– ಪ್ರೇಮಾ ಹೂಗಾರ

ಧರೆಗೆ ಬರಸೆಳೆದು ಬಿಕ್ಕುತಿದೆ ಕಂಬನಿ ಯಾಕೆ ಉರುಳಿಸಿದೆ ನನ್ನ
ಮೈಲಿಗೆಯಾದ ರಕ್ತದ ಕಲೆಗಳ ನೆನಪು ಯಾಕೆ ಮರಳಿಸಿದೆ ನನ್ನ
ಸೀತೆ ಸಂಕವ್ವೆಯ ಭಿನ್ನವ ಮರೆತು ದಿಗಂತವಾಗಿವೆ ನಾಳೆಗಳು
ನಾವೇ ಕಟ್ಟುವ ನಾಳೆಗಳ ಮುಂದೆ ಭಯದಿ ಯಾಕೆ ಉಳಿಸಿದೆ ನನ್ನ
ಮೂರರಾಟದ ಬದುಕಿಗೆ ಸಾವಿರದ ಕನಸುಗಳು ಬಿಟ್ಟು ಬಿಡದೆ ಕುಣಿಯುತ್ತಿವೆ
ಇದ್ದೂ ಇಲ್ಲದಂತಿರುವ ಬದುಕಿನೆದುರು ಕನಸು ಕೊಟ್ಟು ಯಾಕೆ ಉಳಿಸಿದೆ ನನ್ನ
ಬದುಕು ನೀಡುವ ಭಿಕ್ಷೆಯೆದುರು ಕಟುಕನ ನಂಬಿಯೂ ಬಾಳುತಿರುವೆ ನನ್ನ ಕುಲದೊಡಗೂಡಿ
ಬದುಕು ಪೂರ್ತಿ ಒಗರು ಪ್ರೀತಿಯ ಹೆಗಲೇರಿಸಿ ಮತ್ತೆ ಮತ್ತೆ ಯಾಕೆ ನರಳಿಸಿದೆ ನನ್ನ
ಇಬ್ಬನಿಯಂತೆಯೂ ಕಣ್ಣ ಹನಿ ಸಿಗದ ನೋವಿನ ಬದುಕುಗಳಿವೆ ಅವೆಷ್ಟೋ ಲೋಕದಲಿ
ಈ ಹೆಣ್ಣು ಕುಲದ ಡೊಂಬರ ನೋಡಿ ನಗಲು ಯಾಕೆ ಬದುಕಿಸಿದೆ ನನ್ನ
ಕಣ್ಣಿಗಂಟಿದ ಹನಿಗಳೆಲ್ಲವೂ ಕೊರಗುತಿವೆ ಬಯಲ ಗಾಯದ ಉರಿಗೆ
ಒಲವನೆಚ್ಚಿ ತಳ್ಳಬೇಕು ಬದುಕ ಬಂಡಿ ಟೊಳ್ಳಾದ ಬೀಜ ಕೊಟ್ಟು ಯಾಕೆ ಉಳಿಸಿದೆ ನನ್ನ
`ಪ್ರೇಮಾ’ ಕೇಳು ಬೇವು ಬೆಲ್ಲ ತುಂಬಿದ ಬಟ್ಟಲಿಡಿದು ಹಸನಾಗಿ ಬಾಳಬೇಕು ಎಲ್ಲರೆದುರು
ಕಾಲು ದಾರಿಯ ಕಂದೀಲೆದುರಿಗೆ ಬಿರುಗಾಳಿ ಕೊಟ್ಟು ಯಾಕೆ ಉಳಿಸಿದೆ ನನ್ನ





ಏನು ಇಲ್ಲದಿದ್ದರು ಜೀವನ ಜೀವಕ್ಕಾಗಿ ಬದುಕು ಬೇಕು ಎಂಬುವ ದಾರಳತನವನ್ನ ಕವಿತೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ
..baduka priti heeLikoduva uttama gazal…
nice gazal..
Channagide nimma GAZAL
ನಿಮ್ಮಿದ ಇನ್ನಷ್ಟು ಗಜಲ್ ಪ್ರಕಾರದ ಕಾವ್ಯ ಹೊರ ಬರಲಿ.. ತುಂಬಾ ಚೆನ್ನಾಗಿದೆ… ಬರೀತಾ ಇರಿ ಹೀಗೆ…