ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರ್ಣಿಮಾ ಮಾಳಗಿಮನಿ ಕವಿತೆ – ಮಂಜು ಬಿದ್ದದ್ದು…

ಪೂರ್ಣಿಮಾ ಮಾಳಗಿಮನಿ

ಮಂಜು ಮಂಜಾದ ದಾರಿಯಲ್ಲಿ
ಇದಿರಾಗುವವರ
ಮುಖಗಳು ರಂಗೋಲಿ ಹೊದ್ದು
ಗುರುತಿಸಿದೆನೆಂದು ಮೆರೆಯುವಷ್ಟು
ಗುರುತಿಸಲಾಗದೆ ಮರುಗುವಷ್ಟು
ಬೆಳಕು ಎಲ್ಲಿದೆ?


ಕೇಳಬೇಡ ನನ್ನ ಹೆಸರು,
ಹೇಳಬೇಡ ನಿನ್ನ ಊರು
ನೆನಪಲುಳಿವ ವಿವರಗಳ
ಹುಟ್ಟಿಸಬೇಕಿದೆ ಸಿಕ್ಕಷ್ಟೇ ಸಖ್ಯದಲ್ಲಿ
ಕಾಲೂರಿದರೆ ಜಾರಬಹುದು!
ಹೆಜ್ಜೆಗಳ ವಜ್ಜೆ
ಹೆಚ್ಚುವ ಮುನ್ನ,
ಬೆಚ್ಚಗೆ ಅಪ್ಪಿಕೊಳ್ಳುವ ಬಾ
ಮುಂದಿನ ತಿರುವಿನಲ್ಲಿ
ಮತ್ತಾರೋ ಕಾದಿರಬಹುದು,
ನಾವು ವಿನಿಮಯಿಸಿಕೊಂಡ
ಒಡಲ ಒಡಿಗಾಗಿ,
ಕಪೋಲಗಳ ಕೆಂಪಿಗಾಗಿ!

‍ಲೇಖಕರು avadhi

23 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading