ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ಲೀಸ್ ಒಮ್ಮೆ ಸಿಗೆ…

ಅಪಾರ ಎಷ್ಟು ಈಸಿಯಾಗಿ ‘ಹೋಗೇ ಸುಮ್ಮನೆ…’ ಎಂದುಬಿಟ್ಟರು ಎಂದುಕೊಳ್ಳುತ್ತಿರುವಾಗಲೆ ರವಿ ಅಜ್ಜೀಪುರ ‘ಪ್ಲೀಸ್ ಒಮ್ಮೆ ಸಿಗೆ…’ ಎಂದು ಗೋಗರೆದಿದ್ದಾರೆ. ಅಪಾರನ ಕವನ ಓದಿ ವಿರಹದ ಉರಿ ಹೆಚ್ಚಿಸಿಕೊಂಡಿದ್ದವರಿಗೆ ಈಗ ರವಿ ಅಜ್ಜೀಪುರ ಅವರ ಹನಿ ಹನಿ ಪ್ರೇಮ ಕಹಾನಿ ಇಲ್ಲಿದೆ.

‘ಪ್ರೀತಿ ಸದಾ ಜಾರಿಯಲ್ಲಿರಲಿ’ ಎಂಬ ಘೋಷ ವಾಕ್ಯ ಅಜ್ಜೀಪುರ ಅವರದ್ದು. ಓ ಮನಸೇ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವಿ ಬಗ್ಗೆ ಆ ಪ್ರೇಮಿಗಳ ದೇವತೆ ಕರುಣೆ ತೋರಿಸಲಿ. ಅವರ ಮೇಲೆ ಕನಿಷ್ಠ ಒಬ್ಬರ ಪ್ರೀತಿಯಾದರೂ ಜಾರಿಯಲ್ಲಿರಲಿ.

srujan032.jpg

ಎಲ್ಲಾ ಹೂಗಳೂ
ರೋಸ್ನಂತಲ್ಲ
ಎಲ್ಲಾ ಮರಗಳೂ ನೆರಳು ನೀಡೋಲ್ಲ
ಎಲ್ಲರನ್ನೂ ಪ್ರೀತಿಸೋಕ್ಕಾಗೊಲ್ಲ
ನಿಜ್ಜ ಹೇಳ್ಲ
ನಿನ್ನ ನೋಡಿದ್ ಮೇಲೆ
ಯಾಕೋ ಜೀವ ಬೇರೇನನ್ನೂ ಬಯಸ್ತಿಲ್ಲ
ಮನಸ್ಸು ಚಂಡಿ ಹಿಡಿದಿದೆ
ನೀನೇ ಬೇಕಂಥ
ಪ್ಲೀಸ್ ಒಮ್ಮೆ ಸಿಗೆ!

***
ಒಂದೇ ಒಂದು
ಗುಲಾಬಿ ಕೇಳ್ದೆ
ಇಡೀ ತೋಟಾನೆ ಕೊಟ್ಟ
ಹನಿ ನೀರು ಕೇಳಿದ್ರೆ
ಇಟ್ಕೋ ಅಂತ
ಸಮುದ್ರಾನೆ ಕೊಟ್ಟ
ಏಂಜೆಲ್ ಕಳಿಸು ಅಂದ್ರೆ
ನಿನ್ನನ್ನು ಕಳುಹಿಸಿದ
ಅವನಿಗೊಂದು ಥ್ಯಾಂಕ್ಸ್

***
ನೀನು
ಪುಸ್ತಕದ ಒಳಗೆ ಇಟ್ಟುಕೊಂಡ
ಅಪ್ಪಚ್ಚಿಯಾದ ಹೂ ಥರ.
ಅದರಲ್ಲಿ ಸುಗಂಧ ಇರುವುದಿಲ್ಲ ನಿಜ
ಆದರೆ ನೋಡಿದಾಗಲೆಲ್ಲ
ನಾ ನಿನಗೆ ನೆನಪಾಗೋದು ಮಾತ್ರ
ಖರೆ

***
ಮೊಬೈಲು
ಮೇಲು
ಎಸ್ಸೆಮ್ಮೆಸ್ಸು
ಎಲ್ಲಾ ಬೋರಾಗಿದೆ
ಸಂಜೆ ಸಿಕ್ತೀಯ
ಒಂದೆರಡು
ಮಾತಾಡೋಣ
ಕೈ ಕೈ ಹಿಡಿದು

***
ಹೇಗೆಬರಲೀ ಹೇಳು
ನಿನ್ನಲ್ಲಿಗೆ
ಈ ಉರಿ ಬಿಸಿಲಲ್ಲಿ
ಕೈಯಲ್ಲಿರುವ
ಐಸ್ಕ್ರೀಮ್
ಕರಗಿ ಹೋಗುವ ಮುನ್ನ…

***
ಸುಮ್ಮನೆ ನಿಂತಿದ್ದು
ಸುಮ್ಮನೆ ಕುಳಿತದ್ದು
ಒಮ್ಮೆಲೇ ಮಾತು ಹೊರಟು
ಇಬ್ಬರೂ ನಕ್ಕಿದ್ದು
ಈಗ ಕೂಡ
ಸುಮ್ಮನೆ ಕುಳಿತಾಗ
ಸುಮ್ಮನೆ ನಿಂತಾಗ
ಒಮ್ಮೆಲೇ ಮಾತು ಹೊರಟು
…………………….ಈ ಕ್ಷಣ
ನೀನು
ಎದುರಿಗಿಲ್ಲವಾಗಿ
ಕಾಡುತ್ತಿದೆ ನೆನಪು
………………………..
ಇಲ್ಲಿ ನನಗೆ ಹೀಗೆ
ಅಲ್ಲಿ ನಿನಗೆ ಹೇಗೆ?

***

‍ಲೇಖಕರು avadhi

16 February, 2008

2 Comments

  1. chetanachaitanya

    Sogasaagide.

  2. malathi S

    ರವಿಯವರ ಪದ್ಯ ಹಾಗು ಸೃಜನ್ ರವರು ಬರೆದ ಚಿತ್ರ ಎರಡೂ ಸೊಗಸಾಗಿವೆ.

    ಮಾಲತಿ ಶೆಣೈ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading