ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಕೊಡಗನೂರ್ ಎರಡು ಹೊಸ ಕವಿತೆಗಳು

ಪ್ರಕಾಶ್ ಕೊಡಗನೂರ್

**

ಮೆರೆವ ವಿರಹದ ನಡುವೆ

ವಿರಹದ
ಕಡಲಾರ್ಭಟದಲಿ
ತರಗೆಲೆ ನಾನು!

ವಿರಹದ
ಸಿಡಿಲಾಗ್ನಿಯಲಿ
ಕೆಂಡದುಂಡೆ ನಾನು!

ವಿರಹದ
ಬಿರುಗಾಳಿಯಲಿ
ಧೂಳು ನಾನು!

ವಿರಹದ
ಕ್ಷಾಮದಲಿ
ಹುಲ್ಲುಕಡ್ಡಿ ನಾನು!

ವಿರಹದ
ಭೂಕಂಪದಲಿ
ಒಡೆದ ನೆಲ ನಾನು!

ವಿರಹದ
ಕಾಳರಾತ್ರಿಯಲಿ
ಕುರುಡ ನಾನು!

ಪರಿಪರಿಯ ಪರಾಕ್ರಮ
ವಿರಹ ಮೆರೆದಿರಲು
ತಡೆಯಲೆಂತು ನಾನು
ಸನಿಹ ಬಾರದೆ ಅವಳು!?

ನಂಬಿಕೆಯು ನನಗೆ
ಕಾರುಣ್ಯ ಅವಳಿಗೆ
ಮರಳಿ ಬರುವಳು
ಮತ್ತೆ ಹಿಂದಿನಂತೆ!

ಓ ಜವರಾಯ
ತಾಳು ಸಲುಪ
ಪ್ರೀತಿಯ ಇನ್ನಷ್ಟು
ಉಣುವ ತನಕ!

**

ನೋಟ

ಬರಿ ಹೆಣ್ಣಲ್ಲ
ಅವಳು ನನಗೆ;
ದಿವ್ಯಚೇತನ!

ಬರಿ ಹೆಣ್ಣಲ್ಲ
ಅವಳು ನನಗೆ;
ಅಪೂರ್ವ ಕಲಾಕೃತಿ!

ಬರಿ ಹೆಣ್ಣಲ್ಲ
ಅವಳು ನನಗೆ;
ಭವದ ಬೆರಗು!

ಬರಿ ಹೆಣ್ಣಲ್ಲ
ಅವಳು ನನಗೆ;
ಸ್ನೇಹದ ಕಡಲು!

ಬರಿ ಹೆಣ್ಣಲ್ಲ
ಅವಳು ನನಗೆ;
ತಾಯ ಮಡಿಲು!

ಬರಿ ಹೆಣ್ಣಲ್ಲ
ಅವಳು ನನಗೆ;
ಸಂತಸದ ಹೊನಲು!

ಬರಿ ಹೆಣ್ಣಲ್ಲ
ಅವಳು ನನಗೆ;
ಭರವಸೆಯ ಬೆಳಕು!

ಬರಿ ಹೆಣ್ಣಲ್ಲ
ಅವಳು ನನಗೆ;
ಬಾಳಿನ ಸೊಬಗು!

‍ಲೇಖಕರು Admin MM

2 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading