ಬಿ. ವಿ . ಕಾರಂತ ರಂಗಭೂಮಿಕ ಟ್ರಸ್ಟ್ ಮಂಚಿ- ಕುಕ್ಕಾಜೆ, ಇವರ ವತಿಯಿಂದ ಬಿ. ವಿ. ಕಾರಂತ ನೆನಪಿನ ಮಕ್ಕಳ ರಂಗ ನಾಟಕ ಶಿಬಿರದ ಸಮಾರೋಪದ ದಿನದಂದು, ಮೂರ್ತಿ ದೇರಾಜೆ ಮತ್ತು ಶಂಕರ ಪ್ರಸಾದ್ ವಿನ್ಯಾಸ ನಿರ್ದೇಶನ ಮತ್ತು ಸಂಗೀತ ನೀಡಿದ ಮಕ್ಕಳ ನಾಟಕ ‘ಬಾರಯ್ಯ ಬೆಳದಿಂಗಳೇ’ ಪ್ರದರ್ಶನಗೊಂಡಿತು. ಇಲ್ಲಿ ಅಜ್ಜ ಕಥೆ ಹೇಳ್ತಾನೆ. ಅದನ್ನು ಕೇಳ್ತಾ ಕೇಳ್ತಾ ಪ್ರೇಕ್ಷಕರೂ ಪರವಶ. ವೇದಿಕೆಯ ತುಂಬೆಲ್ಲಾ ಪತಂಗಗಳ ಪಥಸಂಚಲನ. ಪ್ರೇಕ್ಷಕರೆದೆಯಲ್ಲಿ ಮಿಂಚಿನ ಸಂಚಲನ. ಅಲ್ಲೊಂದು ತಮಾಷೆ, ಇಲ್ಲೊಂದು ಗಂಭೀರ, ಎಷ್ಟೊಂದು ಭಾವಗಳು ಅಭಿನಯಿಸಿದ ಪುಟ್ಟ ತಾರೆಯರಲ್ಲಿ. ಅದರ ಕೆಲವು ದೃಶ್ಯಗಳು ನಿಮಗಾಗಿ
ಛಾಯಾ ಚಿತ್ರಗಳು: ಸುಧೀರ್ ಬಾಳೆಪುಣಿ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:





0 Comments