ಎಂ ಎಂ ಶೇಖ್ ಯಾದಗಿರಿ
ನಾನು ಹೊರಗೇ ಕುಳಿತಿದ್ದೇನೆ
ಶತಶತಮಾನಗಳಿಂದ
ನನ್ನ ಪ್ರಾರ್ಥನೆಗೆ
ಅದಾವ ಕಲ್ಲೂ ಕರಗ್ತಾ ಇಲ್ಲ ?!
ಬಾಲ್ಯವೆಲ್ಲಾ ನಿನ್ನ
ಅಂಗಳ ತೊಳೆಯುತ್ತಾ
ಗರ್ಭಗುಡಿಯಲ್ಲಿ ಕಳೆಯಿತು
ನಾನು ಬೆಳೆದಂತೆಲ್ಲಾ
ನೀ ದೂರವಾದೆ …
ಅಂದರೆ ಬೆಳೆದಿದ್ದು ತಪ್ಪೇ ..?!

ಕಣ್ಣಲ್ಲಿ ನಿನ್ನ ತುಂಬಿಕೊಳ್ಳಬೇಕು
ನಿನ್ನ ಚಾದರ ಕಣ್ನಿಗೊತ್ತಿ ಕೊಳ್ಳಬೇಕು
ನಿನ್ನ ಮೇಲಿರುವ ಹೂವಿನ
ಸುಗಂಧದೊಂದಿಗೆ ನನ್ನಿಡೀ ದೇಹಕ್ಕೆ
ಕೃತಜ್ಞತೆಯ ಭಾವ ಮೂಡಿಸಬೇಕು
ಒಂದು ಕ್ಷಣ ನಿನ್ನ ನಾ ಕಾಣಬೇಕು .
ನಿನ್ನನ್ನು ಬಿಗಿದುಕಟ್ಟಿ
ನಿನ್ನ ಅತ್ತರಿನ ವ್ಯಾಪಾರ ಮಾಡುತ್ತಿದ್ದಾರೆ
ನಾಗರಿಕತೆ ಬೆಳೆದಂತೆಲ್ಲಾ
ಸಂಕೋಲೆಗಳು ಗಟ್ಟಿಯಾಗುತ್ತವೆ
ನನ್ನಂಥವರನ್ನುಬಂಧಿಸಲು ..!
ನೀನು ನನ್ನವನು ನನ್ನ
ಉಡಿಯಿಂದೆದ್ದು ಹೋಗಿ ಸಂತನಾದವನು ..
ಕೊನೆಗೂ ನನ್ನ ವೃದ್ಧಾಶ್ರಮದಲ್ಲಿಟ್ಟೆಯಲ್ಲಾ ..
ನಿನ್ನ ವಿವಶತೆ ಗೊತ್ತೆನಗೆ ಇರ್ಲಿ ಬಿಡು ..
ಹೊರಗೇ ಕುಳಿತು …..
ನಾ ಸೀತೆಯಾಗುತ್ತೇನೆ,
ಮೀರಳಾಗುತ್ತೇನೆ …
ಕೊನೆಗೆ ಅಹಲ್ಯೆಯೂ ಆಗುತ್ತೇನೆ!!!!!!!!!!!
ಯಾಕೆಂದರೆ ನಾನು ಭೂಮಿ.






very nice
Thumba chenda ide kavithe
KONEYA 4 SALU ADBHUTA
ತುಂಬ ಸುಂದರ ಕವಿತೆ….
“ಸಂಧ್ಯಾರಾಣಿ”ಯವರ ಮೊನ್ನೆಯ ಲೇಖನದ ಕಾವ್ಯರೂಪದಂತಿದೆ.
avara lekhana odidaaga nanna ee kavite kNmunde bantu adannu tammellara jote hanchikonde….sir. spandisida ellariguu naanu aabhaari..
ಎಷ್ಟು ದಿಟವಾಗಿ ಹೇಳಿದಿರಿ!