‘ಆ’ಸ್ಪಷ್ಟ ಮುಖ..

ನಾಗೇಶ ತಳವಾರ
ಕಡಲ ತಡಿಯ ಮೃದು ಮರುಳ ಮೇಲೆ
ಆತ ಸುಮ್ಮನೆ ಮಲಗಿದ್ದಾನೆ
ಅಲ್ಲಿ ಅವನಿಗೆ ಸಿಗುವ ಶಾಂತಿ ಮತ್ತೇಲ್ಲಿಯೂ ಸಿಗದು
ಹಗಲುಗನಸಿಗಿಂತ ಸತ್ಯ ಕಠೋರ
ಅನ್ನೋದು ಅವನಿಗೆ ಗೊತ್ತು
ಆದ್ರೂ, ಅವನ ತಂದೆ ತಾಯಿ ನೆನಪಿನಲ್ಲಿ
ಆತ ಮಲಗಿದ್ದಾನೆ…
ಆತನ ಅಂತಿಮ ನಿದ್ದೆ ಹೃದಯ ಹಿಂಡುತ್ತಿದೆ
ಅಂತರಂಗದಿಂದ ಮರೆಯಾಗುವುದಕ್ಕಿಂತ
ಈ ಭುವಿಯಿಂದ ನಿರ್ಗಮಿಸುವುದೇ ಲೇಸು ಎಂದಿರಬೇಕು
ಆತನ ‘ಆ’ಸ್ಪಷ್ಟ ಮುಖ ಸಾವಿರ ಕಥೆಗಳನ್ನ
ಹೇಳ್ತಿದೆ…
ಆತ ಅಸಂಖ್ಯಾತ ಕಣ್ಣುಗಳ ತೇವಕ್ಕೆ
ಕಾರಣನಾಗಿರೋದು ದಿಟ…
ಆತ ಸಾವಿರಾರು ದುಖಃದ ಆತ್ಮಗಳನ್ನ
ಕೊಂಡ್ಯೊಯುತ್ತಿದ್ದಾನೆ…
ಆತ ನಮ್ಮನ್ನ ಚಿಂತನೆಯ ಉರುಳಾಟಕ್ಕೆ ದೂಡಿದ್ದಾನೆೆ…
ಬಂದೂಕಿನ ಸದ್ದಿಗೆ ಅಂಜಿದ ಮಾನವೀಯತೆ
ಸತ್ತು ಹೋಗಿದೆ
ಕರುಣೆ ಇಲ್ಲದ ಆ ಕಡಲಿಗೆ
ನನ್ನದೊಂದು ಧಿಕ್ಕಾರ…!
(ಟರ್ಕಿಯ ಕಡಲ ದಂಡೆಯ ಬಳಿ ಪತ್ತೆಯಾದ ಮಗುವಿನ ನೆನಪಿನಲ್ಲಿ)






channagide
ಚೆನ್ನಾಗಿದೆ.
ಅವರರಿವಿನಂತೆ ದೇವನೆಂದರೆ ಕಲ್ಲಿನ ಮೂರ್ತಿ
ಇವರರಿವಿನಲ್ಲಿ ದೇವನೆಂದರೆ ಒಂದು ಕಲ್ಪನೆ
ಇನ್ನೊಬ್ಬನೆಂದನು ನಮ್ಮ ದೇವನೇ ನಿಜ ದೈವ
ಒಪ್ಪದಿದ್ದರೆ ಸಿದ್ದನಾಗು ಸಾಯಲು
ಆದರೆ ಯಾರಿಗೂ ತಿಳಿದಿಲ್ಲ
ಅಲ್ಲಿ ಕಡಲ ತಡಿಯಲ್ಲಿ ದೇವನೇ ಸತ್ತು ಬಿದ್ದಿದ್ದಾನೆಂದು..
kannu tevavaaytu..
KAVITHE CHENNAGIDE
With havin so much content do you ever run into any issues of plagorism or copyright infringement?
My website has a lot of completely unique content
I’ve either authored myself or outsourced but it looks like a lot of it is popping it up all over the internet without my authorization. Do you know any methods to help
prevent content from being stolen? I’d truly appreciate
it.