– ಮಂಜುನಾಯಕ್ ಚೆಲ್ಲೂರ್

ತೊಯ್ದು ತೊಪ್ಪೆಯಾಗಿದ್ದೇನೆ ನೆನೆದು ನೆನೆದು ಅವಳ ನೆನಪಿನಲ್ಲಿ.
ಅವಳೋ ಸುಮ್ಸುಮ್ನೇ ಆವರಿಸೋ ಮೌನ. ವಶೀಕರಿಸೋ ಗಾನ.
ಎದೆಯಾಗಿನ ನಿಲ್ಲದ ತನನನ..
ಪ್ರೀತಿಯೆಂದವರ ಹಳಿಯುತ್ತಿದ್ದೆ ಹಳಿತಪ್ಪಿದೋರು ನೀವಂತ.
ಪ್ರೀತಿಯೇ ಹಣಿದುಬಿಟ್ಟಿತು ನನ್ನ. ಹೊಸ್ತಿಲೊಳಗೂ ಬಿಟ್ಟುಕೊಳ್ಳದೆ
ಸೇಡು ತೀರಿಸಿಕೊಳ್ತಿದೆಯಾ? ಇಲ್ಲಾ ಪ್ರೀತಿಗೂ ಜಾತಿ ಭೇದವಾ?
ಅವಳೇನು ಕಳೆದುಹೊಗಿಲ್ಲ. ಕಳೆದುಹೋಗಿರೋದು ನಾನು.
ಬೇಡದ ಮಗ ಮನೆ ಬಿಡುವಂತೆ. ಹುಡುಕಿ ತರುವ ಮನಸು
ಮನಸಿಗಿಲ್ಲ.
ಏನಾದರೂ ನೆವ ಮಾಡಿಕೊಂಡು ಸಿಕ್ಕೆ ಸಿಗುತ್ತಾಳೆ.
ಯಾರದೋ ಮುಂಗುರುಳ ಮಿರುಗಿನಲ್ಲಿ. ನಂಗಷ್ಟೇ ಕೇಳುವ
ಜುಮುಕಿಗಳ ಸದ್ದಿನಲ್ಲಿ. ಇನ್ಯಾರೋ ಅಪರಿಚಿತ ಹುಡುಗಿಯ
ನಗುವಿನಲ್ಲಿ. ಎಲ್ಲಿಯಾದರೂ ಆಗಬಹುದು.
ಅವಳಿಗೆ ಸಂಭಂದಿಸಿದ ಹುಲ್ಲು ಕಡ್ಡಿಯ ಚೂರು ಸಾಕು
ನೆನಪು ಚಿಗುರಿ ಪುಳಕಗೊಳ್ಳಲು.
ಉಸಿರಾಟ ಏರುಪೇರಾಗಲು.
ಹುಚ್ಚೆನಿಸುತ್ತದೆ ನನ್ನದು. ಅಡಿಕ್ಟಾಗಿಹೋಗಿದ್ದೇನೆ ಅವಳಿಗೆ.
ಅವಳ ಸುರಗಿ ನೆನಪುಗಳಿಗೆ. ಪ್ರೀತಿಯೆಂದರೆ ಮತ್ತೊಬ್ಬರಿಗೆ ಅಡಿಕ್ಟಾಗುವುದಾ?
ಹೌದು ಮತ್ತಿನ್ನೇನು.





Chennagide
superb
manja priti adre yaradu track mele ondu railu saguv hage nodu
very nice..