ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಪೊನ್ನಾಚಿ ಕವಿತೆ – ಅವಳು ಸಿಕ್ಕಾಗ…

ಪ್ರಕಾಶ್ ಪೊನ್ನಾಚಿ

ಚರ್ಚ್ ಸ್ಟ್ರೀಟಿನಲಿ ಅವಳು ಸಿಕ್ಕಿದ್ದಳು
ಥೇಟು ಅದೇ ಮುಖ
ಎಂದೋ ಪ್ರೀತಿಸಿದ್ದಕ್ಕೆ ಪುರಾವೆ ಇದೆ
ಈಗಲೂ ಬದಲಾಗಿಲ್ಲ
ಪ್ರೇಮಕ್ಕೆ ಸಾವಿಲ್ಲ ನೋಡು ಅಂದಳು

ನನಗಾಗಿ ತೆಗೆದಿಟ್ಟ ಗ್ರೀಟಿಂಗ್ ಕಾರ್ಡುಗಳು
ಬರೆದ ಅರ್ಧಪ್ರೇಮಪತ್ರಗಳು
ಖರೀದಿಸಿದ ಜೋಡಿ ಗೊಂಬೆಗಳು
ಎಲ್ಲವನ್ನೂ ಕಾಪಿಟ್ಟಿದ್ದಾಳೆ
ಖುದ್ದು ನೀಡಲು ಭಯ ಕಾಡಿ

ಟೆರೇಸಿನಲಿ ಕೂತು
ಸೂರ್ಯ ಮುಳುಗುವ ಹೊತ್ತಾಯಿತು
‘ವಾಟ್ ಈಸ್ ಯುವರ್ ಒಪಿನಿಯನ್’
ಸಂದೇಶ ರವಾನಿಸುತ್ತಾಳೆ
ಅವಳಿಗೆ ಮೊದಲಿದ್ದ ಭಯ
ಈಗಿಲ್ಲವೆನಿಸುತ್ತದೆ

ನನಗೂ ವಯಸ್ಸಾಗಿದೆ
ಗಡ್ಡ ನರೆತಿದೆ
ಪ್ರೇಮಿಸುತ್ತೇನೆ ಎನ್ನಲು
ಮಗಳು ನಿಂತಿದ್ದಾಳೆ ಹುಚ್ಚಿ
ಇದೆಂಥ ಪ್ರೇಮ ಬದಲಾಗದ್ದು ಎಂದೆ
ನಿಶಬ್ಧವಾಗುತ್ತಾಳೆ

ಒಂದು ಭೇಟಿಗೆ ಹಂಬಲಿತ್ತೇನೆ
ಎನ್ನುತ್ತಾಳೆ
ಹೋಗಲಿ ಹುಚ್ಚುಹುಡುಗಿ ಎಂದು
ಹೊರಟು ನಿಂತರೆ
ಅಪ್ಪಾ ನಾನೂ ಎಂದು
ಮಗ ಬೆನ್ನು ಬೀಳುತ್ತಾನೆ

ಈಗ

ಒಂದು ಪ್ರೇಮವನ್ನು ಅನುಭವಿಸದ
ನೀನೆಂತ ಕವಿ ಎಂದು
ಮುಖ ಸಿಂಡರಿಸಿ
ಹೋಗೋ ನಿರ್ಭಾವುಕ ಎಂದು
ತಿರುಗದೆ ಹೊರಡುತ್ತಾಳೆ
ನೀವೇ ಹೇಳಿ
ಪ್ರೇಮಕ್ಕೆ ಅದೆಷ್ಟು ಮಜಲು?

‍ಲೇಖಕರು avadhi

22 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading