ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರೇಮ ಪಲ್ಲವಿಸಲಿ ಬಿಡು ಅದರ ಪಾಡಿಗೆ ಅದು' – ಟಿ ಎಸ್ ಗೊರವರ ಕವಿತೆ

ನಿನ್ನ ಹಣೆಗೆ ಪ್ರೇಮದ ಹುಡಿಯ ಬಳೆಯುವೆ

– ಟಿ ಎಸ್ ಗೊರವರ


ನಿನ್ನ ಪ್ರೀತಿಯ ಕುರುಹುವಾಗಿ
ತಾಜಮಹಲು ಕಟ್ಟಿಸುವ ತಾಕತ್ತಿಲ್ಲ ಬಿಡು ನನಗೆ
ಆ ದೇವರಾದವನು ಶ್ರೀಮಂತಿಕೆ ಕೊಡಲೇ ಇಲ್ಲ ನನಗೆ
 
ಮಾತೊಳಗೇ ಮೋಹಿಸಿ
ಮಾತೊಳಗೇ ಮಂಟಪ ಕಟ್ಟುವ ಕಲೆಯೂ ಸಿದ್ಧಿಸಲಿಲ್ಲ ನನಗೆ
ಆ ದೇವರಾದವನು ಪರವಶಗೊಳಿಸುವ ವರ ಕೊಡಲೇ ಇಲ್ಲ ನನಗೆ
 
ಗುಡಿಸಲ ತಡಿಕೆಯ ಕಟ್ಟಿಗೆ ಚಿಗುರೊಡೆದಿದೆ
ಅದರ ಬಳಿ ರೊಕ್ಕವಿಲ್ಲ, ಮಾತೂ ಬಾರದು ಅದಕೆ
ಚಿಗುರುವುದಕ್ಕೆ, ಪ್ರೇಮಿಸುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಬಿಡು
 
ಬೇಲಿಯ ಮುಳ್ಳೊಳಗೆ ಅರಳಿದ ಹೂವಿಗೂ ಘಮವಿದೆ
ಅನ್ನದ ಅಗಳಿನ ಮ್ಯಾಲೆ ಬಡವನ ಹೆಸರೂ ಬರೆಯಲಾಗಿದೆ
ಯಾರು ಯಾರೂ ಇಲ್ಲಿ ಪ್ರಮುಖರಲ್ಲ ಬಿಡು
 
ನಿನ್ನ ಹಣೆಗೆ ಪ್ರೇಮದ ಹುಡಿಯ ಬಳೆಯುವೆ
ಕಣ್ಣಿಗೆ ಸಂತಸದ ಕಂಬನಿ, ತುಟಿಗೆ ನಗೆಯ ಬರೆಯುವೆ
ಪ್ರೇಮ ಪಲ್ಲವಿಸಲಿ ಬಿಡು ಅದರ ಪಾಡಿಗೆ ಅದು
 

‍ಲೇಖಕರು G

27 September, 2014

9 Comments

  1. ಅಕ್ಕಿಮಂಗಲ ಮಂಜುನಾಥ

    ಹಣದ ಶಕ್ತಿ, ಮಾತಿನ ಕಿಲಾಡಿತನ ಇಲ್ಲದಿದ್ದರೆ ಗಾಳಿಗೆ ಎಲೆಯೂ ಅಲ್ಲಾಡದು ಸ್ವಾಮಿ. ಇಂದಿನ ದಿನದಲ್ಲಿ ಕುಡಿಯಲಿಕ್ಕೇ ನೀರಿಲ್ಲದಾಗ ಬೇಲಿಗೆ ಯಾರು ನೀರು ಹನಿಸಿಯಾರು? ಯಾವ ಶಕ್ತಿಯೂ ಇಲ್ಲದೆ ಪ್ರೀತಿ ಪ್ರೇಮವೆಂದು ಮುನ್ನುಗ್ಗಿದಿರಾದರೆ, ಲೇಖನಿಯನ್ನು ಖಡ್ಗವೆಂದು ಬಗೆದು ಯುದ್ದಕ್ಕೆ ಹೊರಟ ಹಾಗೆ ಆದೀತು,ಎಚ್ಚರಿಕೆ.
    ಅನ್ಯತಾ ಭಾವಿಸಬೇಡಿ -ಪದ್ಯ ಚೆನ್ನಾಗಿದೆ. ಓದಿ ಸಂತೋಷ ವಾಯಿತು.

  2. mmshaik

    heart touching….good one..!!!!!!!!!!!!!!!!

  3. Nagaraj kamble

    Nice sir

  4. M.S.Rudreswaraswamy

    ಹೀಗೂ ಒಂದು ಪ್ರೇಮ ನಿವೇದನೆ

  5. mahaveer hanchinal

    tumba channagi barediddira yuva kavigale

  6. mahaveer hanchinal

    olle kavana kavi samayada pallavige swagta

  7. Gubbachchi Sathish

    ಚಂದವಿದೆ.

  8. ramesh gabbur

    ಸರ್ ಕವಿತೆ ಚೆನ್ನಾಗಿದೆ ಖುಷಿಯಾಯ್ತು…

  9. BHUVANESHVARI

    Meaningful

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading