ಕಾಫಿಯಲ್ಲಿ ಚಿಕೋರಿ ಮಾತ್ರ ಇರುತ್ತದೆ ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಖಂಡಿತಾ ತಪ್ಪು. ಕಾಫಿಯೊಳಗೆ ಪ್ರತಿಭಾ ಕೂಡಾ ಇದ್ದಾರೆ. ಕಾಫಿಗೆ ಚಿಕೋರಿ ಹೇಗೆ ಅವಿಭಾಜ್ಯ ಅಂಗವೋ ಪ್ರತಿಭಾ ನಂದಕುಮಾರ್ ಕೂಡಾ.
ಕಾಫಿಯನ್ನು ಇವರ ಹಾಗೆ ಉಸಿರಾಡಿದ ಸಾಹಿತಿ ಮತ್ತೊಬ್ಬರಿಲ್ಲ. ನಾವು ಹುಡುಗಿಯರೇ ಹೀಗೆ ಎಂದು ಉತ್ತರಿಸಿದರೆ ಅದೂ ಕರೆಕ್ಟ್ ಅಲ್ಲ. ಯಾಕೆಂದರೆ ಇಷ್ಟು ಕಾಫಿ ಉಸಿರಾಡುವ ಇನ್ನೊಬ್ಬ ಹುಡುಗಿಯನ್ನು ನಾವು ನೋಡಿಲ್ಲ.
ಕಾಫಿಯ ಜೊತೆ ಕವಡೆಯಾಟಕ್ಕೂ ಕೂತುಬಿಡುವಷ್ಟು ಉತ್ಸಾಹ ಪ್ರತಿಭಾಗಿದೆ. ಅವರು ಎಷ್ಟು ಕಾಫಿ ಕುಡಿದಿದ್ದಾರೆ ಎಂದು ಯಾರೂ ಪುರಾವೆಗಳನ್ನು ಕೇಳುವ ಹಾಗೇ ಇಲ್ಲ. ಕಾಫಿಯೇ ಪ್ರತಿಭಾಗೆ ಮುನ್ನುಡಿ ಬೆನ್ನುಡಿ ಎಲ್ಲಾ ಎನ್ನುವ ಹಾಗೆ ಅದನ್ನು ಹಚ್ಚಿಕೊಂಡಿದ್ದಾರೆ.
ಇದೇ 16 ರಂದು ಸೋಮವಾರ ಪುಟ್ಟೇನಹಳ್ಳಿಯ ಬ್ರಿಗೆಡ್ ಮಿಲೇನಿಯಂ ಎದುರು ಇರುವ ಆದಿತ್ಯ ಕೆಫೆಯಲ್ಲಿ ಅವರು ಕಾಫಿ ಥೀಮ್ ಇಟ್ಟುಕೊಂಡು ನಡೆಸಲಿರುವ ವಿಶಿಷ್ಟ ಪ್ರಯೋಗ ಜರುಗಲಿದೆ. ಬನ್ನಿ ಎನ್ನುತ್ತಾ ಪ್ರತಿಭಾ ನಂದಕುಮಾರ್ ಎನ್ನುವ ಹುಡುಗಿಗೆ ಈ ಆಲ್ಬಂ ..




















ನನಗೆ ಮೊದಲಿಂದಲೂ ಚಹಾ ಅಂದರೆ ಇಷ್ಟ. ಚಹದ ವೈವಿಧ್ಯತೆಯನ್ನು ನನಗೆ ಕಾಫಿಯಲ್ಲಿ ಕಾಣಲು ಸಾಧ್ಯವಾಗಿಲ್ಲ. ಇಷ್ಟಕ್ಕೂ ಕಾಫಿ ಎನ್ನೋದು ಮೇಲಂತಸ್ತಿನ ಜನರ ಪೇಯ. ಚಹಾ ಸದಾ ಜನ ಸಾಮಾನ್ಯರ ಪೇಯ. ಚಹದ ಸಾಮಾನ್ಯತೆ ನನಗೆ ಸದಾ ಇಷ್ಟ.
ಬಿ. ಎಂ. ಬಶೀರ್
lovely collection of coffee…