ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆಗೆ ಆಹ್ವಾನ…

ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ-೨೦೨೩

ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಸ್ಪರ್ಧೆ-೨೦೨೩ ರನ್ನು ಏರ್ಪಡಿಸಿದೆ. ನಾಡಿನ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪುರಸ್ಕಾರ ಪಡೆಯುವ ಕಥೆಗೆ ರೂ. ೫೦೦೦/- ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಲಭಿಸಲಿದ್ದು, ಡಾ. ಪ್ರಹ್ಲಾದರ ಜನ್ಮ ದಿನವಾದ ಜೂನ್ ೩ ರಂದು ಬಹುಮಾನವನ್ನು ವಿತರಿಸಲಾಗುವುದು ಎಂದು ‘ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಉದಯೋನ್ಮುಖ ಕತೆಗಾರರು ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಪಡೆದ ‘ನಮ್ಮ ಕಾಲೇಜಿನ ವಿದ್ಯಾರ್ಥಿ/ನಿ’ ಎಂಬ ದೃಢೀಕೃತ ಪ್ರಮಾಣ ಪತ್ರದೊಂದಿಗೆ ತಮ್ಮ ಅಪ್ರಕಟಿತ ಸ್ವರಚಿತ ಕಥೆಯೊಂದನ್ನು ಕಳುಹಿಸಬೇಕು.

ವಿ.ಸೂ : ಕತೆಗಳನ್ನು ಕಾಗದದ ಒಂದೇ ಮಗ್ಗುಲಿಗೆ ಕಾಗುಣ ತ ತಪ್ಪಿಲ್ಲದೇ ಶುದ್ಧವಾಗಿ ಬರೆದು ಕಳಿಸಿ ಅಥವಾ ಟೈಪ್ ಮಾಡಿ ಕಳಿಸಿ. ಮೇಲ್ ಮೂಲಕವೂ ಕತೆಯನ್ನು ಸ್ವೀಕರಿಸುತ್ತೇವೆ. ಮೇಲ್ ಜೊತೆಯಲ್ಲೂ ದೃಢೀಕೃತ ಪ್ರಮಾಣ ಪತ್ರದ ಲಗತ್ತಿರಲಿ.

ಕಥೆ ಕಳುಹಿಸಲು ಕೊನೆಯ ದಿನಾಂಕ : ೧೫ ಎಪ್ರಿಲ್ ೨೦೨೩

ಕಥೆ ಕಳುಹಿಸಬೇಕಾದ ವಿಳಾಸ :
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ, ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ, ಛಿ/o ಸುನಂದಾ ಪ್ರಕಾಶ ಕಡಮೆ, # ೯೦, ‘ನಾಗಸುಧೆ’ ೬/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- ೫೮೦೦೩೧, ದೂರವಾಣಿ : ೯೮೪೫೭೭೯೩೮೭

ಮೇಲ್ ವಿಳಾಸ: [email protected]

‍ಲೇಖಕರು avadhi

March 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: