ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂದನಾಗ ಮಿಂಚುಗೊಂಚಲ ಕೀಲಿಕೈ ದೇವತೆ..

ಕುಲುಮೆಯಲಿ ಕುದಿವ ಕೂಸುಗಳು

vittal dalavayi

ಮೂಲ- ವಿಲಿಯಂ ಬ್ಲೇಕ್
ಕನ್ನಡಕ್ಕೆ- ವಿಠ್ಠಲ ದಳವಾಯಿ

ತೀರ ಚಿಕ್ಕವನಿದ್ದಾಗಲೇ ನನ್ನ ತಾಯಿ ತೀರಿಕೊಂಡಳು
ತಂದೆ ನನ್ನನ್ನು ಧಣಿಗೆ ಮಾರಿದಾಗ ನಾಲಿಗೆಯಿಂದ
ಉದುರುವ ಪದವೊಂದೇ : ಅಳು! ಅಳು! ಅಳು!
ಮುದುರಲು ಹಾಸಿಗೆ: ಗುಡಿಸಿದ ಕುಲುಮೆಯ ಧೂಳು

chidren sorrow sculptureಟಾಮ್ ಡಾಕ್ರೆ: ಕುರಿಮರಿಯ ಗುಂಗುರಗೂದಲ ಹೊತ್ತ
ಚಿಕ್ಕ ಹುಡುಗ, ತಲೆ ಬೋಳಿಸಿದಾಗ ಬಿಕ್ಕಿ ಬಿಕ್ಕಿ ಅತ್ತ
“ಶ್! ಟಾಮ್, ಚಿಂತಿಸಬೇಡ ಎಂದೂ ಬೋಳುತಲೆಗಾಗಿ
ಬಿಳಿ ಕೂದಲು ಕಪ್ಪಗಾಗದು ಕುಲುಮೆಯ ಇಲ್ನ ಹೋಗಿ”

ಸುಮ್ಮನಾದ ಟಾಮ್ ಆ ರಾತ್ರೆ
ಬಿಮ್ಮನೆ ಮಲಗಿರಲು ಕನಸಿನ ಜಾತ್ರೆ

ಡಿಕ್, ಜೋ, ನೆಡ್ ಮತ್ತು ಜಾಕ್. . . . . . .
ಕುಲುಮೆ ಗುಡಿಸುವ ಸಾವಿರ, ಸಾವಿರ ಗೆಳೆಯರು
ಕಪ್ಪು ಕಾಫೀನಿನಲ್ಲಿ ಬಂಧಿಗಳು ಕಳೆದುಕೊಂಡು ಒಲುಮೆ

ಬೀಗ ತೆರೆದು ಜಿನುಗಲು ಸ್ವಾತಂತ್ರ್ಯದ ಒರತೆ
ಹಸಿರ ಬಯಲಲಿ ಜಿಗಿತ, ನಗು, ಅವರ ಓಟ
ಹೊಳೆಯ ಜಳಕ, ಸೂರ್ಯನಡಿ ಹೊಳೆವ ಮಾಟ

ಕಂಡವು ಬೆತ್ತಲ ಬಿಳಿ ಬೆನ್ನು, ಎತ್ತಲೋ ಹೋದ ಮಸಿ ಚೀಲ
ಮೋಡದ ಮೇಲೆ ತೂರಿ ಗಾಳಿಯಲಿ ಹಾರಿತು ಅವರ ಲೀಲ
ಟಾಮ್ಗೆ ದೇವತೆ ಹೇಳಿದ್ದು: ನೀನು ಒಳ್ಳೆಯ ಹುಡುಗನಾದರೆ
ಸಂತೋಷ, ನಗು, ನಿನ್ನ ತಂದೆ ಯಾವಾಗಲೂ ದೇವರೆ!

ಬೆಳಿಗ್ಗೆ ಟಾಮ್ಗೆ ಎಚ್ಚರ, ಕತ್ತಲಲ್ಲೇ ನಾವೂ ಎದ್ದೆವು
ಜೋಳಿಗೆ, ನಮ್ಮ ಬ್ರಶ್ಶು ಮತ್ತೆ ನಮ್ಮ ಬೆನ್ನಿಗೆ ಬಿದ್ದವು
ಜಾವ ತಣ್ಣಗಿದ್ದರೂ ಟಾಮ್ಗೆ ಕನಸಖುಷಿಯ ಬೆಚ್ಚಗೆ
ಹೆದರಲಿಲ್ಲ, ಬೆದರಲಿಲ್ಲ ಕೆಲಸದಲ್ಲಿತ್ತು ನಚ್ಚುಗೆ
ಟಿಪ್ಪಣಿ: ಇಂಗ್ಲೆಂಡಿನಲ್ಲಿ ಹತ್ತೊಂಬತ್ತನೇ ಶತಮಾನದವರೆಗೆ, ತೀರ ಚಿಕ್ಕ ಹುಡುಗರನ್ನು ಕಾಖರ್ಾನೆಗಳ ಕಿರಿದಾದ ಕೊಳವೆಗಳನ್ನು ಸ್ವಚ್ಛ ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ಅಲ್ಲಿ ಕೆಲಸ ಮಾಡುವ ಮಕ್ಕಳು ಪ್ರತಿದಿನ ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕುತ್ತಿದ್ದರು. ಅಲ್ಲದೇ ಅಲ್ಲಿಯ ಅಪಾಯಕರ ವಾತಾವರಣ ಅವರ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿತ್ತು. ಪೋಷಕರು ಮತ್ತು ಚಚರ್ುಗಳು ಅನಾಥ ಕಂದಮ್ಮಗಳನ್ನು ಮಾರುವುದು ಆ ಕಾಲದ ಸಾಮಾನ್ಯ ಕ್ರಿಯೆಯಾಗಿತ್ತು.

‍ಲೇಖಕರು admin

30 November, 2015

2 Comments

  1. HAJARAT ALI DEGINAL

    GURUGALA ANTAKARANA TORISUVA MANAVIYA KAVITE.

  2. ಮುಗಿಯದ ಮೌನ- GKN

    ಕಂದಮ್ಮನ ಅಲ್ಲಿನ ಚಿತ್ರಣ ಕಣ್ಣೀರಾಗಿಸಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading