ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರಾಂಕ್‌ಫರ್ಟ್ ಪುಸ್ತಕೋತ್ಸವ…

ವಸುಧೇಂದ್ರ

ಫ್ರಾಂಕ್‌ಫರ್ಟ್ ಪುಸ್ತಕೋತ್ಸವಕ್ಕೆ ಬಂದಿರುವೆ. ಇಲ್ಲಿಯ ಜನರ ಅಕ್ಷರ ಪ್ರೀತಿ, ಸೌಜನ್ಯದಿಂದ ನಡೆಸುವ ಚರ್ಚೆ-ಗೋಷ್ಠಿಗಳು, ಬೇರೆ ಭಾಷೆಯಲ್ಲಿ ನಡೆವ ಚರ್ಚೆಗಳಿಗೆ ಆಕ್ಷಣದ ಅನುವಾದದ ಲಭ್ಯತೆ, ಒಟ್ಟಾರೆ ಅಚ್ಚುಕಟ್ಟುತನ, ಅಂದ-ಚಂದ ಎಲ್ಲವೂ ನನಗೆ ಇಷ್ಟವಾಗುತ್ತಿದೆ. ಇವುಗಳಲ್ಲಿ ಒಂದು ಪ್ರಯೋಗ ಪ್ರದರ್ಶನ ಗಮನ ಸೆಳೆಯಿತು. ಅರೆದೃಷ್ಟಿಹೀನರ ಜಗತ್ತನ್ನು ಅರ್ಥಮಾಡಿಸಲು ಒಂದು ಪ್ರಾತ್ಯಕ್ಷಿಕೆ ಇದೆ.‌ ಇಲ್ಲಿ ನಮಗೆ ಒಂದು ಕನ್ನಡಕ ಕೊಡುತ್ತಾರೆ.‌ ಅದನ್ನು ಹಾಕಿದಾಗ ದೃಷ್ಟಿ ಮಂಜಾಗುತ್ತದೆ. ಅನಂತರ ಕೈಗೆ ಕೋಲು ಕೊಟ್ಟು, ಏರು-ಇಳಿವು ಇರುವ, ತಗ್ಗು-ದಿನ್ನೆ, ತಿರುವು, ಅಡ್ಡಡ್ಡ ಬರುವ ವಸ್ತುಗಳು ಇರುವ ದಾರಿಯಲ್ಲಿ ನಡೆಯಲು ಹೇಳುತ್ತಾರೆ. ಇದನ್ನು ಮಾಡಿದ ನಂತರ ಅರೆದೃಷ್ಟಿಹೀನರ, ಕಣ್ಣಿನ ಪೊರೆ ಬಂದವರ ಜಗತ್ತು ಅರ್ಥವಾಗಿ ಪರಾನುಭೂತಿ ಹೆಚ್ಚುತ್ತದೆ.

ನವೆಂಬರ್ 6ರ ತನಕ ಯುರೋಪ್ ಸುತ್ತುವೆ. ನೆದರ್‌ಲ್ಯಾಂಡ್ಸ್, ಡೆನ್ಮಾರ್ಕ್, ಆಸ್ಟ್ರಿಯಾ, ಇಟಲಿ… ಇನ್ನೂ ಮನಸ್ಸು ಸಮಯ ಬಂದರೆ ಇನ್ನೊಂದು ದೇಶ. ಒಳ್ಳೆಯ ಹವಾಮಾನ ಎಷ್ಟು ನಡೆದರೂ‌ ಸುಸ್ತಾಗದಂತೆ ಕಾಪಾಡುತ್ತಿದೆ. ಇಲ್ಲಿಯ ಕನ್ನಡ ಕೂಟದವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

‍ಲೇಖಕರು Admin

22 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading