ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಫುಲೆ’ ನೆನಪಿನಲ್ಲಿ ಸುಧಾ ಆಡುಕಳ

ಸುಧಾ ಆಡುಕಳ

ಮುಂಜಾನೆ ಬೇಗ ಏಳು
ಅತ್ತಿತ್ತ ಒಂದಿಷ್ಟು ಓಡಾಡು
ಸ್ವಚ್ಛವಾಗಿರು, ಒಪ್ಪವಾಗಿರು
ಹೆತ್ತವರನು, ಹಿರಿಯರನು ಗೌರವಿಸು
ದೇವರ ಸ್ಮರಿಸಿ, ಅಧ್ಯಯನದಲ್ಲಿ ಮುಳುಗು
ಮನೆಗೆ ಹೋಗುವ ಕನವರಿಕೆಯಲ್ಲಿ
ಅಮೂಲ್ಯವಾದ ದಿನವ ಕಳಕೊಳ್ಳಬೇಡ
ಶ್ರಮಪಟ್ಟು ಓದಿ, ವಿದ್ಯಾವಂತನಾಗು
ಜ್ಞಾನವೇ ನಿನ್ನ ದೇವರು ಎಂದು ತಿಳಿ
ಶ್ರದ್ಧೆಯಿಂದ ಜ್ಞಾನವನ್ನು ನಿನ್ನದಾಗಿಸಿಕೊ
ಮನಃಪೂರ್ವಕವಾಗಿ ಅಭ್ಯಾಸ ಮಾಡು
ಜ್ಞಾನವೇ ಎಂದೆಂದಿಗೂ ಅಮೂಲ್ಯ ಸಂಪತ್ತು
ದೇವರ ದೃಷ್ಟಿಯಲ್ಲಿಯೂ ಶ್ರೀಮಂತನಿಗಿಂತ
ಜ್ಞಾನಿಯೇ ಶ್ರೇಷ್ಠ

ಇಂಗ್ಲಿಷ್ ಕಲಿ

ನಿನ್ನ ಉದ್ಯೋಗದಲಿ ಸ್ವಾವಲಂಬಿಯಾಗು
ಜ್ಞಾನಸಂಪತ್ತನ್ನು ಗಳಿಸಲು ಸದಾ ಶ್ರಮಿಸು
ವಿದ್ಯೆಯಿಲ್ಲದ ಮನುಷ್ಯ ಮಾತಿಲ್ಲದ ಮೂಕ
ವಿಶ್ರಮಿಸಬೇಡ, ವಿದ್ಯೆ ನಿನ್ನದಾಗುವತನಕ
ನಿನಗೆ ಅವಕಾಶದ ಬಾಗಿಲು ತೆರೆದಿದೆ ನೋಡು
ನಿಮ್ಮೆಲ್ಲ ಸಂಕಟಗಳಿಗೆ ಇಂಗ್ಲಿಷ್ ಕಲಿಕೆಯೇ ಮದ್ದು
ಬ್ರಾಹ್ಮಣರ ಅಧಿಕಾರಶಾಹಿಯನು ಕಿತ್ತೆಸೆದುಬಿಡು
ಅವರ ಉಪದೇಶಗಳಿಗೆ ಕಿವಿಗೊಡಬೇಡ
ಜಾತಿಯ ತಡೆಗೋಡೆಗಳನು ಇಂಗ್ಲಿಷ್ ನ
ಸುತ್ತಿಗೆಯಿಂದ ಹೊಡೆದು ಬಯಲಾಗಿಸು

‍ಲೇಖಕರು Avadhi

5 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading