ಪ್ರೀತಿಯ ಕುರಿತು ಮಾತಾಡುವಾಗ..

ಪ್ರೀತಿ ಅಂದರೆ ನೀನು
ಖಾದರ್ ಮೊಹಿಯೊದ್ದೀನ್. ಕೆ.ಎಸ್

ಪ್ರೀತಿಯ ಕುರಿತು ಮಾತಾಡುವಾಗ
ನನ್ನಲ್ಲೇನೋ ಹೊಸ ಪುಳಕ ಮೂಡುತ್ತದೆ
ಜನ ಏನು ಅಂದುಕೊಳ್ಳುತ್ತಾರೆ ?
ನನಗದರ ಪರಿವೆ ಇರುವುದಿಲ್ಲ
ಏಕೆಂದರೆ ನಾನು ಅಪರಾಧ ಮಾಡುತ್ತಿಲ್ಲವಲ್ಲ
ಅಪರಾಧ ಮಾಡುವವನು ಭಯ ಪಡಬೇಕು
ಪ್ರೀತಿ ಮಾಡುವವನಿಗೆ ಯಾತರ ಭಯ ?

ಜನ ಏನೇನೋ ಮಾತಾಡಿಕೊಳ್ಳುತ್ತಾರೆ
” ನೀನು ನಗುವಾಗ ಚಂದ್ರಮನ ಹೊಳಪು ಹೆಚ್ಚಾಗಿ
ಹಾಲು ಬೆಳದಿಂಗಳು ಹೊನಲಾಗಿ ಹರಿಯುತ್ತದೆ ” !
ಅನ್ನುತ್ತಾರೆ

ನಿಜವಾಗಿಯೂ
“ನಿನ್ನ ಕಣ್ಣುಗಳಲ್ಲಿ ಸ್ವರ್ಗ ಗೋಚರಿಸುತ್ತದೆ ” !
ಎಂದು ಹೇಳುತ್ತಾರೆ

” ಪ್ರೇಮದ ಹೆಸರಿನಲ್ಲಿ ಸಾವಿರಾರು ಗೀತೆಗಳು ಹೇಗೆ ಬರೆಯಲ್ಪಟ್ಟಿವೆ ” ?
ಎಂದು ಹುಬ್ಬೇರಿಸುತ್ತಾರೆ

ಜನ ಹೀಗೆ ಹಲವಾರು ಪ್ರಶ್ನೆಗಳ ಸುರಿಮಳೆ ಗೈಯ್ಯುತ್ತಾರೆ
ನಾನದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ

ಆದರೆ ನೀನು ನನ್ನ ಸುತ್ತಲೂ ಸುಳಿದಿರುಗಿದಾಗ
ಮಾತ್ರ ನನಗೆ ಆಶ್ಚರ್ಯವಾಗುತ್ತದೆ
ಜನ ಮಾತಾಡಿಕೊಳ್ಳುವುದೆಲ್ಲ ಎಷ್ಟೊಂದು
ಸತ್ಯ ಅನ್ನಿಸುತ್ತದೆ
ನಿಜವಾಗಿಯೂ
ಚಂದ್ರಮ ನಿನ್ನ ನಗುವಿನಲ್ಲಿ ಹಾಲು ಬೆಳದಿಂಗಳಾಗಿ
ಹರಿಯುತ್ತಾನೆ
ನೀನು ನನ್ನೆಡೆಗೆ ಪ್ರೀತಿಯಿಂದ ನೋಡುತ್ತೀಯಲ್ಲ
ಆವಾಗ ನನಗೆ ಸ್ವರ್ಗವೇ ಕಂಡಂತಾಗುತ್ತದೆ
“ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ನೀನು
ನುಡಿದ ಕ್ಷಣ ನನ್ನ ದೇಹದ ಕಣಕಣದಲ್ಲೂ
ನಕ್ಷತ್ರಗಳು ಮಿನುಗತೊಡಗುತ್ತವೆ

ನಿನ್ನ ಸುಕೋಮಲ ಕೈಗಳು ನನ್ನನ್ನು
ಸ್ಪರ್ಶಿಸುವಾಗ ನಿನ್ನ ಮುಖದಲ್ಲಿ ಅಲೆ ಅಲೆಯಾದ
ಭಾವ ತರಂಗ
ಗುಲಾಬಿಯ ಪಕಳೆಗಳಂಥ ನಿನ್ನ ತುಟಿಗಳು
ನನ್ನ ಕೆನ್ನೆಯ ಮೇಲೆ ಉಂಗುರ ಮೂಡಿಸುವಾಗಿನ
ಕಂಪನದ ಕಲರವ
ನನ್ನ ತೋಳಮಾಲೆಯಲ್ಲಿ ನಾಚಿ ನೀರಾದ ನೀನು
ಕಿವಿಯಲ್ಲಿ ಉಸುರಿದ ಪಿಸುಮಾತುಗಳ ಇಂಚರ

ಅಹ್, ಅದನ್ನೆಲ್ಲಾ ನೆನೆಯುತ್ತ, ಧೇನಿಸುತ್ತ ಇಡೀ
ಬದುಕನ್ನೇ ನಿನ್ನ ನೆನಪಿನಲ್ಲೇ ಕಳೆದುಬಿಡುವ
ಆಸೆಯಾಗುತ್ತದೆ
ಇಲ್ಲವೇ ನಿನ್ನ ನಳಿದೋಳುಗಳಲ್ಲಿ ತಲೆಯನಿಟ್ಟು
ಮತ್ತೆ ಮತ್ತೆ ಸಾಯುವ ಬಯಕೆಯಾಗುತ್ತದೆ

ನಿಜ ಹೇಳಲೇ ಗೆಳತಿ,… ” ಪ್ರೀತಿ ಅಂದರೆ ನೀನು “

‍ಲೇಖಕರು avadhi

January 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: