ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ’ಅವನಿಗೆ ಹಸಿವಲ್ಲಿ ನಗು ಬರುತ್ತದೆ…’

ಎಂ ಎಸ್ ಕೃಷ್ಣಮೂರ್ತಿ

ಗ್ಯಾರೇಜಿನ ಹುಡುಗ ಟೋನಿಗೆ ಆಯುಧ ಪೂಜೆ… ತುಂಬಾ ಖುಷಿ
ಆ ಒಂದೆರಡು ದಿನವಾದರೂ
ಪೂಜೆಗಿಟ್ಟ ಸ್ಪ್ಯಾನರ್ ಏಟು ತಪ್ಪುವುದೆಂದು
ಅವನಿಗೆ ಹಸಿವಲ್ಲಿ ನಗು ಬರುತ್ತದೆ
ಊಟ ಸಿಕ್ಕಾಗ ಕಣ್ಣಂಚಲ್ಲಿ ನೀರು ಬರುತ್ತದೆ..!!
 
ಗ್ಯಾರೇಜಿನ ಹುಡುಗ ಟೋನಿ ಕಾಕನ ಟೀ ಸ್ಟಾಲ್ ಗೆ ಬಂದು
ಒಂದು ಬಾದಾಮಿ ಹಾಲು ಎನ್ನುತ್ತಾನೆ
ಅಲ್ಲಿ ಕೂತಿದ್ದವರು ನಗುತ್ತಾರೆ
ಟೋನಿ ನಕ್ಕು ಅರ್ಧ ಟೀ ಕುಡಿದು ಹೋಗುತ್ತಾನೆ
ಅವನಿಗೆ ಹಸಿವಲ್ಲಿ ನಗು ಬರುತ್ತದೆ
ಊಟ ಸಿಕ್ಕಾಗ ಕಣ್ಣಂಚಲ್ಲಿ ನೀರು ಬರುತ್ತದೆ..!!

ಗ್ಯಾರೇಜಿನ ಹುಡುಗ ಟೋನಿಯ ಕತ್ತಿನ ತುಂಬಾ ಎಲ್ಲಾ ಧರ್ಮದ
ತಾಯಿತಗಳು, ಶಿಲುಬೆ,ಚಂದ್ರ ನಕ್ಷತ್ರ , ಚೀಟಿಗಳು, ದೇವರುಗಳು, ದಾರಗಳು
ಹಾಗೆಂದು ಸರ್ವ ಧರ್ಮ ಪ್ರಿಯ ಎಂದಲ್ಲ
ಯಾವ ದೇವರಾದರೂ ಕಾಪಾಡಲಿ
ಸ್ಪ್ಯಾನರ್ ಮತ್ತು ಕಟಿಂಗ್ ಪ್ಲೇಯರ್ ಏಟುಗಳಿಂದ ಎಂದು
ಅವನಿಗೆ ಹಸಿವಲ್ಲಿ ನಗು ಬರುತ್ತದೆ
ಊಟ ಸಿಕ್ಕಾಗ ಕಣ್ಣಂಚಲ್ಲಿ ನೀರು ಬರುತ್ತದೆ..!!
 

‍ಲೇಖಕರು avadhi

17 October, 2013

5 Comments

  1. bharathi b v

    Ishtavaaythu tuumba … none innoo hechchu

  2. Prabhakar Nimbargi

    Very touching poem of a common worker, his pretensions, approach towards religions, freedom. All these summed up in a very short poem, indeed!

  3. amardeep.p.s.

    ಕವಿತೆ ಚೆನ್ನಾಗಿದೆ ಸರ್ …. ಇಷ್ಟವಾಯಿತು …..

  4. Brig.S.G.Bhagwath

    Kavite Tumba Chennagide.

  5. ಜೆ.ವಿ.ಕಾರ್ಲೊ, ಹಾಸನ

    ಒಂದೆರಡು ದಿನವಾದರೂ ಪೂಜೆಗಿಟ್ಟ ಸ್ಪ್ಯಾನರಿನ ಏಟು ತಪ್ಪುವುದು,ಶಾಲೆಗೆ ಒಂದು ವಾರ ರಜಾವಿರುವುದು ಎಷ್ಟೊಂದು ಖುಷಿಯ ಸಮಾಚಾರ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading