ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಶಸ್ತಿಗೆ ಕೃತಿಗಳ ಆಹ್ವಾನ

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ ಸಾಹಿತ್ಯ, ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕೃತಿಕ ಸಂಸ್ಥೆ.

ಹೊಸ ಪೀಳಿಗೆಯ ಉದಯೋನ್ಮುಖ ಲೇಖಕಿಯರ ಪ್ರಕಟಿತ ಪ್ರಥಮ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿಯೊಂದನ್ನು ನೀಡುವ ಯೋಜನೆಯನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ.

ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಶಾಲು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ. ಪ್ರಥಮ ಪ್ರಶಸ್ತಿಗಾಗಿ 2019ರಲ್ಲಿ ಪ್ರಕಟವಾದ ತಮ್ಮ ಚೊಚ್ಚಲು ಕವನ ಸಂಕಲನವನ್ನು ಲೇಖಕಿಯರು ಕಳುಹಿಸಬಹುದಾಗಿದೆ.

ಕೃತಿಯ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸೆಪ್ಟಂಬರ್ ೩೦ರೊಳಗೆ ಕಳುಹಿಸತಕ್ಕದ್ದು.

ಜಿ.ಎನ್.ರಂಗನಾಥ ರಾವ್,

ಕಾರ್ಯಾಧ್ಯಕ್ಷರು,

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ,

ನೊ.266, `ಸ್ನೇಹ’, 3ನೇ ಮೈನ್, 8ನೇ ಬ್ಲಾಕ್, ಕೋರಮಂಗಲ, ಬೆಂಗಳೂರು- 560 095

ಫೋನ್: 080- 25701165/ 63624 73151

ತೀರ್ಪುಗಾರರ ಸಮಿತಿಯ ನಿರ್ಣಯವೇ ಆಖೈರು. ಈ ಸಂಬಂಧ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.

ಎಂದು ಸಮಿತಿಯ ಗೌರವಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಹಾಗೂ ಕಾರ್ಯದರ್ಶಿ ತೀರ್ಥ ಜಿ.ಆರ್.ಆರ್. ತಿಳಿಸಿದ್ದಾರೆ.

‍ಲೇಖಕರು nalike

8 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading