ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂದುಬಿಡು ಮಳೆಯೇ..

kavyashree

ಎಚ್ ಕಾವ್ಯಶ್ರೀ 

ಬಂದುಬಿಡು ಮಳೆಯೇ
ಸಾಕಿನ್ನು ಸತಾಯಿಸಿದ್ದು
ಎಷ್ಟೆಲ್ಲಾ ಜೀವಗಳು ಕಾತರಿಸಿ ಕನವರಿಸಿವೆ

ಬಂದುಬಿಡು ಮಳೆಯೇ
ಸಾಕಿನ್ನು ಕಾಯಿಸಿದ್ದು
ಬರಡು ಎದೆಗಳಿಗೆ
ನಿನ್ನೊಲವ ಹನಿಸಿ
ಮರೆತ ಮಾತುಗಳ ಮತ್ತೊಮ್ಮೆ
ಚಿಗುರಿಸಿಬಿಡು

black rain

ಪ್ರತಿ ಮಳೆಹನಿಗೂ ಎಂತಹ ರಕ್ಕಸ ಶಕ್ತಿ
ನೂರಾರು ನೆನಪ ಹೆಕ್ಕಿ
ಹೆಸರಿಸಲಾಗದ ಭಾವಗಳುಕ್ಕಿಸಿ
ನನ್ನೊಳು ನನ್ನನೇ ಕಳೆದು ಕೂಡಿಸಿ
ಮನರಂಗದೊಳು ರುದ್ರತಾಂಡವ
ಈ ಮಳೆ ಬೀಜಾಸುರರ
ಶಮನಕ್ಕೂ ಉಪಶಮನಕ್ಕೂ
ನಿನ್ನದೇ ಮಂತ್ರ

 

 

 

 

‍ಲೇಖಕರು Admin

7 May, 2016

1 Comment

  1. Kavyashree H

    ಧನ್ಯವಾದಗಳು ಅವಧಿ ಬಳಗಕ್ಕೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading