ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ತಲ್ಲಣಗಳು

ನನ್ನ ತಲ್ಲಣಗಳು- ಪ್ರತಿಭಾ ನಂದಕುಮಾರ್

‘ಶೂದ್ರ’ ವಿಶೇಷಾಂಕದಲ್ಲಿ

a8

ಟಿವಿಯಲ್ಲಿ ಉತ್ತರ ಭಾರತದ ಒಂದು ಊರಿನಲ್ಲಿ ಪೊಲೀಸರು ಆರು ವರ್ಷದ ಹುಡುಗಿಯೊಬ್ಬಳ ಚಿಕ್ಕ ಕೂದಲು ಎರಡೂ ಕಡೆ ಹಿಡಿದು ಎತ್ತುತ್ತಿದ್ದಾರೆ. ಅವಳು ನೋವು ತಡೆಯಲಾರದೇ ಕಿರುಚುತ್ತಿದ್ದಾಳೆ. ಪೊಲೀಸರು ಅವಳನ್ನು ಇಳಿಸಿ ಮತ್ತೆ ಮತ್ತೆ ಎತ್ತುತ್ತಾರೆ. ಟಿವಿ ಅದನ್ನೇ ಮತ್ತೆ ಮತ್ತೆ ತೋರಿಸುತ್ತಿದೆ. ಅವಳು ಏನನ್ನೋ ಕಳವು ಮಾಡಿದ ಆರೋಪ. ಟಿವಿ ನ್ಯೂಸ್ ರೀಡರ್ ಮತ್ತೆ ಮತ್ತೆ ಕೇಳುತ್ತಿದ್ದಾಳೆ ಅಲ್ಲಿ ಕಾನೂನು ಇಲ್ಲವಾ, ಚಿಕ್ಕ ಮಕ್ಕಳನ್ನು ಚಿತ್ರಹಿಂಸೆ ಮಾಡಬಾರದು ಅಂತ ಕಾನೂನಿದೆ ಗೊತ್ತಿಲ್ಲವಾ ಅಂತ. ಆದರೆ ಹಿಂಸಿಸುತ್ತಿರುವವರು ಪೊಲೀಸರು. ಅವಳಿನ್ನೂ ಆರು ವರ್ಷದ ಮಗು.

ನರಿ ಮುಖದ ಮುತಾಲಿಕ್ ಹೇಳುತ್ತಿದ್ದಾನೆ ನಮ್ಮ ಭಾರತ ಸಂಸ್ಕೃತಿಗೆ ಪಬ್ ಬೇಡಾ. ಅವನ ಹಿಂದೆಯೇ ಶ್ರೀರಾಮ ಸೇನೆಯ ಯಾರೋ ಸಿಳ್ಳೆಕ್ಯಾತ ಹೇಳುತ್ತಿದ್ದಾನೆ ಹುಡುಗಿಯರು ಹಾಗೆಲ್ಲಾ ಮಾಡಬಾರದು. ಮಾನವ ಹಕ್ಕು ಆಯೋಗದ ನಿರ್ಮಲಾ ವೆಂಕಟೇಶ್ ಹೇಳುತ್ತಿದ್ದಾಳೆ ರೇಣುಕಾ ಚೌಧರಿ ಯಾರು ನನ್ನ ಬಗ್ಗೆ ಟೀಕೆ ಮಾಡಲು, ನಾನು ನೀಡಿದ ವರದಿಯೇ ಅಂತಿಮ ಸತ್ಯ. ಅದೇ ಸಂಜೆ ಆಫೀಸಿನಲ್ಲಿ ವರದಿಗಾರ ಫೈಲ್ ಮಾಡಿದ ಸುದ್ದಿ ನಿರ್ಮಲಾ ವೆಂಕಟೇಶ್ ಸಲ್ಲಿಸಿದ ವರದಿಯಲ್ಲಿ ಶ್ರೀ ರಾಮ ಸೇನೆಯ ಹೆಸರೇ ಇಲ್ಲ. ಪಬ್ಗೆ ಯಾಕೆ ಸೆಕ್ಯೂರಿಟಿ ಇಲ್ಲ, ಹುಡುಗಿಯರು ಯಾಕೆ ಅಲ್ಲಿಗೆ ಹೋಗಬೇಕಿತ್ತು ಇತ್ಯಾದಿ. ಮೇಲ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿಯವರು ಪಬ್ ಮೇಲಿನ ದಾಳಿಯನ್ನು ಖಂಡಿಸಿದ “ಅಪರಾಧ”ಕ್ಕೆ ಅವರನ್ನು ಕೆಲಸದಿಂದ ತೆಗೆದುಹಾಕುವ ಯತ್ನದ ಬಗ್ಗೆ ಬನ್ನಿ ವಿರೋಧಿಸಿ ಅಂತ ಗೆಳತಿ ಬರೆದಿದ್ದಾಳೆ.

2734738201_d4dfa8a315

ಯಾರೋ ಪ್ರೊಪೋಸ್ ಮಾಡಿದನಂತೆ, ಅವಳು ಒಪ್ಪದಿದ್ದಕ್ಕೆ ಅವಳ ಮುಖಕ್ಕೆ ಆಸೀಡ್ ಹಾಕಿದನಂತೆ. ಹುಡುಗಿ ಒಪ್ಪದಿದ್ದರೆ ಆಸಿಡ್ ಹಾಕುವುದು ನಮ್ಮ ಸಂಸ್ಕೃತಿ. ಮುತಾಲಿಕ್ ಅದನ್ನು ವಿರೋಧಿಸುವುದಿಲ್ಲ. ಹೆಂಗಸರ ಮೇಲೆ ಏನು ಅತ್ಯಾಚಾರ ಬೇಕಾದರೂ ನಡೆಯಬಹುದು. ಎಲ್ಲವೂ ಮುತಾಲಿಕ್ಗೆ ಸಹ್ಯವೇ. ತುಟಿ ಪಿಟಿಕ್ ಅನ್ನುವುದಿಲ್ಲ. ಯಾರು ಏನು ಬೇಕಾದರೂ ಮಾಡಬಹುದು. ಬೈಯುವುದಾದರೆ ಬೈಯಿರಿ ಹೆಂಗಸರನ್ನ, ಮಯರ್ಾದೆ ಮೀರಿದ್ದಕ್ಕೆ, ಸಂಸ್ಕೃತಿ ಹಾಳುಮಾಡಿದ್ದಕ್ಕೆ. ಆಸಿಡ್ ಎಸೆಯಿರಿ, ಹೊಡೆಯಿರಿ, ಬಡಿಯಿರಿ, ಮನೆ ಬಿಟ್ಟು ಓಡಿಸಿ, ಕೊಲ್ಲಿರಿ, ವೇಶಾವೃತ್ತಿಗಿಳಿಸಿ, ಆಫೀಸಿನಲ್ಲಿ ಹಿಂಸೆ ನೀಡಿ, ಮನೆಯಲ್ಲಿ ಕೂಡಿಹಾಕಿ, ಕೈಕಾಲಿಗೆ ಬರೆ ಇಡಿ, ಸರಪಳಿಯಲ್ಲಿ ಕಟ್ಟಿಹಾಕಿ, ನಿತ್ಯ ಅತ್ಯಾಚಾರ ಮಾಡಿ… ಎಲ್ಲದಕ್ಕೂ ಇದು ತಕ್ಕ ಬಲಿ.

ಶಿಕ್ಷಣ ಕೊಡಬೇಡಿ. ಧೈರ್ಯ ಕಲಿಸಬೇಡಿ. ಸ್ವಾವಲಭನೆ ಕಲಿಸಬೇಡಿ. ಹೊಟ್ಟೆ ತುಂಬ ಊಟ ಹಾಕಬೇಡಿ. ಹೊಟ್ಟೆಯಲ್ಲೇ ಮುಗಿಸಿಬಿಡಿ. ವಿದ್ಯಾವಂತರು, ಹಣವಂತರು ಊಟ್ಟು ತೊಟ್ಟು ಸಿಂಗಾರವಾದ ಹೆಣ್ಣುಗಳನ್ನು ಕುಣಿಸಿ, ಅನುಭವಿಸಿ. ಹಣ ಚೆಲ್ಲಿ. ಸೀರೆ ಸೆಳೆಯಿರಿ. ಚಿಕ್ಕ ಚಿಕ್ಕ ಚೆಡ್ಡಿ ತೊಡಿಸಿ ಐಟಂ ಸಾಂಗ್ ಮಾಡಿಸಿ. ಅತ್ತ ಪಬ್ಬಿನಲ್ಲಿ ಓಡಿಸಿದವರೇ ಇತ್ತ ಲಕ್ಷ ಲಕ್ಷ ಕೊಟ್ಟು ಬುಕ್ ಮಾಡಿ. ಪರದೆಯ ಮೇಲೆ ನೋಡಿ ಆನಂದಿಸಿ. ಬೇಕಾದರೆ ಕರೆಸಿಕೊಂಡು ಮಜಾ ಮಾಡಿ. ಹಣದ ಅಧಿಪತ್ಯ ಹೆಣ್ಣಿನ ಕೈಗೆ ಕೊಡಬೇಡಿ. ಬೆವರು ಸುರಿಸಿ ದುಡಿದದ್ದನ್ನೂ ಬಾಚಿಕೊಳ್ಳಿ. ಒದ್ದು ಮೂಲೆಗೆ ಸೇರಿಸಿ. ಗಂಡಾದರೆ ಹಾದರ ಪರವಾಗಿಲ್ಲ. ಏನೀಗ. ಎಲ್ಲರೂ ಈಗ ಅದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿ ಎಲ್ಲವೂ ಸೈ. ಹೆಣ್ಣಾದರೆ ಸಲ್ಲದು. ಕಾಲು ಮುಟ್ಟಿ ನಮಸ್ಕರಿಸುವುದು ತಪ್ಪು, ಪರಪುರುಷನನ್ನು ಸೋಕುವುದೆಂದರೆ ಏನು! ಯಾರನ್ನೂ ನೋಡಬಾರದು, ಮಾತಾಡಿಸಬಾರದು.

ಇನ್ನು ಪ್ರೀತಿಸುವುದಂತೂ ಹೆಣ್ಣಿಗೆ ಶಾಪ. ಎಲ್ಲವೂ ನುಚ್ಚಾಯ್ತು ನೀರ ಹೊಳಿಯಾಗ. ಅಸಲು ಪ್ರೀತಿಸಲೇಬಾರದು. ಆದರೂ ಬಚ್ಚಿಡಬೇಕು. ಬರೆಯಲಾಗಿದೆ ಗೋಡೆಯ ಮೇಲೆ-ಇಲ್ಲಿ ಪ್ರೀತಿ ನಿಷಿದ್ಧ. ಇಲ್ಲಿ ಈಗ ತಾಂಡವವಾಡುತ್ತಿರುವುದು ದ್ವೇಷ ಮಾತ್ರ. ಮುತ್ತಿಟ್ಟರೆ ಪಾಪ. ಆದರೆ ಕೊರಳು ಕತ್ತರಿಸುವುದು ಇಲ್ಲಿ ಮಾನ್ಯ. ಪ್ರೀತಿಗೆ ಸಮ್ಮಾನವಿಲ್ಲ. ಅದು ಕಲ್ಲು ಮುಳ್ಳಿನ ಹಾದಿ, ಆದರೆ ವಂಚನೆ, ಕಪಟ, ಮೋಸಕ್ಕೆ ಸಕಲ ಮಯರ್ಾದೆ. ಸುಳ್ಳು ಹೇಳಿರೋ, ಬದುಕಿರೋ, ಕಪಟ ನಾಟಕ ಅಂದರೆ ಸೈ ಸೈ ಅನ್ನುತ್ತಾರೆ. ಅಯ್ಯಾ ಪ್ರೀತಿ ತುಂಬಿ ಅಂದಿರುವೆ ಬೊಗಸೆಯಲ್ಲಿ ಅಂದರೆ ಹಚಾ ಹಚ್ ನಡಿ ದೂರ. ದ್ವೇಷಕ್ಕೆ ಮಣೆ. ಅದೇ ಸಾಮಥ್ರ್ಯ. ಹೊಡೆಯಬಲ್ಲೆಯಾ ನೀನು ವೈರಿಯ? ಆದರೆ ಸೈರಿಸಬೇಕು ಅಪಮಾನವನ್ನ, ಅಪನಂಬಿಕೆಯನ್ನ, ಕಣ್ಣೆದುರೇ ಕೊಳಕುಮಂಡಲಗಳು ಪೀಠವೇರಿ ಮೆರೆಯುವುದನ್ನ. ಬುದ್ಧನ ಬಗೆ ಕಾಣಿರೋ. ನಿರ್ಮಲ ಸ್ನೇಹ ಅರಿಯಿರೋ. ಆಗುವುದಿಲ್ಲ ಅವರಿಗೆ. ತಮ್ಮ ತಮ್ಮ ಸೇರುಗಳಲ್ಲಿ ಅಳೆಯುವವರಿಗೆ ನದಿಯಲ್ಲಿ ನೀರೆಷ್ಟಿದೆ ಅನ್ನುವ ಕಲ್ಪನೆಯಿಲ್ಲ. ಪ್ರೀತಿಯೇ ಮೈತಾಳಿ ಬಂದವಳನ್ನು ಅವರು ಹೇಳುತ್ತಾರೆ ಕಲಿ ನೀನೂ ನಮ್ಮಂತೆ ನಕಲಿಯಾಗು, ಟೊಳ್ಳಾಗು, ತಳವಿಲ್ಲದ ಮಡಕೆಯಾಗು, ಹಲ್ಲಿಲ್ಲದ ಹಾವಾಗು.

ಜಗತ್ತಿಗೆ ಪ್ರೀತಿ ಬೇಕಿಲ್ಲ. ಸ್ನೇಹ ಬೇಕಿಲ್ಲ. ಕ್ರೌರ್ಯವಾದರೆ ನಂಬಲು ಹೆಚ್ಚು ಸುಲಭ. ಇಲ್ಲಿ ಹಿಂಸೆಗೆ ಮಯರ್ಾದೆ. ಮೆಲುದನಿಯ ಓಲೈಕೆಗೆ ಬೆಲೆಯಿಲ್ಲ. ಜೋರು ಬಾಯಿಯವರು ಬಂದರೆ ದಾರಿ ಬಿಡಿ. ಒಳಗೊಳಗೆ ನೊಂದು ಕಣ್ಣಲ್ಲಿ ನೀರು ತುಂಬಿ ತುಟಿ ನಡುಗುತ್ತಾ ಆತ್ಮ ನಿವೇದಿಸಿಕೊಂಡರೆ ನಗುತ್ತಾರೆ. ಕೊನೆಯವರೆಗೂ ಒಂದು ಅಪ್ಪುಗೆ, ಒಂದು ನೇವರಿಕೆ, ಒಂದು ಕಣ್ಣೋಟ, ಒಂದು ಮೆಚ್ಚಿಕೆಯ ಮಾತು ಏನೂ ಸಿಗುವುದಿಲ್ಲ. ಜೊತೆಗೇ ತೂಕ ಹಾಕುತ್ತಾರೆ. ನನ್ನ ಮಾತು, ನಡತೆ, ನೋಟ ಎಲ್ಲವನ್ನೂ ಹರಾಜಿಗಿಟ್ಟು ಸವಾಲೆಸೆಯುತ್ತಾರೆ.

ಅವಳು ನಕ್ಕು ಹೇಳುತ್ತಾಳೆ. ಅಯ್ಯಾ, ಸ್ವರ್ಗವೂ ಇದೇ ನರಕವೂ ಇದೇ. ಮಾಡಿದ್ದನ್ನು ಉಣ್ಣುವ ಜಾಗವೂ ಇದೇ. ಈ ಜನ್ಮದಲ್ಲೇ ತೀರಿಸಬೇಕು. ಹೆಣ್ಣ ಕರುಳು ಬೆಂದರೆ, ಮನಸು ಮುರಿದರೆ, ನೆಲಕ್ಕಿಂತ ಇನ್ನೂ ಕೆಳಗೆ ತಳ್ಳಿದರೆ, ಒಲುಮೆ ಮುದ್ದಿನ ಸೀಸೆ ಒಡೆದು ನಿರಾಕರಿಸಿದರೆ…..ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಬಹುದೇ? ತಾಯಿಯ ಮೊಲೆಹಾಲು ನಂಜಾಗಿ ಕೊಲುವೊಡೆ ನಾರಿ ತನ್ನಯ ಮನೆ ಕಳುವಿದಡೆ….. ಎಲ್ಲಿ ಅಡಗಿಕೊಳ್ಳುವಿರೋ? ನಾನು ಮುನಿದರೆ ನಿಮಗೆ ಬದುಕುಂಟೇ? ನನ್ನ ಮನ ಮುರುಟಿದರೆ ನಿಮಗೆ ನಲಿಯುಂಟೇ? ಮೂರ್ಖರು ಅರಿಯರು ಪಾಪ. ಅವರನ್ನು ಕ್ಷಮಿಸು ದೇವ.

ನನ್ನ ಹಾದಿ ಬೇರೆ, ನನ್ನ ಭಾಷೆ ಬೇರೆ. ನನ್ನ ಪ್ರೀತಿಯ ರೀತಿಯೇ ಬೇರೆ. ನಿಮ್ಮಂತೆ ಸುಳ್ಳಾಡಲಾರೆ. ಬರೆಯಬಹುದೇ ನಾನು ನನ್ನ ತಲ್ಲಣಗಳ, ಬರೆಯದಿರಬಹುದೇ? ಎದುರು ನಿಂತು ಬೊಗಸೆಯೊಡ್ಡಿದಾಗಲೇ ತಿಳಿಯಲಾರದವರು ಬರೆದ ಅಕ್ಷರಗಳಲ್ಲಿ ಕಂಡುಕೊಳ್ಳುವರೇ? ಕರುಳು ಕತ್ತರಿಸುವ ನೋವು, ಬಾಯಿ ಬೇಡದ ಸಾಂತ್ವನ, ಕಣ್ಣೊಳಗೆ ತುಂಬಿದ ಹನಿ, ಚಾಚಿದ ಕೈ…. ಅಪ್ಪಿಕೊಳ್ಳುವವರೇ ಇಲ್ಲ, ಕಣ್ಣೀರು ಒರೆಸುವವರೇ ಇಲ್ಲ. ಬೀಸುಗಾಲಿನಲ್ಲಿ ನಡೆಯುವವಳು ಧೀರಳೂ ಶೂರಳೂ ಎಂದು ಭ್ರಮಿಸಿ ಹತ್ತಿರ ಬರುವವರೂ ಇಲ್ಲ. ಆಗ ಕೇಳಿದರು, ಹೇಳಿದೆ ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನ್ನು ಸಲಹುವನು, ಇದಕೆ ಸಂಶಯವಿಲ್ಲ….

‍ಲೇಖಕರು avadhi

15 September, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

10 Comments

  1. vasanth

    Very good write up.
    thanks

  2. Jayalaxmi Patil

    “ಎದುರು ನಿಂತು ಬೊಗಸೆಯೊಡ್ಡಿದಾಗಲೇ ತಿಳಿಯಲಾರದವರು ಬರೆದ ಅಕ್ಷರಗಳಲ್ಲಿ ಕಂಡುಕೊಳ್ಳುವರೇ?”
    ನೀವು ಹೇಳಿದವುಗಳಲ್ಲಿ ಬಹುತೇಕ ನಿಜವಾದರೂ ಕೆಲವನ್ನ ನಾವಾಗಿಯೇ ಹೇರಿಕೊಳ್ಳುತ್ತೇವೆ ಅಂತನ್ನಿಸುವುದಿಲ್ಲವೆ ಪ್ರತಿಭಾ ಅವರೆ?

  3. ಸುಪ್ತದೀಪ್ತಿ

    ಪ್ರತಿಭಾ ಮೇಡಮ್,
    ನಿಮ್ಮ ಈ ತಲ್ಲಣಗಳು ಅಕ್ಷರ ಲೋಕಕ್ಕೆ ಅರ್ಪಿಸಿಕೊಂಡ ನೂರಾರು ಮನಸುಗಳ ತಲ್ಲಣಗಳೂ ಆಗಿವೆ. ನಿಮ್ಮ ಮಾತಿನಂತೆಯೆ, “ಎದುರು ನಿಂತು ಬೊಗಸೆಯೊಡ್ಡಿದಾಗಲೇ ತಿಳಿಯಲಾರದವರು ಬರೆದ ಅಕ್ಷರಗಳಲ್ಲಿ ಕಂಡುಕೊಳ್ಳುವರೇ?” ಸತ್ಯವಾಗಿ ಹೇಳಿದಿರಿ. ಕಲ್ಲಿನ ಮೇಲೆ ಮಳೆ ಸುರಿಸಿದರೆ ನಮ್ಮ ಜೀವಮಾನದಲ್ಲಿ ಕರಗದು, ಬದಲಾಗದು. ಮುಂದಿನ ಶತಮಾನಕ್ಕಾದರೂ ಮರಳಾಗದೆ?

  4. minchulli

    kannu thumbi banthu…. bareyalaare bareyadiralaare nanna thallanagala…

  5. s.s.rao.

    Smt. Pratibha avare,
    Nimma barahagala abhimani nanu.
    Tallanagalu smajakke hidida kannadiyanthide.
    Rao.

  6. Berlinder

    Shrimati Pratibha Nandakumar!

    I salute you from deep heart for your noble article about mishandling of women and children in India even today after 60 years of Independence and millions of Indians having had been gone abroad round the world for higher studies.
    What the police did with the small girl was a criminal act, which would have been treated as such in Germany and the culprits would have been suspended, brought to the court and punished by law. And it is obvious in India that there are no proper codex and limits to the police in performing their duties. It seems it is a situation of old feudalism of uncivilised lawlessness. Police means that they can do anything.
    It is horrible to see that the TV Reporter was just filming the cruel scene instead of inventing to help the child.
    I do not understand why all other women-folk India keep quiet instead of joining together with you for a good cause and begin a revolutionary movement!
    Cordially,
    Mahendra, Berlin, 16.09.09

  7. Kaligananath Gudadur

    ಪ್ರತಿಭಾ ಮೇಡಂ,
    ನಿಮ್ಮ ತಲ್ಲಣಗಳು ವಿಚಾರ ಮಾಡುವಂತೆ ಕಾಡಿಸುತ್ತಿವೆ. ಎಲ್ಲಾ ಓದುತ್ತಾ ಸುತ್ತಲಿನ ಜಗತ್ತಿನ ಸ್ತ್ರೀ ವಿರೋಧಿ ಮನಸ್ಸುಗಳ ಬಗ್ಗೆ ಜುಗುಪ್ಸೆ ಮೂಡುತ್ತದೆ. ಈ ಮನುಷ್ಯವಿರೋಧಿ ಜಗದಲ್ಲಿ ಹುಟ್ಟಿದ್ದಕ್ಕೆ ಬಲು ಬೇಸರವೆನಿಸುತ್ತಿದೆ. ಆದರೆ ಕೊನೆಯ ಸಾಲಿನಲ್ಲಿ ತಾವು ಬರೆದಂತೆ, ‘ತಲ್ಲಣಿಸದಿರು ಕಂಡ್ಯಾ… ತಾಳು ಮನವೆ, ಎಲ್ಲರನೂ ಸಲುಹುವನು ಇದಕೆ ಸಂಶಯಬೇಡ…’ ಈ ಸಾಲು ಕಿರಿಕಿರಿ ಎನಿಸಿತು. ಸಲುಹವನು ತೀರಾ ಅಸಹಾಯಕ, ನಿಷ್ಕರುಣಿಯಾಗಿದ್ದಕ್ಕಲ್ಲವೆ ಈ ರೀತಿ ನಡೆಯುತ್ತಿರುವುದಕ್ಕೆ…

    ಸಹೋದರ,
    ಕಲಿಗಣನಾಥ ಗುಡದೂರು

  8. Deepa

    madam, namskara!
    bahala chennagi namma manasina thumulagalanna akshara roopakke thandiddiri.
    i dont have words to express how much i loved each statement of yours.

  9. k.n.hebbar

    prtibha nandkumarara lekana nmmakalda hennina
    jeevnkke apoorv reetiyall knndihididide.

  10. Ganesh Shenoy

    A poetical article that released the suppressed tears
    moaning the fate of many a women persecuted in all spheres
    Each word used was so crafty
    Proving Prathiba in her Prathibe is very thrifty

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading