ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರ್ಣಿಮಾ ಮಾಳಗಿಮನಿ ಕವಿತೆ- ನಾನು…

ಪೂರ್ಣಿಮಾ ಮಾಳಗಿಮನಿ

ರಸ್ತೆ ಬದಿಯ ಅಂಗಡಿ ಮುಂದೆ
ಖಾಲಿ ಟ್ಯಾಂಕ್ ಬೈಕ್ ಮೇಲೆ ಕುಳಿತು
ಬೈಟು ಟೀ ಹೇಳಿ,
ಜೇಬಿನಲ್ಲಿರುವ ಕೊನೆಯ ಸಿಗರೇಟ್ ಅನ್ನು
ಪದೇ ಪದೇ ಮುಟ್ಟಿಕೊಳ್ಳುತ್ತಾ,
ಒರಟು ಬೆರಳುಗಳಿಂದ
ಕೆದರಿದ ಕೂದಲ ಸುರುಳಿ ಸುತ್ತಿಸುತ್ತಾ,
ಪರಮ ಸೋಮಾರಿ
ಪ್ರಾಣ ಸ್ನೇಹಿತನಿಗೆ ಕಾಯುತ್ತಿರುವವನ ಬಳಿ
ನಿನ್ನ ನಿಷ್ಟೆಯ ಬಗ್ಗೆ
ಚಾಡಿ ಹೇಳಬೇಕೆಂದು ಕೊಳ್ಳುವವಳು!

ಖಾಲಿ ಬಸ್ ಹತ್ತಿ
ಕಿಟಕಿ ಹೊರಗೆ ನೋಡುತ್ತ
ಒಂದೂ ಸಾಲು ಗೊತ್ತಿರದ
ಹಾಡನ್ನು ಗುನುಗುತ್ತ
ಕುಳಿತ ಅಪರಿಚಿತನ
ಕಣ್ಣಂಚಿನಲ್ಲಿ
ಹೊಸ ಪದಗಳ ಹುಡುಕುವವಳು!

ನಡು ರಾತ್ರಿಯಲ್ಲಿ
ತಾನುರಿದು ಬೀಳುವ ವೈಭವವನ್ನು
ಒಬ್ಬರೂ ನೋಡಲಿಲ್ಲವೆಂದು
ಮುನಿಸಿಕೊಂಡು ಬಿದ್ದ ಒಂದು ನಕ್ಷತ್ರವನ್ನು
ಹುಡುಕಿ ಸಂತೈಸಲು
ನಿಗಿ ನಿಗಿ ಕೆಂಡವನ್ನು
ಕಣ್ಣುಗಳ ಹರಿದ ಸೆರಗಿನಲ್ಲಿ
ಬಚ್ಚಿಟ್ಟುಕೊಂಡು
ಹೊರಟುಬಿಟ್ಟವಳು!

ನನಗೆ ಹೆಸರಿಡುವ ದರ್ದು ನಿನಗೆ ಬೇಡ!

‍ಲೇಖಕರು Admin

7 December, 2022

1 Comment

  1. ಶೋಭಾ ಹೆಗಡೆ

    ಅದ್ಭುತವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading