ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಗಲ ಚೀಲದಲ್ಲಿ ಜೋಪಾನವಾಗಿಟ್ಟ ದುಮ್ಮಾನ..

ಕಲೆಗಳು

ಕಾವ್ಯ ಶಿವಮೊಗ್ಗ

ಹೆಗಲಿಗಾತುಕೊಂಡ
ಬಗಲ ಚೀಲದಲ್ಲಿ ಜೋಪಾನವಾಗಿಟ್ಟ
ದುಮ್ಮಾನಗಳು ಬಿಕ್ಕುತ್ತಿವೆ.

ನಡಗುವ ಬೆರಳಿನಿಂದ
ಚೀಲ ಸವರುವ ಉಮೇದಿಗೆ
ಮಡಚಿಟ್ಟ ಅಂಗೈ ಹುಣ್ಣು
ಕವಾಯತು ನಡೆಸಿ
ಸಾವಧಾನಿಸಿದ ಕವನದ ಕೆನೆತಕ್ಕೀಗ
ಮೊರೆತದ ಚಟ.

ಮತ್ತಲ್ಲಿ ಮತ್ತಷ್ಟು
ಮುಖದ ಚೂರುಗಳು
ತುಕ್ಕುಹಿಡಿದು ಕೆಲವು
ಬಣ್ಣ ಮೆತ್ತಿಕೊಂಡು ಒಡೆದ ಕನ್ನಡಿ ಎದುರು
ಬಿಂಬಗಳಾಗುವ ಕಯಾಲಿಗೆ
ಹುಬ್ಬು ತೀಡುವ ಉಗುರ ಗೆರೆಗಳಿಗೆ
ಈಗಷ್ಟೆ ಬಿಡುವು ಸಿಕ್ಕಿ ಮಾರಟಕ್ಕಿಟ್ಟ ಮಳಿಗೆಯಲಿ
ಮಲಗಿವೆ.

ಚೌಕಾಶಿಗೆ ಬಿದ್ದ ನಾಲಿಗೆ
ಅರಚಾಟಕ್ಕೆ ಮುಖ ತಿರುವಿ ಗೊಣಗುತ್ತಿದೆ
ಇವೆಲ್ಲವ ತುಂಬಿಕೊಳ್ಳುತ್ತಲೆ
ಬರಿದಾಗುವ ಚೀಲಕಂಟಿದ
ಕಲೆಗಳು ಮಾತ್ರ ಇನ್ನೂ ಹಾಗೇ ಇದೆ,
ಅದೆಷ್ಟು ಉಜ್ಜಿ ಉಜ್ಜಿ ತೊಳೆದರೂ ಮಾಸದೆ…

‍ಲೇಖಕರು avadhi

27 December, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading