– ಉದಯ್ ಇಟಗಿ
ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಲಲ್ಲೆಗೆರೆಯುತ್ತಾ ಕೈಕೈ ಹಿಡಿದು ನಡೆದಾಡುವದು ಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ಕಿತ್ತಾಡುವದು ಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್ನಿಲ್ಲಿ ತಮಗಿಷ್ಟ ಬಂದುದದನ್ನುಊಟಮಾಡುವದು ಮದುವೆ ಎಂದರೆ ಇಬ್ಬರೂ ತಮಗಿಷ್ಟವಾದುದನ್ನು ತಮಗಿಷ್ಟಬಂದಕಡೆ ತಿನ್ನುವದು ಪ್ರೀತಿ ಎಂದರೆ ಸೋಫಾದ ಮೇಲೆ ಒಬ್ಬರೊನ್ನೊಬ್ಬರು ಬೆಚ್ಚಗೆ ತಬ್ಬಿಕೊಂಡು ಮುದ್ದುಗರೆಯುವದು ಮದುವೆ ಎಂದರೆ ಅದೇ ಸೋಫಾದ ಮೇಲೆ ಕುಳಿತು ವ್ಯಾಜ್ಯಗಳನ್ನುಇತ್ಯರ್ಥಮಾಡುವದು ಪ್ರೀತಿ ಎಂದರೆ ನಮ್ಮ ಮಕ್ಕಳು ಹೇಗಿರಬೇಕೆಂದು ಕನಸು ಕಾಣುವದು ಮದುವೆ ಎಂದರೆ ಅವರಿಂದ ಹೇಗೆ ದೂರ ಓಡಿಹೋಗುವದೆಂದು ಯೋಚಿಸುವದು
ಕಲೆ : ವೆ೦ಕಟ್ರಮಣ ಭಟ್ಟ
ಪ್ರೀತಿ ಎಂದರೆ ಲಗುಬಗೆನೆ ಶೃಂಗಾರಶಯ್ಯೆಗೆ ತೆರಳುವದು ಮದುವೆ ಎಂದರೆ ಮಲಗುವ ಕೋಣೆಗೆ ಓಡುವದು ಪ್ರೀತಿ ಎಂದರೆ ಪ್ರಣಯದ ಸುತ್ತಾಟ ಮದುವೆ ಎಂದರೆ ಜಲ್ಲಿಕಲ್ಲುಗಳ ಮೇಲಿನ ನಡೆದಾಟ ಪ್ರೀತಿ ಎಂದರೆ ಎಲ್ಲವೂ ಇಂಪು ತಂಪು ನಾದ ನಿನಾದ ಮಧುರ ಮದುವೆ ಎಂದರೆ ಬ್ಯಾಂಕುಗಳಲ್ಲಿನ ಝಣಝಣ ಕಾಂಚಾಣವೇ ಸುಮಧುರ ಪ್ರೀತಿ ಎಂದರೆ ಒಂದೇ ಪೇಯ ಎರಡು ನಳಿಕೆಗಳು ಮದುವೆ ಎಂದರೆ ಪೇಯ ಹೀರಿದ್ದು ಸಾಕಲ್ಲವೇ? ಎಂಬಭಾವ ಪ್ರೀತಿ ಎಂದರೆ ಕುರುಡು ಮದುವೆ ಎಂದರೆ ಕಣ್ಣು ತೆರೆಸುವಾಟ! (ಮೂಲ ಇಂಗ್ಲೀಷ್ : ಅನಾಮಧೇಯ)]]>






0 Comments