ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೈಜ಼್ ನಟರಾಜ್ ಬರೆದ ಹನಿಗವನಗಳು

ಸಯದ್ ಫ಼ೈಜ಼ುಲ್ಲ

1
ಇರಿದ ಚಾಕುಗೂ ನಿರಾಸೆ
ಒಡಲೊಳಗೆ
ಎಲ್ಲಾ ಇದೆ;ಪ್ರೀತಿ ಬಿಟ್ಟು!
2
ತುಂಬಿದೆದೆ ಮೇಲೇ
ಎಲ್ಲರ ಚಿತ್ತ
ಮಗು ಕೂಡಾ ಹಸಿದಿದೆ!
3
ಪ್ರತೀ ಜನುಮಕೂ
ನೀನೇ ಬೇಕೆಂಬುದು
ಆಸೆಯಲ್ಲ;ಸೇಡು!

4
 
ಮನೆ ಮನೆಗೆ ಬಂದು ಬನ್ನಿ ನಮಾಝಿಗೆ
ಎಂದು ಹೇಳುವ ಮುಲ್ಲಾಗಳಿಗೆ
ನಾನು ಮುಖ ತೋರುವುದಿಲ್ಲ
ಪ್ರೀತಿಸಲು
ದ್ವೇಷಿಸಲು
ಮತ್ತು
ಬಾಗಲು..ಯಾರೂ ಹೇಳಿಕೊಡಬೇಕಿಲ್ಲ!
5
ಸುಳ್ಳು ಹೇಳೋ ನಾಲಗೆಗಿಂತ
ನಿಜ ಹೇಳೋ ಕಂಗಳೇ
ಸಾವಿರ ಪಾಲು ಮೇಲು!
6
ಏ ಖುದಾ
ನಾನೂ ನೀನಾಗಬೇಕೆಂದೇ
ಇಡೀ ಜಗತ್ತನ್ನು ಪ್ರೀತಿಸುತ್ತಾ ಹೋದೆ
ಜಗ-ನಾಟಕ-ರಂಗ ಎಂದು ಜನ ಹಳಿದರು
ನಾ ಏನೂ ಆಗದೇ ನಾನಾಗಿ ಉಳಿದೆ!
 
 

‍ಲೇಖಕರು G

16 June, 2014

10 Comments

  1. sheshadri.cv

    chennagive.

  2. vidyashankar

    Ver nice

  3. mmshaik

    nice..very nice..

  4. vijaykanth patil

    warewwha…
    ivu bari haniyallavo anna,
    kavyakhaniya odalolagindha horabandu nalanalisuva chinna…

  5. amardeep.p.s.

    ishtavaadavu kavithegalu faiz….ji…

  6. mallikarjuna kalamaralli

    NICE

  7. ಹರಿ

    ಅತಿ ಸುಂದರ… ಧನ್ಯವಾದಗಳು ಫ಼ೈಜ಼್

  8. B.Manjunatha

    Sarala hagu Vaicharekate nimma kavanadalli Kanutteve.

  9. ಮಂಜುನಾಥ ಬಿ.ಆರ್.

    ಹಾಯ್ ನ ‘ಕೇಳಿ’ ಕಾಲಂನಲ್ಲಿ ನಿಮ್ಮ ಪರಿಚಯ. ಕವನಗಳು ಸೊಬಸಾಗಿವೆ. ‘ಪ್ರೀತಿಸಲು, ಧ್ವೇಶಿಸಲು, ಬಾಗಲು ಯಾರೂ ಹೇಳಿಕೊಡಬೇಕಾಗಿಲ್ಲ’ ಮತ್ತೆ ಮತ್ತೆ ಮೆಲುಕು ಹಾಕಬೇಕೆನಿಸುವಂತಿದೆ. ಧನ್ಯವಾದಗಳು

  10. armanikanth

    bahala chendada hanigalu..abhinandane

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading