದಾಸೆ
ಹತೋಟಿ ಮೀರಿದ ಬುದ್ಧಿ ಭಾವ
ಚಿಲ್ಲಚಿಮ್ಮಿಸಿ ಮೈಯ ಕಾವ
ಗಾಳಿ ಪಟವಾದ ಮನ ಮಲ್ಲಿಗೆ
ಚೀರಿ ಮೀರಿದ ಉಸಿರ ಸೊಲ್ಲಿಗೆ
ಬೆಚ್ಚಿ ಬಿದ್ದಿತ್ತು ಕನಸು
ಸೋರುವ ಕುಂಭವಾಗಿತ್ತು ಮನಸ್ಸು






0 Comments