ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರತಿ ರಾತ್ರಿ ಪ್ರೇಮದ ಅಕ್ಷಯ ಸಾಲ'

ನನ್ನನವನಿಗೆ ಕೊಟ್ಟೆ

ವಿದ್ಯಾಶಂಕರ್ ಹರಪನಹಳ್ಳಿ
ನನ್ನನವನಿಗೆ ಕೊಟ್ಟೆ

ಬದಲಿಗೆ ಅವನನೇ ಪಡದೆ
ಜೀವಮಾನದ ಜೀವದ ಒಪ್ಪಂದ
ನಡೆದಿದ್ದು ಹೀಗೆ..
 
ಪಡೆದದ್ದಕ್ಕಿಂತ ಕೊಟ್ಟದ್ದು
ಕಡಿಮೆಯಾಯಿತೋ ಎನೋ?
ಈ ಪ್ರೀತಿಯ ವ್ಯವಹಾರದಲಿ
ಅದಾರೇನ್ಮಾಡಲಿ ನಾ ಬರಿಗೈ!

ದೂರದೃಷ್ಟಿಯ ಅಪಮೌಲ್ಯ
ಆದರೂ ಮುಂದುವರಿದೆ ವಹಿವಾಟು
ಸುಖ ಸಂಸಾರದ ರಮ್ಯ ಕನಸು
ಸಾಗರದಾಚೆ ಇರುವುದು, ಸುಳ್ಳೇ?
 
ಬಿದ್ದರೆ ಇಬ್ಬರು ಒಟ್ಟಿಗೆ
ನಡೆದರು ಕೆಲವರು ಜೊತೆಜೊತೆಗೆ
ಪ್ರತಿರಾತ್ರಿ ಪ್ರೇಮದ ಅಕ್ಷಯಸಾಲ
ಮಧ್ಯಾಹ್ನಕೆ ಆಗಬಹುದು ದಿವಾಳಿ!
 
(ಮೂಲ :“I gave myself to him” ಎಮಿಲಿ ಡಿಕಿನ್ಸನ್ (December 10, 1830 – May 15, 1886, ಅಮೇರಿಕಾ ಕವಯತ್ರಿ)

‍ಲೇಖಕರು avadhi

5 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading